ಸುರಪುರ: ತಾಲುಕಿನ ಚಂದಲಾಪುರ ಭಾಗಕ್ಕೆ ಹೆಚ್ಚು ಬಸ್ಗಳ ಓಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ.ಕ
ರವೇ ಚಂದಲಾಪುರ ಗ್ರಾಮ ಶಾಖೆಯ ಅಧ್ಯಕ್ಷ ದೇವಿಂದ್ರಪ್ಪ ಪಾಟೀಲ್ ಮಾತನಾಡಿ,ನಮ್ಮ ಊರಿನ ಭಾಗಕ್ಕೆ ತೀರಾ ಕಡಿಮೆ ಬಸ್ಗಳು ಇರುವುದರಿಂದ ಸಾರ್ವಜನಿಕರಿಗೆ ಸುರಪುರಕ್ಕೆ ಹೋಗಿ ಬರಲು ತೀವ್ರ ತೊಂದರೆಯಾಗಿದೆ.ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯವು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಂಜೆ ವೇಳೆಗೆ ಬಸ್ಗಳು ಸರಿಯಾದ ಸಮಯಕ್ಕೆ ಇಲ್ಲದ ಕಾರಣ ವಿದ್ಯಾರ್ಥಿಗಳು ಸಂಜೆ ಎಂಟು ಗಂಟೆಯಾದರು ಬಸ್ ಬರದೆ ರುಕ್ಮಾಪುರ ಕ್ರಾಸ್ಲ್ಲಿ ನಿಂತು ಕಾಯುವ ಪರಸ್ಥಿತಿ ನಿರ್ಮಾಣವಾಗುತ್ತಿದೆ. ಪೋಷಕರೆ ಬೈಕ್ಗಳನ್ನು ತೆಗೆದುಕೊಂಡು ಹೋಗಿ ಮಕ್ಕಳನ್ನು ಕರೆದುಕೊಂಡು ಬರುವ ಸ್ಥಿತಿ ಇದೆ.ಆದ್ದರಿಂದ ನಮ್ಮ ಭಾಗಕ್ಕೆ ಹೆಚ್ಚು ಬಸ್ಗಳನ್ನು ಓಡಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.