ಸುರಪುರ: ಸಹಮತ ವೇದಿಕೆಯ ಅಡಿಯಲ್ಲಿ ಸಾಣೆಹಳ್ಳಿಯ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರಗುತ್ತಿರುವ ಕಲ್ಯಾಣ ಕಾರ್ಯಕ್ರಮ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಬೆಳಗ್ಗೆ 11 ಗಂಟೆಗೆ ಆರಂಭವಾದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗುರುಮಟಕಲ್ನ ಖಾಸಾ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಲಬುರಗಿಯ ಚಿಂತಕಿ ಮೀನಾಕ್ಷಿ ಬಾಳಿ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮತ್ತೆ ಕಲ್ಯಾಣದ ಮಹತ್ವ ಮತ್ತು ಸಮಾಜದಲ್ಲಿನ ಮೂಡನಂಬಿಕೆ ಜಾತಿಪದ್ಧತಿ, ಕಂದಾಚಾರ,ಭ್ರಷ್ಟಾಚಾರ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು,ಮಹಿಳೆಯರು ಮತ್ತು ಅನೇಕ ಜನ ಕೇಳಿದ ಪ್ರಶ್ನೆಗಳಿಗೆ ವಿವರಣಾತ್ಮಕವಾಗಿ ಉತ್ತರಿಸುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರಲ್ಲಿ ವೈಚಾರಿಕ ಪ್ರಜ್ಞೆ, ಸಾಮಾಜಿಕ ಸಾಮರಸ್ಯ ಮತ್ತು ಬಸವಾದಿ ಶರಣರ ವಿಚಾರಗಳ ಕುರಿತು ಅರಿವುಮೂಡಿಸಿದರು.