ನೀರಿನ ಸಮಸ್ಯೆ ನಿವಾರಣೆಗೆ ಅಂತರ್ಜಲ ಪುನಶ್ಛೇತನವೇ ಮದ್ದು

0
12

ಆಳಂದ: ಪ್ರತಿರ್ಷ ಮಳೆಯ ಏರುಪೇರಾಗುವ ನಡುವೆ ಪಾತಾಳಕ್ಕೆ ಕುಸಿಯುತ್ತಿರುವ ಅಂತರ್ಜಲದಿಂದ ಜನ ಜಾನುವಾರು ಎದುರಿಸುವ ನೀರಿನ ಆಹಾಕಾರವನ್ನು ತಪ್ಪಿಸಲು ಅಂತರ್ಜಲ ಮರುಬಳಕೆ ಕಾರ್ಯಕ್ಕೆ ವಿಜ್ಞಾನಿಗಳು ಹಲವು ವರ್ಷಗಳಿಂದ ಮೌಖಿಕ ಮತ್ತು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಾ ಬಂದರು ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರ ಅಥವಾ ಖಾಸಗಿ ವಲಯದಿಂದಲೂ ಅಂತರ್ಜಲ ಮರುಪೋರಣ ಕಾರ್ಯ ನಡೆಯದೆ ಇರುವುದು ವಿಪರ್ಯಾಸವಾಗಿದೆ.

ವರ್ಷ ಕಳೆದಂತೆ ಆಳಂದ ಸೇರಿದಂತೆ ಕಲಬುರಗಿ ಜಿಲ್ಲೆಯ ಹಲವಡೆ ಪಾತಾಳಕ್ಕೆ ಕುಸಿಯುತ್ತಿರುವ ಅಂತರ್ಜಲ ಸಂಪನ್ಮೂಲ ಹೆಚ್ಚಿಸಲು ಹೊಸ ಕೊಳವೆ ಬಾವಿ ಬದಲು ಇರುವ ಕೊಳವೆಬಾವಿಗಳನ್ನು ಜಲಮರುಪೂರಕ ಮಾಡಿ ನಮ್ಮ ಕೃಷಿ ಮತ್ತು ಪರಿಸರ ಉಳಿಯಲು ಕೊಳವೆ ಬಾವಿಗಳ ಮೂಲಕ ಅಂತರ್ಜಲ ಮರುಪೂರ್ಣ ಕಾರ್ಯಕ್ಕೆ ಸÀರ್ಕಾರ ಗಂಭೀರವಾಗಿ ಪರಿಗಣಿಸಿ ಕಾರ್ಯನ್ನೂಖವಾಗುವುದು ಎಂಬುದು ಕಾದು ನೋಡುವಂತೆ ಮಾಡಿದೆ.

Contact Your\'s Advertisement; 9902492681

ರಾಜ್ಯದ ಹೆಚ್ಚಿನ ಪ್ರದೇಶಗಳು ಮಳೆ ಆಧರಿತ ಪ್ರದೇಶಗಳಾಗಿದ್ದು, ಸೀಮಿತ ಅಂತರ್ಜಲ ಸಂಪನ್ಮೂಲವನ್ನು ಹೊಂದಿರುತ್ತದೆ. ಜನಸಂಖ್ಯೇ ಹೆಚ್ಚಳ, ನಗರೀಕರಣ, ಕೈಗಾರೀಕರಣ ಮತ್ತು ವರಮಾನದ ಹೆಚ್ಚಳಗಳಿಂದಾಗಿ ಅಂತರ್ಜಲ ಬಹು ಬೇಡಿಕೆಯ ಸಂಪನ್ಮೂಲ ಉಳಿಸಿ ಬೆಳಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ತಜ್ಞರು ವಾದಿಸತೊಡಗಿದ್ದಾರೆ.

ಅಂತರ್ಜಲ ಸಂಪನ್ಮೊಲದ ಅಭಿವೃದ್ದಿ ಮತ್ತು ನಿರ್ವಹಣೆಯನ್ನು ಕೈಗೊಳ್ಳದಿದ್ದಲ್ಲಿ ಲಬ್ಯತೇಯಕ್ಷೀಣವಾಗುವ ಸಂಭವವು ಹೆಚ್ಚಿಸುತ್ತದೆ. ರಾಜ್ಯದ ಜಿಲ್ಲಾವಾರು ಅಂತರ್ಜಲ ಸಂಪನ್ಮೊಲದಲಬ್ಯತೆ ಬಳಕೆ ಮತ್ತು ಅಂತರ್ಜಲ ಅಭಿವೃದ್ದಿ ಪ್ರಮಾಣದ 2011 ಪ್ರಕಾರ ಕೇವಲ ಯಾದಗಿರಿ ಜಿಲ್ಲೆಯವೊಂದಲ್ಲೇ ವಾರ್ಷಿಕ ಅಂತರ್ಜಲ ಲಭ್ಯತೆ 38049.78ಹೆ. ಮೀ.ಇದ್ದು, ಪ್ರಸ್ತುತ 9050.63ಹೆ. ಮೀ.ರಷ್ಟು ನೀರಾವರಿಗಾಗಿ ಬಳಕೆಯಾಗುತ್ತಿದೆ ಅಂದರೆ, ಪ್ರಸ್ತುತ ಅಂತರ್ಜಲ ಅಭಿವೃದ್ದಿ ಹಂತ ಮಾತ್ರ ಕೇವಲ ಶೇ.28 ರಷ್ಟು ಇದೆ. ಯಾದಗಿರಿ ಜಿಲ್ಲೆಯಲ್ಲಿ 3042 ರಷ್ಟುತೆರೆದ ಮತ್ತು 5445 ರಷ್ಟುಕೊಳವೆ ಬಾವಿಗಳು ಇದ್ದು,ಇದರಲ್ಲಿ ಶೇಕಡ 55%ರಷ್ಟುಬಾವಿಗಳು ಭತ್ತಿಹೋಗಿವೆ, ಆದ್ದರಿಂದ ಜಿಲ್ಲೆಯ ರೈತರು ವೈಜ್ಞಾನಿಕವಾಗಿ ಅಂತರ್ಜಲದ ಮರುಪೂರ್ಣವನ್ನು ಮತ್ತು ಸಮರ್ಪಕ ನಿರ್ವಹಣೆಯನ್ನುಕೈಗೊಂಡು ಬತ್ತುತ್ತಿರುವ ಬಾವಿ ಹಾಗೂ ಕೊಳವೆ ಬಾವಿ ಪುನರುಜ್ಜೀವನ ಮಾಡುವುದು ಇಂದಿನ ತುರ್ತು ಅಗತ್ಯವಾಗಿದ ಎಂದು ತಜ್ಞರು ಹೇಳುತ್ತಾರೆ.

ಕೊಳವೆ ಬಾವಿಗಳ ಜಲಮರುಪೂರಕ ವಿಧಾನ:

  • ಕೊಳವೆಬಾವಿ ಸಂಪೂರ್ಣವಾಗಿ ಬತ್ತಿಹೋಗಿದ್ದರೆ ಅಥವಾ ಅಲ್ಪ ಮಟ್ಟಿಗೆ ನೀರು ಬರುತ್ತಿದ್ದರೆ ಈ ನೂತನ ವಿಧಾನವನ್ನು ಅಳವಡಿಸಿಕೊಳ್ಳಬಹುದು ಮತ್ತು ಫಲಿತಾಂಶವನ್ನು ಪಡೆಯಬಹುದು. ಮೊದಲು ನೀರಿನ ಆಳವನ್ನು ಅಳೆಯುವುದು. ಟ್ಯಾಂಕರ್‍ನಿಂದ ಬೋರಿನೊಳಗೆ ನೀರನ್ನು ಹರಿಸುವುದು. ನೀರು ಸತತವಾಗಿ ಬೋರಿನಲ್ಲಿ ಹರಿಯುತ್ತಾ ಹೋದರೆ ಆ ಕೊಳವೆಬಾವಿ ಮರುಪೂರಕ ಮಾಡುಲು ಯೋಗ್ಯವಾಗಿರುತ್ತದೆ. ನೀರುತುಂಬಿ ಹೊರ ಚೆಲ್ಲಿದರೆ ಅದು ಜಲಮರುಪೂಣಕ್ಕೆ ಯೋಗ್ಯವಲ್ಲ.
  • • ಕೊಳವೆಬಾವಿ ಸುತ್ತಾ 10 ಅಡಿ ಉದ್ದ, 10 ಅಡಿ ಅಗಲ, ಮತ್ತು 10 ಅಡಿ ಆಳದ ಗುಂಡಿತೋಡಬೇಕು.
  • • ಕೇಸಿಂಗ್ ಪೈಪ್‍ನ 6 ಅಡಿಗಳ ಎತ್ತರದವರೆಗೆ 2 ಮಿ.ಮಿ ಅಗಲ ಮತ್ತು 15 ಮಿ.ಮಿ ಉದ್ದದರಂಧ್ರಗಳನ್ನು ಮಾಡಿ. ನಂತರ 6 ಅಡಿಗಳವರೆಗೆ ದೊಡ್ಡ ಕಲ್ಲುಗಳನ್ನು ತುಂಬಿ ಅದರ ಮೇಲೆ 1 ಅಡಿಯವರೆಗೆ ದಪ್ಪಜಲ್ಲಿ ಮತ್ತು ಚಿಕ್ಕ ಜಲ್ಲಿತುಂಬುವುದು.
  • • ಕೊಳವೆಬಾವಿ ನೀರನ್ನು ಕುಡಿಯಲು ಉಪಯೋಗಿಸುವುದಾದರೆ 1 ಅಡಿ ಇದ್ದಿಲು ಅರಡಿ.
  • • ಕೇವಲ ನೀರಾವರಿಗೆ ಮಾತ್ರ ನೀರು ಬಳಕೆಯಾದಲ್ಲಿ ಇದ್ದಿಲು ಅವಶ್ಯವಿಲ್ಲ.
  • • ಇದ್ದಿಲು ಪದರದ ಮೇಲೆ ನೈಲಾನ್ ಹಾಳೆಯನ್ನು ಹರಡಿ ಇಲ್ಲವಾದಲ್ಲಿ ಮಣ್ಣು ಅಥವಾ ಮರಳಿನ ಕಣಗಳು ಕೆಳ ಪದರದಲ್ಲಿ ಸೇರಿ ನೀರು ಹಿಂಗುವಿಕೆಗೆ ತೊಂದರೆಯಾವುದು.
  • • ನೈಲಾನ್ ಪರದೆಯ ಮೇಲೆ 1 ಅಡಿ ದಪ್ಪ ಮರಳನ್ನು ತುಂಬಿರಿ.
  • • ಸುತ್ತಲೂ 2 ಅಡಿಗಳಷ್ಟು ಗೋಡೆಕಟ್ಟಿ ಮರಳು ಆಚೆ ಈಚೆ ಹೋಗದಂತೆ ನೋಡಿಕೊಳ್ಳಬೇಕು.
  • • ಮಳೆ ಬಂದಾಗ ನೀರು ಕೊಳವೆ ಜಾಗಕ್ಕೆ ಹರಿದು ಬರದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕೆ ತಗಲುವ ವೆಚ್ಚ ಕೇವಲ 30 ಸಾವಿರ ಮಾತ್ರ.
  • • 3 ವರ್ಷಗಳಿಗೊಮ್ಮೆ ಮರಳನ್ನು ಬದಲಿಸಲು 3 ಸಾವಿರ ಖರ್ಚು ಬರುವುದು ಮತ್ತು ಒಟ್ಟಾರೆ ಖರ್ಚು ರೈತರು ತೆಗಿಸುವ ಹೊಸ ಕೊಳವೆಬಾವಿ ಅರ್ಧದಷ್ಟಾಗುವುದು. ಕೊಳವೆಬಾವಿ ಪುನಶ್ಚೇತನದ ವಿವಿಧ ಹಂತಗಳನ್ನು ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.
    ಕೊಳವೆಬಾವಿ ಪುನಶ್ಚೇತನ ಸಮಯದಲ್ಲಿ ಕಲುಷಿತ ನೀರು ಮರುಪೂರ್ಣ ವ್ಯವಸಾಯವನ್ನು ಸೇರದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಾಸಾಯನಿಕ ಗೊಬ್ಬರಗಳಿಂದ ಅಥವಾ ರಾಸಾಯನಿಕ ತ್ಯಾಜ್ಯಗಳಿಂದ ಮಲೀನವಾದ ನೀರು ಅಂತರ್ಜಲ ಸೇರುತ್ತದೆ. ಅಂತರ್ಜಲ ಮರುಪೂರ್ಣ ವ್ಯವಸ್ಥೆಯ ಜೊತೆಗೆ ಶೋಧಕ ಗುಂಡಿಯನ್ನು ನಿರ್ಮಿಸುವುದು ಸೂಕ್ತವಾಗಿದೆ. ಕೊಳವೆಬಾವಿ ಪುನಶ್ಚೇತನದ ಜೊತೆಗೆರೈತರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದಲ್ಲಿ ಜಲ ಮರುಪೂರೈಕೆಗೆ ಹೆಚ್ಚಿನ ಅನುಕೂಲವಾಗುತ್ತದೆ. (ಸಣ್ಣ ನೀರಾವರಿ ಇಲಾಖೆ ಮೂಲಕ)
  • • ಭೂಮಿಯನ್ನು ಸಮತಟ್ಟಾಗಿರಿಸಿಕೊಳ್ಳುವುದು, ಇಳಿಜಾರು ಪ್ರದೇಶವಾದಲ್ಲಿ ಮೇಟ್ಟಿಲು ಮಟ್ಟವಾಗಿ ಪರಿವರ್ತಿಸುವುದು.
  • • ಬಹುಗಳ ಮೇಲಿನ ಪ್ರದೇಶದಲ್ಲಿ ಇಂಗು ಕಾಲುವೆ ನಿರ್ಮಾಣ.
  • • ಕಿರು ಕಾಲುವೆಗಳಲ್ಲಿ ಅಲ್ಲಲ್ಲಿಅಡತಡೆ ನಿರ್ಮಾಣ.
  • • ಬಹುಗಳ ಮೇಲೆ ಹುಲ್ಲುಅಥವಾಗಿಡ ಬೆಳೆಸುವುದು.
  • • ಹರಿಯುವ ನೀರಿಗೆ ಸಾಧ್ಯವಾದ ಕಡೆಗಳಲ್ಲಿ ಅಡ್ಡಗಟ್ಟಿ ನಿರ್ಮಾಣ.
  • • ತಗ್ಗು ಪ್ರದೇಶಕ್ಕೆ ನೀರು ಬಂದು ನಿಲ್ಲುವಂತೆ ಕಾಲುವೆ ನಿರ್ಮಾಣ.
  • • ಕೆರೆಗಳಲ್ಲಿ ಹೂಳು ತೆಗೆದು ನೀರು ಹೆಚ್ಚಾಗ ಶೇಖರಣೆಯಾಗಲು ಅನುಕೂಲ ಮಾಡುವುದು. ಸಾಧ್ಯವಾದಕಡೆ ಹಳ್ಳಗಳಿಗೆ ತಡೆಅಡೆ ಹಾಕುವುದು ಸೂಕ್ತವಾಗಲಿದೆ.

ಬರಪರಿಸ್ಥಿತಿಯಲ್ಲೂ ಸಮಸ್ಯೆ ನಿವಾರಣೆ: ಈ ದಿನಗಳಲ್ಲಿ ಅಂತರ್ಜಲ ಪುನಶ್ಚೇತನ ಅತ್ಯವಶಕವಾಗಿದ್ದು, ಹವಮಾನ ವೈಪರಿತ್ಯಯಿಂದ ಉಂಟಾಗುವ ಅನಿಶ್ಚಿತ ಪ್ರವಾಹಗಳಿಂದ ಕೃಷಿಭೂಮಿ ಹಾಳಾಗದಂತೆ ತಪ್ಪಿಸುವುದರ ಜೊತೆಗೆ ಹೆಚ್ಚುವರಿ ಮಳೆ ನೀರನ್ನು ಸಂಗ್ರಹಿಸಿ ಬರ ಪರಸ್ಥಿತಿಯಲ್ಲೂ ನೀರಿನಕೊರತೆಯನ್ನು ನೀಗಿಸಬಹುದು. ಅಂತರ್ಜಲ ಮರುಪೂರ್ಣದಿಂದ ರೈತರು ತಮ್ಮ ನೀರಾವರಿ ಸೌಲಭ್ಯವನ್ನು ಹೆಚ್ಚಿಸಿ ಕೃಷಿ ಇಳುವರಿಯನ್ನು ಹೆಚ್ಚಿಸಬಹುದಾಗಿದೆ.

ಡಾ. ಉಮೇಶ ಭಾರಿಕರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ನಾಲ್ವಾರ ಹಾಗೂ ನೀರು ಮತ್ತು ಮಣ್ಣು ವಿಜ್ಞಾನಿಗಳು, ಡಾ. ಮಲ್ಲಿಕಾರ್ಜುನ ರೇಡ್ಡಿ ಸಹ ಪ್ರಾಧ್ಯಾಪಕರು ಕೃಷಿ ಕಾಲೇಜು ಕಲಬುರಗಿ, ರಾಜಕುಮಾರ ಹಳಿದೋಡ್ಡಿ ಕೃಷಿ ವಿಶ್ವ ವಿದ್ಯಾಲಯ ರಾಯಚೂರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here