ಸುರಪುರ:ನಗರದ ವಿವಿಧೆಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
20

ಸುರಪುರ: ನಗರದ ವಿವಿಧೆಡೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ.ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ಪ್ರತಿಯೊಬ್ಬ ಮನುಷ್ಯನಿಗೆ ಯೋಗ ಎನ್ನುವುದು ತುಂಬಾ ಮುಖ್ಯವಾಗಿದೆ.ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಯೋಗ ಅವಶ್ಯಕ,ದಿನಕ್ಕೆ ಒಂದು ಗಂಟೆ ಯೋಗಕ್ಕೆ ನೀಡಿದ್ದೆ ಆದಲ್ಲಿ ಆ ವ್ಯಕ್ತಿಗೆ ಯಾವುದೇ ರೋಗಗಳು ಬರುವ ಸಾಧ್ಯತೆ ತೀರಾ ಕಡಿಮೆ.ಅದರಂತೆ ಜೂನ್ 21 ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದ್ದು,ಈ ದಿನದ ಮೂಲಕ ಪ್ರತಿಯೊಬ್ಬರು ನಿತ್ಯ ಯೋಗ ಮಾಡುವ ಸಂಕಲ್ಪ ಮಾಡಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ,ಬಸವರಾಜ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಜನ ವಕೀಲರು ಭಾಗವಹಿಸಿದ್ದರು.ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಸಂಯೋಜಕಿ ಶಿಲ್ಪಾ ಆವಂಟಿ ಮಾರ್ಗದರ್ಶನದಲ್ಲಿ ಎಲ್ಲರು ಯೋಗ ಪ್ರದರ್ಶನ ನಡೆಸಿದರು.

ಗೃಹ ರಕ್ಷಕದಳ ಯೋಗ ದಿನಾಚರಣೆ: ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲೂಕು ಗೃಹ ರಕ್ಷಕದಳ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ಜರುಗಿತು.ಸೀನಿಯರ್ ಫ್ಲಾಟೂನ್ ಕಮಾಂಡರ್ ವೆಂಕಟೇಶ್ವರ ಸುರಪುರ,ರಮೇಶ ಅಂಬುರೆ,ಸಾರ್ಜೆಂಟ್ ಹೇಮು ರಾಠೋಡ,ಕಂಪನಿ ಸಾರ್ಜೆಂಟ್ ಮೇಜರ್ ಭೀಮರಾಯ ಹುಲಿಕಲ್,ಬಸ್ಸಣ್ಣ ಕೊಟ್ರಯ್ಯ ಸ್ವಾಮಿ,ವೀರಪ್ಪ ಶೆಟ್ಟಿ,ಚಂದ್ರಕಾಂತ ಮ್ಯಾಕಲ್, ಗುರುನಾಥ, ಕಿರಣ್, ಸೂರ್ಯಕಾಂತ, ನಿಂಗನಗೌಡ, ಶರಣು,ಮಾಳಪ್ಪ,ಖಾಜಾಹುಸೇನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸ.ಹಿ.ಪ್ರಾ.ಶಾಲೆ ಖುರೇಶಿ ಮೊಹಲ್ಲಾ:ನಗರದ ಖುರೇಶಿ ಮಹೊಹಲ್ಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಶಾಲೆಯ ಮುಖ್ಯಗುರು ಸ್ಯಾಮುವೆಲ್,ಉರ್ದು ಶಾಲೆಯ ಮುಖ್ಯಗುರುಅಬ್ದುಲ್ ರೆಹಮಾನ್,ಸಹಶಿಕ್ಷಕರಾದ ಮಾಳಪ್ಪ,ಮಮತಾ,ಗಂಗಮ್ಮ ಹಾಗೂ ಎಲ್ಲಾ ಮಕ್ಕಳು ಭಾಗವಹಿಸಿದ್ದರು.

ಜನನಿ ಪದವಿ ಮಹಾವಿದ್ಯಾಲಯ:ನಗರದ ಶ್ರೀ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ಆದಿಶೇಷ ನೀಲಗಾರ,ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ,ಉಪನ್ಯಾಸಕರಾದ ವೆಂಕಟೇಶ ಜಾಲಗಾರ,ತಿರುಪತಿ ಕೆಂಭಾವಿ,ಅಂಬ್ರೇಶ ಚಿಲ್ಲಾಳ,ಮಹೇಶಕುಮಾರ ಗಂಜಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here