ರೋಗ ಮುಕ್ತಗೊಳಿಸುವ ಶಕ್ತಿ ಸಂಗೀತಕ್ಕಿದೆ

0
100

ಕಲಬುರಗಿ; ಅನಾವಶ್ಯಕ ವಿಷಯಗಳಿಂದ ಶರೀರದ ಮೇಲೆ ಉಂಟಾಗುವ ಭಾವನೆಯ ಬೊಜ್ಜನ್ನು ಸಂಗೀತ ಆಲಿಸುವುದರಿಂದ ಕರಗಿಸಿಕೊಳ್ಳಬಹುದು ಎಂದು ಜ್ಞಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸಂಗಮೇಶ್ವರ ಸರಡಗಿ ಹೇಳಿದರು.

ನಗರದ ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ಕನ್ನಡ ಜಾನಪದ ಪರಿಷತ ಕಲಬುರಗಿ ತಾಲೂಕ ಉತ್ತರ ವಲಯ ಹಾಗೂ ಜೈ ಭಜರಂಗಬಲಿ ಸಂಗೀತ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ “ವಿಶ್ವ ಸಂಗೀತ ದಿನಾಚರಣೆ” ನಿಮಿತ್ಯ ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಸಂಗೀತ ಕೇವಲ ಮನರಂಜನೆಗೆ ಸೀಮಿತವಲ್ಲ. ಶಾಂತಿ ಸಮಾಧಾನಕ್ಕಾಗಿ ಹಾಗೂ ಒತ್ತಡ ಕಡಿಮೆ ಗೋಸ್ಕರ ಹಿಂದೆ ರಾಜ ಮಹಾರಾಜರು ಸಂಗೀತ ಕಲಾವಿದರಿಗೆ ಆಶ್ರಯ ನೀಡಿ ಮಾನಸಿಕ ನೆಮ್ಮದಿಯಿಂದ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದರು ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಕನ್ನಡ ಜಾನಪದ ಪರಿಷತ್ತು ಉತ್ತರ ವಲಯ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಸಂಗೀತ ಆಲಿಸುವುದರಿಂದ ಶರೀರ ಮತ್ತು ಮನಸ್ಸಿನ ಅಸಮತೋಲನ ಸರಿಪಡಿಸುತ್ತದೆ. ಒಬ್ಬ ವ್ಯಕ್ತಿ ಮಾನಸಿಕ ದೈಹಿಕ ಮತ್ತು ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂಗೀತ ಸಾಧನದ ಮೂಲಕ ಪರಿಹರಿಸಿಕೊಳ್ಳಬಹುದು. ಕನ್ನಡ ಜಾನಪದ ಪರಿಷತ್ತು ಈ ನಿಟ್ಟಿನಲ್ಲಿ ಹಲವಾರು ಜನಪದ ಸಂಗೀತ ಕಲಾವಿದರನ್ನು ವೇದಿಕೆ ಕೊಡುವುದರೊಂದಿಗೆ ಸಮಾಜಕ್ಕೆ ಪರಿಚಯಿಸು ಕಾರ್ಯ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಮೇಶ ಕೋರಿಶೆಟ್ಟಿ, ದಿಲೀಪಕುಮಾರ ಭಕರೆ, ರವೀಂದ್ರ ಗುತ್ತೇದಾರ, ಜಿತೇಂದ್ರ ಠಾಕೂರ, ಅಮೃತ ನಾಯಕ, ರಾಮದಾಸ ಪಾಟೀಲ, ಮಲಕಾರಿ ಪೂಜಾರಿ, ಬಸವರಾಜ ಸೆಕ್ಯೂರಿಟಿ ಗಾರ್ಡ್, ಚಂದ್ರಕಾಂತ ತಳವಾರ, ಬಾಲಕೃಷ್ಣ ಕುಲಕರ್ಣಿ, ಬಸವರಾಜ ಹೆಳವರ, ಬಸವರಾಜ ಉಡಗಿ, ಮಲ್ಲಿನಾಥ ಮುನ್ನೋಳಿ, ಶ್ರೀನಿವಾಸ ಬುಜ್ಜಿ, ಸೂರ್ಯಕಾಂತ ಸಾವಳಗಿ, ಯಲ್ಲಪ್ಪ ಭೈರಮಡಗಿ, ವೀರಯ್ಯ ಮಠ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಈ ಭಾಗದ ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರಿ ಮಾಶಾಳ, ನಾಗರಾಜ ಪಾಟೀಲ ಹೊನ್ನ ಕಿರಣಗಿ, ವಿನೋದಕುಮಾರ ದಸ್ತಾಪೂರ, ಶ್ರೀಶೈಲ ಹಡಲಗಿ ಅವರನ್ನು ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here