ಗಂಗಾವತಿ: ಕೊಪ್ಪಳ ಜಿಲ್ಲೆಯ BCM ಹಾಸ್ಟಲ್ ನಲ್ಲಿ ಅಧಿಕಾರಿಗಳ ಎಡವಟ್ಟು ಮತ್ತು ಸರ್ಕಾರದ ನಿರ್ಲಕ್ಷ್ಯ ದಿಂದಾಗಿ ಐವರು ವಿದ್ಯಾರ್ಥಿಗಳು ಸಾವನ್ನು ಅಪ್ಪಿದ್ದಾರೆ. ಈ ಸಾವಿಗೆ ಕಾರಣರಾದ ಸಿಬ್ಬಂದಿ ಹಾಗೂ ವಾರ್ಡನ್ ನ್ನು ಸೇವೆಯಿಂದ ವಜಾಗೋಳಿಸಿ, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಬಂದಿಸಿಬೇಕು ಹಾಗೂ ವಿದ್ಯಾರ್ಥಿಗಳ ಕುಟುಂಬಕ್ಕೆ ಹತ್ತುಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕು ಮತ್ತು ಎಲ್ಲಾ ಹಾಸ್ಟಲ್ ಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಸಿ, ಜಿಲ್ಲೆಯ ಎಲ್ಲಾ ಸ್ವಂತ ಕಟ್ಟಡ ಕಟ್ಟಿಸಿಬೇಕು ಎಂದು ಆಗ್ರಹಿಸಿ ಇಂದು ಗಂಗಾವತಿ ನಗರದಲ್ಲಿ SFI ವತಿಯಿಂದ ಪ್ರತಿಭಟನೆ ನಡೆಸಿ ಅಗ್ರಹಿಸಿದರು.
ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ SFI ಜಿಲ್ಲಾಧ್ಯಕ್ಷರಾದ ಅಮರೇಶ ಕಡಗದ್ ಖಾಸಗಿ ಕಟ್ಟಡದಲ್ಲಿ ಹಾಸ್ಟೆಲ್ ನಡೆಸುವುದು ಅಪಾಯಕ್ಕೆ ಆಹ್ವಾನಿಸಿದಂತೆ ಕೂಡಲೇ ಸ್ವಂತ ಕಟ್ಟಡವನ್ನು ನಿರ್ಮಿಸಿ ಹಾಸ್ಟೆಲ್ ಸ್ಥಳಾಂತರ ವನ್ನು ಮಾಡಬೇಕೆಂದು ಎಷ್ಟೋ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಎಚ್ಚೆತುಕೊಳ್ಳಲ್ಲಿಲ್ಲ ಅದರ ಪರಿಣಾಮ ವೇ ಈ ಸಾವು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಗ್ಯಾನೇಶ್ ಕಡಗದ್, ಮಂಜುನಾಥ ಡಗ್ಗಿ, ಬಾಳಪ್ಪ ಹುಲಿ ಹೈದರ್, ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.