ರಾಷ್ಟ್ರಕ್ಕಾಗಿ ಹೋರಾಡಿದ ಮಹಾನ್ ನಾಯಕ ರಾಣಾ ಪ್ರತಾಪಸಿಂಹ

0
14

ಶಹಾಬಾದ: ರಾಣಾ ಪ್ರತಾಪಸಿಂಹ ಅವರು ಕೇವಲ ಧರ್ಮಕ್ಕಾಗಿ ಹೋರಾಡದೆ ರಾಷ್ಟ್ರಕ್ಕಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.

ಅವರು ರವಿವಾರ ಇಲ್ಲಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಜಪೂತ ಸಮಾಜ ಭಾಂದವರು ಆಯೊಜಿಸಿದ್ದ ಮಹಾರಾಣಾ ಪ್ರತಾಪಸಿಂಹ ಅವರ 483ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಮಹಾರಾಣಾ ಪ್ರತಾಪ ಅವರ ಶೌರ್ಯ, ದೇಶಪ್ರೇಮ ಎಲ್ಲರೂ ಮೆಚ್ಚುವಂತದ್ದು, ಯುವಕರು ಅವರನ್ನು ಅನುಕರಣೆ ಮಾಡಬೇಕು.ಮಕ್ಕಳ ಕೈಗೆ ಮೋಬೈಲ್ ಕೊಟ್ಟು ಊಟ ಮಾಡಿಸುವ ಬದಲು ಮಕ್ಕಳಿಗೆ ಇಂತಹ ಮಹಾನ್ ವ್ಯಕ್ತಿಗಳ ಕಥೆಗಳನ್ನು ಹೇಳಿಕೊಟ್ಟರೇ ನಮ್ಮ ಸಂಸ್ಕøತಿ ಹಾಗೂ ಧರ್ಮ ಉಳಿಯಲು ಸಾಧ್ಯ .ಆದ್ದರಿಂದ ಮಹಾನ್ ರಾಷ್ಟ್ರ ಪ್ರೇಮಿಯಾದ ರಾಣಾ ಪ್ರತಾಪಸಿಂಹ ಅವರನ್ನು ಇಂದು ಕೇವಲ ರಜಪೂತ ಸಮಾಜಕ್ಕೆ ಸಿಮೀತಗೊಳಿಸಬಾರದು. ಅವರು ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದರು.

ಉದ್ಯಮಿ ಹಾಗೂ ಸಮಾಜ ಸೇವಕ ನರೇಂದ್ರ ವರ್ಮಾ ಮಾತನಾಡಿ, ಸ್ವದೇಶ,ಸ್ವಧರ್ಮ, ಸಂಸ್ಕøತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ಮಹಾರಾಣಾ ಪ್ರತಾಪಸಿಂಗ್ ಅವರು ಎಂದೆಂದಿಗೂ ಇತಿಹಾಸದ ಪುಟಗಳಲ್ಲಿ ಅಜರಾಮರ. ಮೊಘಲರಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾರಾಣಾ ಪ್ರತಾಪ್ ಎಂಥ ಸ್ಥಿತಿ ಬಂದರೂ ರಜಪೂತರು ತಲೆಬಾಗುವುದಿಲ್ಲ ಕೊನೆ ಉಸಿರು ಇರುವವರೆಗೂ ತಾಯಿನಾಡು ಮಾತೃಭೂಮಿ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ ಎಂದು ಮೊಗಲರಿಗೆ ಗುಡುಗಿದ್ದರು. ಮಹಾರಾಣಾ ಪ್ರತಾಪ್ ನನಗೆ ಶಿರಬಾಗಿದರೆ ಹಿಂದುಸ್ತಾನ ಉಸ್ತುವಾರಿ ನೀಡುತ್ತೇನೆ. ನನ್ನ ಆಡಳಿತದ ಕೆಳಗೆ ರಾಜ್ಯಭಾರ ಮಾಡಲಿ ಎಂದು ಮೊಗಲರು ಹೇಳಿದ್ದರು. ನಾನು ಎಂದಿಗೂ ತಲೆಬಾಗುವುದಿಲ್ಲ ಕೊನೆಯುಸಿರುವವರೆಗೂ ತಾಯಿ ನಾಡಿಗಾಗಿ ಹೋರಾಡುತ್ತೆನೆ. ವೀರನಾಗಿ ಸಾಯುತ್ತೆನೆ ಹೊರತು, ಗುಲಾಮರಾಗಿ ಬದುಕುವುದಿಲ್ಲ ಎಂದು ಖಡಕ್ ರವಾನೆ ಕಳಿಸಿದವರು ಮಹಾರಾಣಾ ಪ್ರತಾಪ್ ಎಂದು ಹೇಳಿದರು.

ನಿಜಾಮ ಬಜಾರನ ಮಂಗಲಸಿಂಗ ಬೆಂಕಿತಾತನವರು ಸಾನಿಧ್ಯ ವಹಿಸಿದ್ದರು. ರಜಪೂತ ಸಮಾಜದ ಗೌರವ ಅಧ್ಯಕ್ಷ ವಿಜಯಸಿಂಗ ಠಾಕೂರ, ಅಧ್ಯಕ್ಷರಾದ ತುಳಜಾರಾಮ ಮಿಶ್ರಾ, ಉಪಾಧ್ಯಕ್ಷರಾದ ರತನಸಿಂಗ ತಿವಾರಿ, ಕಾರ್ಯದರ್ಶಿ ಅಮಿತಸಿಂಗ, ಖಜಾಂಚಿ ಸಚಿನಸಿಂಗ, ಅರವಿಂದಸಿಂಗ, ಅನಿಲ ಮಿಶ್ರಾ, ವಿಜಯಸಿಂಗ ಚಂದೇಲಿ, ನಂದಕಿಶೋರಸಿಂಗ,ಶೈಲೇಂದ್ರಸಿಂಗ,ಪವನಸಿಂಗ, ಉದಯಸಿಂಗ ಕಿಲ್ಲೆದಾರ,ಘನಶಾಮಸಿಂಗ ತಿವಾರಿ ಸೇರಿದಂತೆ ಅನೇಕರು ಇದ್ದರು. ರಘುವೀರಸಿಂಗ ಠಾಕೂರ ನಿರೂಪಿಸಿ, ಸ್ವಾಗತಿಸಿದರು.ನಂದಕಿಶೋರಸಿಂಗ ವಂದಿಸಿದರು.

ರಜಪೂತ್ ಸಮಾಜದ ಗುರುಗಳಾದ ಮಂಗಲಸಿಂಗ ಬೆಂಕಿತಾತನವರು ಮುತುವರ್ಜಿ ವಹಿಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕು. ಸಮಾಜ ಚಿಕ್ಕದಾದರೂ ಬಲಿಷ್ಠವಾಗಿದೆ. ನಾವೆಲ್ಲರೂ ಒಂದಾದಾಗ ಮಾತ್ರ ಸದೃಢ ಸಮಾಜವನ್ನು ಕಟ್ಟಲು ಸಾಧ್ಯ. – ನರೇಂದ್ರ ವರ್ಮಾ ಸಮಾಜ ಸೇವಕರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here