ಸುರಪುರ: ನಗರದ ರಂಗಂಪೇಟೆಯ ಸಹಜಾನಂದ ಸರಸ್ವತಿ ಮಂದಿರದಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಸಂಗೀತ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಆಕಾಶವಾಣಿ ಕಲಾವಿದೆ ಶರಣಯ್ಯ ಸ್ವಾಮಿ ಬಳೂಂಡಗಿಮಠ ಮಾತನಾಡಿ,ಇಂದಿನ ಆಧುನಿಕ ಜಗತ್ತಿನ ಜಂಜಾಟದಲ್ಲಿ ಒತ್ತಡಮಯ ಹಾಗೂ ಬಿಡುವಿಲ್ಲದ ದಿನಚರಿಯಲ್ಲಿ ಜೀವನ ನಡೆಸುತ್ತಿರುವ ಮನುಷ್ಯನ ಮನಸ್ಸಿಗೆ ನೆಮ್ಮದಿ ಹಾಗೂ ಖುಷಿ ನೀಡುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ ಕೇವಲ ಮನಸ್ಸಿಗೆ ನೆಮ್ಮದಿ ಹಾಗೂ ಆಹ್ಲಾದ ನೀಡುವ ಮಾತ್ರವಲ್ಲದೆ ಪರಿಸರದ ಮೇಲೂ ಪ್ರಭಾವ ಬೀರುವ ಶಕ್ತಿ ಸಂಗೀತಕ್ಕೆ ಇದೆ ಎಂದರು.
ದೇವಸ್ಥಾನ ಕಮೀಟಿ ಅಧ್ಯಕ್ಷ ಹೊನ್ನಪ್ಪ ಹಳಿಜೋಳ, ಕಾರ್ಯದರ್ಶಿ ಸೋಮಶೇಖರ ಶಾಬಾದಿ, ಪಾಂಡು ಪೂಜಾರಿ, ಜನಾರ್ಧನ ಪಾಣಿಭಾತೆ, ಮುದ್ದಪ್ಪ ಅಪ್ಪಾಗೋಳ, ಜಗದೀಶ ಪತ್ತಾರ, ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ, ಸೂಗಮ್ಮ ಕೊಂಗಂಡಿ, ಸುರೇಶ ಅಂಬೂರೆ, ಜಗದೀಶ ಮಾನು, ರಾಜಶೇಖರ ಗೆಜ್ಜಿ, ನಾಗಭೂಷಣ ಬಿಲ್ಲಂಕೊಂಡಿಮಠ, ದೀಪಿಕಾ ಸ್ಥಾವರಮಠ, ಗುರನಾಥರೆಡ್ಡಿ ಶೀಲವಂತ, ಪ್ರಾಣೇಶರಾವ ಕುಲಕರ್ಣಿ, ಉಮೇಶ ಯಾದವ್, ನೂರಂದಯ್ಯಸ್ವಾಮಿ ಲಕ್ಷ್ಮೀಪುರ, ರಮೇಶ ಕುಲಕರ್ಣಿ, ರಘುರಾವ ಕಡಬೂರ, ಮಹೇಶ ಗೋಗಿ, ನಾಗೇಂದ್ರ ವಿಭೂತೆ, ಕೃಷ್ಣಾ ಟೊಣಪೆ, ಗೋಪಾಲ ಭಾಸುತ್ಕರ ನಾಗೇಂದ್ರ ಬಿಲಾಕಲ್, ವಿಜಯಲಕ್ಷ್ಮೀ ಹಳಿಜೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.