ಕಲಬುರಗಿ: ವಾರ್ಡ್ ನಂ.44.ರ ವಿದ್ಯಾನಗರ ಬಡಾವಣೆಯಲ್ಲಿ ಸದ್ಗುರು ಶ್ರೀ ಸಾಯಿ ಸೇವಾ ಸಂಘ ವತಿಯಿಂದ ಹಾಗೂ ಶಾಸಕರ 5.ಲಕ್ಷ.ರೂ.ವೆಚ್ಚದ ಅನುದಾನದಲ್ಲಿ ಶ್ರೀಸಾಯಿ ಮಂದಿರ, ಶ್ರೀ ಲಕ್ಷ್ಮೀ ಮಂದಿರ ಮತ್ತು ಹನುಮಾನ ಮಂದಿರಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಪಾಲಿಕೆ ಸದಸ್ಯ ಸಚೀನ ಶಿರವಾಳ ಚಾಲನೆ ನೀಡಿದರು.
ದಕ್ಷಿಣ ಗ್ರಾಮೀಣ ಸಮಿತಿ ಅಧ್ಯಕ್ಷ ಲಿಂಗರಾಜ ಕಣ್ಣಿ, ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ, ಚಂದ್ರಶೇಖರ ಕಕೇರಿ, ಶಿವಶಂಕರಪ್ಪ ಗುರುಗುಂಟಿ, ರಾಜೇಂದ್ರ ಚಿಂಚೋಳಿಕರ್, ನಾರಾಯಣ, ಕುಶಾಲ ಚಿಂಚೋಳಿಕರ್, ಕಾಶಿನಾಥ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.