ಕೊಪ್ಪಳ: ಜಿಲ್ಲೆಯ ಬಿಜಿಎಂ ಹಾಸ್ಟೆಲ್ನಲ್ಲಿ ಕಂಬಕ್ಕೆ ವಿದ್ಯುತ್ ತಗುಲಿ 5 ವಿದ್ಯಾರ್ಥಿಗಳ ದುರ್ಮರಣಕ್ಕೆ ಇಡಾಗಿರುವ ಘಟನೆ ಸಂಭವಿಸಿದೆ.
ವಿದ್ಯಾರ್ಥಿಗಳ ಕೊಪ್ಪಳದಲ್ಲಿ ವಿದ್ಯಾಭ್ಯಾಸವನ್ನು ಮಡುತ್ತಿದ್ದರು ಆದರೆ ದುರಾದೃಷ್ಟವಶಾತ ಐವರು ವಿದ್ಯಾರ್ಥಿಗಳು ವಿದ್ಯುತ್ ತಗಲಿ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಸಂಬಂಧಪಟ್ಟ ತನಿಖೆಗೆ ಆದೇಶ ನೀಡಲಾಗಿದೆ. ಕೊಪ್ಪಳದ ರಾಘವೇಂದ್ರಮಠದ ಹತ್ತಿರುವ ಬಿಸಿಎಂ ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲ್ಲಿಕಾರ್ಜುನ, ಬಸವರಾಜ, ದೇವರಾಜ, ಗಣೇಶ್ ಮತ್ತು ಕುಮಾರ ಎಂಬ ವಿದ್ಯಾರ್ಥಿಗಳು ಕಂಬಕ್ಕೆ ವಿದ್ಯುತ್ ತಗುಲಿ ಮೃತಪಟ್ಟ ವಿದ್ಯಾರ್ಥಿಗಳು.
ಹಾಸ್ಟೆಲ್ನ ವಾರ್ಡನ್ ಬಸವರಾಜು ಅವರ ಸೂಚನೆಯಂತೆ ಧ್ವಜದ ಕಂಬದ ಹಗ್ಗವನ್ನು ತರಲು ಹೇಳಿದ್ದರು. ಇದರಿಂದ ಐವರು ವಿದ್ಯಾರ್ಥಿಗಳು ಹಗ್ಗವನ್ನು ತರಲು ಹೋಗಿದ್ದರು. ಈ ವೇಳೆ ಹಗ್ಗ ಬಾರದೆ ಇದ್ದಾಗ ಕಂಬವನ್ನು ಅಲ್ಲಾಡಿಸಿದ ಪರಿಣಾಮ ಮೇಲಿದ್ದ ವೈರ್ಗೆ ಕಂಬ ತಗುಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.