ಇ.ಪಿ.ಎಫ್ ಕಚೇರಿಯಲ್ಲಿ ಯೋಗಭ್ಯಾಸ

0
67

ಕಲಬುರಗಿ: ಜೂನ್‌ 21 ವರ್ಷದಲ್ಲಿ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಅಲ್ಲದೆ ಇದು ದಕ್ಷಿಣಯಾನಕ್ಕೆ ಪರಿವರ್ತನೆಯಾಗುವ ದಿನವಾಗಿದೆ. ದಕ್ಷಿಣಯಾನ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೇಳಿ ಮಾಡಿಸಿದ್ದಾಗಿದ್ದು, ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿರುತ್ತದೆ.

ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕಾರ್ಯಾಲಯದಲ್ಲಿ ಎಲ್ಲಾ ಅಧಿಕಾರಿಗಳು ‌ಮತ್ತು ಸಿಬ್ಬಂದಿ ವರ್ಗದವರಿಗೆ ಯೋಗ ತರಬೇತುದಾರ ಪಾಂಡುರಂಗ ಕಟ್ಕೆ ಯೋಗಾಭ್ಯಾಸ ಮಾಡಿಸುವುದರೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ರವಿ ಯಾದವ, ವಿಠ್ಠಲ, ಜಿ.ಎಮ್ ಅಪ್ಸರ್, ಶಿವರಾಜ, ಬಸವರಾಜ ಹೆಳವರ, ಮದನ ಕುಲಕರ್ಣಿ, ಕಲ್ಪನಾ ಮಧಬಾವಿ, ಪ್ರಶಾಂತ ಇಂಗಳೇಶ್ವರ, ಜಗನ್ನಾಥ, ಕೇಶವ ಕುಲಕರ್ಣಿ, ಅರುಣಕುಮಾರ, ಮೊಹ್ಮದ ಯೂಸುಪ್, ಮನೀಷಾ, ಕಿರಣಕುಮಾರ, ಪ್ರತಿಭಾ, ಶಿವಶರಣಪ್ಪ‌ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here