ಏಕಾಗ್ರತೆಗಾಗಿ ಮನಸ್ಸನ್ನು ತರಬೇತಿಗೊಳಿಸುವುದು ಅತ್ಯಂತ ಮಹತ್ವದ ಕೆಲಸ: ಮನೋತಜ್ಞ ಭುಜಬಲಿ

0
46

ಕಲಬುರಗಿ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಲು ಮನಸ್ಸನ್ನು ಸರಿಯಾದ ದಾರಿಯಲ್ಲಿ ಯಶಸ್ಸಿಗಾಗಿ ತರಬೇತಿಗೊಳಿಸುವುದು ಅತ್ಯಂತ ಮಹತ್ವದ ಕೆಲಸಗಳಲ್ಲಿ ಒಂದಾಗಿದೆ ಎಂದು ಬೆಂಗಳೂರಿನ ಖ್ಯಾತ ಮನೋತಜ್ಞ, ಹ್ಯಾಪಿನೆಸ್ ಎಂಜಿನಿಯರ್ ತರಬೇತುದಾರರಾದ ಶ್ರೀ.ಭುಜಬಲಿ ಬೋಗಾರ ಹೇಳಿದರು.

ನಿನ್ನೆ ನಗರದ ಚಂದ್ರಕಾಂತ ಪಾಟೀಲ್ ಮೆಮೊರಿಯಲ್ ಪಿಯು ಕಾಲೇಜಿನಲ್ಲಿ ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್‌ಫಾರ್ಮೊ ಇನ್‌ಕಾರ್ಪ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಯಶಸ್ಸಿನ ರಹಸ್ಯ ಸೂತ್ರಗಳು ಎಂಬ ವಿಶೇಷ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪರಿಶುದ್ಧ ಆಲೋಚನೆಗಳು ನಮ್ಮ ಸುಪ್ತಮನಸ್ಸನ್ನು ವ್ಯವಸ್ಥಿತವಾಗಿಡಲು ಮತ್ತು ಮೆದುಳನ್ನು ಶಾಂತವಾಗಿಡಲು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಹಸಿವಾದಾಗ ಮಾತ್ರ ಆಹಾರ ಸೇವಿಸಬೇಕು, ಆಹಾರವನ್ನು ಸಮಾಧಾನ ಮನಸ್ಸಿನಿಂದ ಚೆನ್ನಾಗಿ ಅಗಿದು ತಿನ್ನಬೇಕು, ಹಸಿವಿಗೆ ತಕ್ಕಂತೆ ಅಗತ್ಯವಿದ್ದಷ್ಟು ಮಾತ್ರ ಆಹಾರ ಸೇವಿಸಬೇಕು ಇದರಿಂದ ಮನಸ್ಸು ಜಾಗೃತ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮನೋತಜ್ಞ ಭುಜಬಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ವೃದ್ಧಿಸಲು ಹಾಗೂ ಅವರಲ್ಲಿರುವ ಕೀಳರಿಮೆಯನ್ನು ಕಡಿಮೆ ಮಾಡಲು ಸುಪ್ತಮನಸ್ಸನ್ನು ರಿಪ್ರೋಗ್ರಾಮ್ ಮಾಡುವ ತಂತ್ರಗಳನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂನ ವ್ಯಕ್ತಿಗಳಾಗಿ – ಬೆಂಗಳೂರಿನ ಎನ್.ಎಲ್.ಪಿ ಮನೋತಜ್ಞ ಭುಜಬಲಿ ಬೋಗಾರ, ಮೌನಯೋಗಿ ಫೌಡೇಶನ್‌ನ ಶ್ರಾವಣಯೋಗಿ ಹಿರೇಮಠ, ಚಂದ್ರಕಾಂತ ಪಾಟೀಲ್ ಮೆಮೊರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಜಿ.ಮಂಜುನಾಥ, ಉಪನ್ಯಾಸಕರಾದ ವಿಕಾಸ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here