ಕೇಂದ್ರೀಯ ವಿಶ್ವ ವಿದ್ಯಾಲಯ ಶಾಂತಿ ಸೌಹಾರ್ದತೆಗೆ ಶ್ರಮಿಸಲಿ: ಪಾಟೀಲ

0
8

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಿತದೃಷ್ಟಿಯಿಂದ ಇಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ನೆಲೆಗೊಳ್ಳುವಂತಾಗಬೇಕು. ಇದಕ್ಕಾಗಿ ನಾನೂ ಸಹ ಅಗತ್ಯವಾದ ಸಹಕಾರ ನೀಡುವುದಾಗಿ ಶಾಸಕ ಬಿ.ಆರ್.ಪಾಟೀಲ ಹೇಳಿದರು.

ತಾಲೂಕಿನ ಕಡಗಂಚಿಯ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಈಚೆಗೆ ಭೇಟಿ ನೀಡಿ ಕುಲಪತಿ ಪೆÇ್ರ. ಭಟ್ಟ ಸತ್ಯನಾರಾಯಣ, ಕುಲಸಚಿವ ಬಸವರಾಜ ಡೋಣೂರ ಜತೆ ಚರ್ಚಿಸಿ ಮಾತನಾಡಿದರು.

Contact Your\'s Advertisement; 9902492681

‘ವಿಶ್ವವಿದ್ಯಾಲಯದಲ್ಲಿ ಆರೆಸ್ಸೆಸ್ ಚಟುವಟಿಕೆ ಕೇಳಿಬರುತ್ತ್ತಿವೆ ಶಿಬಿರ ನಡೆಯುತ್ತಿವೆ. ಎಬಿವಿಪಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ, ದಲಿತ, ಪ್ರಗತಿಪರ ಸಂಘಟನೆಗಳನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ ಎಂಬುದು ಕೇಳಿಬರುತ್ತಿವೆ. ಇದಕ್ಕೆ ಕುಲಪತಿಗಳು ಕಡಿವಾಣ ಹಾಕಬೇಕು ಎಂದರು.

ಕುಲಪತಿ ಪ್ರೊ. ಭಟ್ಟು ಸತ್ಯಾನಾರಾಯಣ ಅವರು, ಪ್ರತಿಕ್ರಿಯಿಸಿ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜಕೀಯ ಹಾಗೂ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಮತ್ತು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲು ಅನುಮತಿ ನೀಡಿಲ್ಲ, ವಿನಾಕಾರಣ ಆರೋಪ ಮಾಡಲಾಗುತ್ತಿದೆ’ ಎಂದು ಅವರು ಶಾಸಕರು ಗಮನಕ್ಕೆ ತಂದರು. ಹೇಳಿದರು.

ಶಾಸಕರೂ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸ್, ಕೌಶಲ್ಯಾಭಿವೃದ್ಧಿ ತರಬೇತಿ, ಹೋಟೆಲ್ ಮ್ಯಾನೇಜ್‍ಮಿಂಟ್, ಪ್ರವಾಸೋದ್ಯಮ ಹೊಸ ಕೋರ್ಸ್‍ಗಳು ಆರಂಭಿಲು ಕ್ರಮಕೈಗೊಳ್ಳಿ, ವಿಶ್ವ ವಿದ್ಯಾಲಯ ಆವರಣದಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡಮರ ಬೆಳೆಸಲು ನೀರಿನ ಶಾಶ್ವತ ಕ್ರಮಕ್ಕೆ ಸಹಕರಿಸಲಾಗುವುದು ಎಂದರು. ಶಾಸಕರಾಗಿ ಬಿ.ಆರ್.ಪಾಟೀಲರವರು ಪ್ರಥಮ ಬಾರಿಗೆ ವಿವಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕುಲಪತಿಗಳು ಸನ್ಮಾನಿಸಿ ಸ್ವಾಗತಿಸಿದರು. ವಿವಿ ಇಂಜಿನಿಯರ್ ಐ.ಎಸ್ ಮಹಾಗಾಂವಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here