ಶರಣಬಸವೇಶ್ವರ ಸಂಸ್ಥಾನದಲ್ಲಿ ವಿಜೃಂಭಿಸಿದ, ಭಕ್ತಿ, ಪ್ರಸಾದ, ಅನುಭಾವ, ಸಾಹಿತ್ಯದ ದಾಸೋಹ

0
45

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನವು 200 ವರ್ಷಗಳಿಂದಲೂ ನಿರಂತರವಾಗಿ ಭಕ್ತಿ, ಪ್ರಸಾದ, ಅನುಭಾವ ದಾಸೋಹವನ್ನು ನಡೆಸುತ್ತಲೇ ಬಂದಿದೆ.  ಶ್ರಾವಣಮಾಸ ತಿಂಗಳಿನಲ್ಲಂತೂ ಇದು ಇಮ್ಮಡಿಗೊಂಡಿರುತ್ತದೆ. ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ತಮ್ಮ ತ್ರಿಕಾಲ ಪೂಜೆಯೊಂದಿಗೆ ಪ್ರಸಾದ ಮತ್ತು ಅನುಭಾವ ಗೋಷ್ಠಿಗಳನ್ನು ಭಕ್ತಿ ಮತ್ತು ಗೌರವದಿಂದ ನಡೆಸುತ್ತಿದ್ದಾರೆ.

ಈ ವರ್ಷದ ಪವಿತ್ರ ಶ್ರಾವಣ ಮಾಸ ತಿಂಗಳಿನಲ್ಲಿ ಲಕ್ಷ-ಲಕ್ಷ ಜನರು ಅತ್ಯಂತ ಭಕ್ತಿಯಿಂದ ಶರಣಬಸವರ ದರ್ಶನ ಮಾಡಿಕೊಂಡು ಮಹಾಮನೆಯ ದರ್ಶನ ಮಂಟಪದಲ್ಲಿ ವಿರಾಜಮಾನರಾದ ಪರಮಪೂಜ್ಯ ಡಾ|| ಶರಣಬಸವಪ್ಪ ಅಪ್ಪ ಅವರ ದರ್ಶನಗೈದು, ದಾಸೋಹ ಮಹಾಮನೆಯಲ್ಲಿ ಪ್ರಸಾದ ಪಡೆಯುತ್ತಾರೆ.

Contact Your\'s Advertisement; 9902492681

ರಂತರವಾಗಿ ಮುಂಜಾನೆಯಿಂದ ರಾತ್ರಿ 11 ಗಂಟೆಯವರೆಗೂ ನಡೆಯುವ ಪ್ರಸಾದ ದಾಸೋಹದಲ್ಲಿ ಜನರು ಜಾತಿ, ಮತ, ಪಂಥ, ಬಡವ ಶ್ರೀಮಂತಿಕೆಯ ಭಾವನೆ ಇಲ್ಲದೆ ಎಲ್ಲರೂ ಒಂದಾಗಿ ಬಹಳ ಭಕ್ತಿಯಿಂದ ಪ್ರಸಾದ ಪಡೆಯುತ್ತಾರೆ.

ಹಾಗೇ ಪಡೆಯುವದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆಂಬ ಬಲವಾದ ನಂಬಿಕೆ ಅವರಲ್ಲಿದೆ. ಸಾಯಂಕಾಲ ಮಹಾದಾಸೋಹಿ ಶರಣಬಸವರ ಪುರಾಣ, ಪ್ರವಚನ, ಅವರ ಶಿವಲೀಲೆಗಳ ಉಪನ್ಯಾಸ ಮತ್ತು ಭಜನಿ ಕಾರ್ಯಕ್ರಮ ದಿನಾಲು ನಡೆಯುವದರಿಂದ ಇಡೀ ವಾತಾವರಣದಲ್ಲಿ ಭಕ್ತಿಯು ಝೇಂಕಾರಗೈಯುತ್ತದೆ.  ಭಾವನೆಗಳು ಶುದ್ಧಗೊಳ್ಳುತ್ತವೆ, ಮನಸ್ಸು ನಿರ್ಮಲಗೊಳ್ಳುತ್ತದೆ.

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here