ಕಲಬುರಗಿ: ಜೀವನದಲ್ಲಿ ಮನಸ್ಸು ಕಲ್ಲಿನಂತೆ ಗಟ್ಟಿಯಾದಗಲೆ ಕಲ್ಪನೆಗೂ ಮೀರಿ ಸಾಧಿಸಲು ಸಾಧ್ಯ ಎಂದು ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.
ನಗರದ ಅಳಂದ ರಸ್ತೆಯ ಕಲಶೆಟ್ಟಿ ಸಭಾಭವನದಲ್ಲಿ ಬಾರಾಗಲ್ಲಿ ಗೆಳೆಯರ ಬಳಗದ ವತಿಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ “ಕೃಷಿ ವ್ಯವಹಾರ ನಿರ್ವಹಣೆ” ವಿಷಯದಲ್ಲಿ ಪಿಎಚ್ ಡಿ ಪಡೆದ ಹಾಗೂ ಬಂಗಾರ ಪದಕ ಪಡೆದ ಚೈತ್ರಾ ಜಗನ್ನಾಥ ಹಾರಕುಡೆ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ನೋವುಗಳ ನಡುವೆ ನೆಮ್ಮದಿ, ನಿರಾಶೆಗಳ ನಡುವೆ ಭರವಸೆಯೊಂದಿಗೆ ಜೀವನ ಸಾಗಿಸಿದಾಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಸತತ ಪರಿಶ್ರಮದಿಂದ ಕಾಯಕ ಮಾಡಿದರೆ ಉನ್ನತ ಶಿಖರಕ್ಕೆ ಏರಬಹುದು. ಸಾಧನೆ ಮಾಡಿ ಬಂಗಾರ ಪದಕ ಪಡೆದ ಶ್ರೀಮತಿ ಚೈತ್ರಾ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದರ್ಶ ಪ್ರಾಯವಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಸನ್ಮಾನ ಸ್ವೀಕರಿಸಿ ಚೈತ್ರಾ ಜಗನ್ನಾಥ ಹಾರಕೂಡೆ ಮಾತನಾಡುತ್ತಾ ಬಳಸಿಕೊಂಡವರನ್ನು ಮರೆತು ಬಿಡಬೇಕು ಆದರೆ ಬೆಳೆಸಿದವರನ್ನು ಯಾವತ್ತು ಮರೆಯಬಾರದು. ಜನ್ಮ ಕೊಟ್ಟ ತಾಯಿ ತಂದೆಯೆ ನನ್ನ ಸಾಧನೆಗೆ ದಾರಿದೀಪವಾಗಿದ್ದಾರೆ. ಜೀವನ ಇರುವವರೆಗೂ ಅವರ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ ಅವರೆ ನಡೆದಾಡುವ ದೇವರು. ಹಿರಿಯರು ಮನೆಯೊಳಗಿದ್ದರೆ ನಾವು ಸಾಧಿಸಬೇಕೆನ್ನುವ ಆತ್ಮ ಬಲ ಹೆಚ್ಚಿಸುತ್ತದೆ ಅವರಿಗೆ ಗೌರವದಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಾಂತ ವಾಲಿ, , ಸುನಿಲ ಕೊರಳ್ಳಿ, ವಿಜಯಲಕ್ಷ್ಮಿ ವಾಲಿ, ಕುಪೇಂದ್ರ ಬಿರಾದಾರ,ರಾಜಶೇಖರ ವಾಲಿ, ಅರುಣಕೂಮಾರ ಬೆಳಮಗಿ, ಸೌಮ್ಯಶ್ರೀ ಕೊರಳಿ, ಸಿದ್ದಮ್ಮ ಬೆಳಮಗಿ, ಶರಣರಾಜ ಛಪ್ಪರಬಂದಿ, ನಂದೀಶ್ವರ ಜೆ ಪಾಟೀಲ, ಕರಬಸಪ್ಪ ಮೂಲಗೆ, ನಿಂಗಮ್ಮ ಹಾರಕೂಡೆ, ಚನ್ನಬಸವ ಬೆಳಮಗಿ, ಸಂಗೀತಾ ಬೆಳಮಗಿ, ಮಹೇಶ, ಶಶಿಧರ, ಮುಕ್ತಾ ಪಾಟೀಲ, ಬಸವರಾಜ ಕೊರಳಿ, ಶಾಂತಾ ಕೊರಳಿ, ಗುಂಡಪ್ಪ ಘಂಟಿ, ಶಿವಪ್ಪ ಪಾಟೀಲ, ಪಂಚಪ್ಪ ಜಗ ಸಕ್ಕರೆ, ಅಶೋಕ ಹಡಪದ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.