ಖಾಸಗಿ ಹಾಸ್ಟೆಲ್ ಲಾಬಿಗೆ ವಿದ್ಯಾರ್ಥಿಗಳು ಬಲಿಯಾದರೆ? ಇಲ್ಲಿದೆ ಕಂಪ್ಲಿಟ್ ಡಿಡೈಲ್

0
319
  • ಮರಿಗೌಡ ಬಾದರದಿನ್ನಿ

ಕೊಪ್ಪಳ : ಇಂದು ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಧ್ವಜ ಕಂಭದ ಹಗ್ಗ ಬಿಚ್ಚಲು ಹೋಗಿ 5ಜನ ವಿದ್ಯಾರ್ಥಿಗಳು ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕಟ್ಟಡ ಬಾಡಿಗೆ ಕಟ್ಟಡವಾಗಿದ್ದು ರಾಜ್ಯದ ಹಲವಾರು ಹಾಸ್ಟೆಲ್‌ಗಳು ಬಾಡಿಗೆ ಹಣದ ಲಾಬಿಗಾಗಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದೆ. ಹಾಸ್ಟೆಲ್ ಗೆ ಬೇಕಾದ ರಚನೆ ಇಲ್ಲದೆ ಮೂಲಭೂತ ಸೌಕರ್ಯವೂ ಇಲ್ಲದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಇಂದು ದೇಶದ ಭವಿಷ್ಯವಾಗಬೇಕಿದ್ದ ಐದು ಜನ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಬಲಿ ತಗೆದುಕೊಂಡಿದೆ. ಈ ಖಾಸಗಿ ಲಾಬಿಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧಿಸುತ್ತಿದೆ ಎಂದು ಸಂಚಾಲಕ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.

ಸಾವಿಗೀಡಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಸ್ಥಳೀಯ ವಾರ್ಡನ್, ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಈ ಘಟನೆ ಸಂಭವಿಸಿದೆ. ಇದರ ಸಂಪೂರ್ಣ ಜವಾಬ್ದಾರಿ ಇವರುಗಳೇ ಹೊತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯೂ ಎಚ್ಚೆತ್ತುಕೊಂಡು ಈ ರೀತಿಯ ದುರ್ಘಟನೆಗಳ ನಡೆಯದ ಹಾಗೆ ಜವಾಬ್ದಾರಿ ಕಾಯ್ದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಮಕ್ಕಳು ಮೃತಪಟ್ಟ ವಿಷಯ ತಿಳಿದು, ಸ್ಥಳಕ್ಕೆ ಧಾವಿಸಿದ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಡತನದ  ಮಧ್ಯೆ ಓದಲು ಒಳ್ಳೆಯ ವಾತಾವರಣ ನಿರ್ಮಾಣವಾಗದು, ಚೆನ್ನಾಗಿ  ಓದಲೆಂದು ಮನೆ ಬಿಡಿಸಿ ಹಾಸ್ಟೆಲ್ ಗೆ ಸೇರ್ಪಡೆ ಮಾಡಿದ್ರೆ ಇಂದು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಶಾಶ್ವತವಾಗಿ ನಮ್ಮ ಮನದ ಮನೆಯಿಂದ ಬಿಟ್ಟು ಹೊಗುವಂತಾಯಿತು ಎಂದು  ಎದೆ ಬಡಿದುಕೊಂಡು ರೋದಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಸ್ಥಳಕ್ಕಾಗಮಿಸಿ ವಸತಿ ನಿಲಯದ ಸಿಬ್ಬಂದಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಬಿಸಿಎಂ ಅಧಿಕಾರಿ ಈರಣ್ಣ ಆಶಾಪುರಿ, ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅವಘಡ ವಿದ್ಯುತ್​​​​ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳ ದುರ್ಮರಣಮಕ್ಕಳ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ಹೆದರಿದ ವಸತಿ ನಿಲಯದ ಮಕ್ಕಳಿಗೆ ಅಧಿಕಾರಿಗಳು ಧೈರ್ಯ ತುಂಬುತ್ತಿದ್ದಾರೆ.

ಖಾಲಿ ನಿವೇಶನಗಳಿದ್ದರೂ ಹಾಸ್ಟೆಲ್ ಕಟ್ಟಡ ಕಟ್ಟದ ಸರ್ಕಾರ ಕಾರಣವೇನು ಗೊತ್ತೆ?

ರಾಜ್ಯದಲ್ಲಿರುವ ಅರ್ಧದಷ್ಟು ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಖಾಲಿ ನಿವೇಶನಗಳಿದ್ದರೂ ಕಟ್ಟಡ ಕಟ್ಟಲು  ಮುಂದಾಗದ ಯಾವುದೇ ಸರ್ಕಾರ, ಸರ್ಕಾರದ ಹಿಂದಿದೆ ಖಾಸಗಿ ಲಾಬಿ..? ವಿದ್ಯಾರ್ಥಿ ನಿಲಯದ ಪ್ರಸ್ತುತ ಸ್ಥಿತಿ..!

ಕೊಪ್ಪಳದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯವೊಂದಕ್ಕೆ ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕಟ್ಟಡದಲ್ಲಿ ನೀಲಯ ನಡೆಸಲಾಗುತ್ತಿತ್ತು. ಈ ಕಟ್ಟಡದ ಮುಂದೆ ೧೧ ಕೆ.ವಿ.ವಿದ್ಯುತ್ ಲೈನ್ ಹಾಯ್ದು ಹೋಗಿದೆ ಆ ಕಟ್ಟಡದ ಮೇಲೆ ನಿಂತು ಕೈ ಮುಂದೆ ಚಾಚಿದ್ರೆ ವಿದ್ಯುತ್ ತಂತಿಗಳು ಕೈಗೆ ತಾಗುವಂತಿವೆ ಅವುಗಳಿಗೆ ಪೈಬರ್ ಅಥವಾ ಪ್ಲಾಸ್ಟಿಕ್ ಯುಕ್ತ ಪೈಗಳನ್ನಾದರು ಅಳವಡಿಸಿಲ್ಲ ಅಲ್ಲದೆ ಅದೆ ಕಟ್ಟಡದ ಮೇಲೆ ಟವರ್ (ನೆಟ್ವರ್ಕ್) ಕಂಬವನ್ನು ಇರಿಸಲಾಗಿದೆ ಇದಕ್ಕೆಂದೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯಾಗುವ ಲೈನ್ ಎಳೆಸಲಾಗಿದೆ‌‌.

ಕಟ್ಟಡದ ಮೇಲೆ ಧ್ವಜಾರೋಹಣ ಮಾಡಲು ಒಂದು ಡಬ್ಬದಲ್ಲಿ ಮರಳು ತುಂಬಿ ಅದರಲ್ಲಿ ಸ್ಟೀಲ್ ಯುಕ್ತ ಡಬ್ಬಯೊಂದರಲ್ಲಿ ಪೈಪ್ ನಂತಿದ್ದ  ಧ್ವಜಕಂಬ ಇಳಿಸಲು ಹೋಗಿ ಕರೆಂಟ್ ಶಾಕ್ ನಿಂದ ಐವರು ವಿದ್ಯಾರ್ಥಿಗಳು ದುರಂತದ ಸಾವನಪ್ಪಿರುವ ದುರ್ಘಟನೆ ಜರುಗಿದೆ. ಸ್ವಂತ ಕಟ್ಟಡವಿಲ್ಲ, ಖಾಸಗಿ ಕಟ್ಟಡಗಳಲ್ಲಿ ಸುರಕ್ಷತೆಯಿಲ್ಲ.

ಸಿಎಂ ಪರಿಹಾರ ಘೋಷಣೆ: ಬಿ.ಎಸ್.ಯಡಿಯೂರಪ್ಪ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ನಗರದ ಬನ್ನಿಕಟ್ಟೆಯ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯುತ್​ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಸಂಸದ ಸಂಗಣ್ಣ ಕರಡಿ, ಗವಿಮಠದ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಭೇಟಿ ನೀಡಿ ವಿಷಾದ ವ್ಯಕ್ತಪಡಿಸಿದ್ದಾರೆ.ಕೊಪ್ಪಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ

ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ ನಾಯಕರು.

ಇಂದು ಬೆಳಗಿನ ಜಾವ ಹಾಸ್ಟೆಲ್ ಮೇಲ್ವಿಚಾರಕನ ನಿರ್ಲಕ್ಷ್ಯದಿಂದ, ಧ್ವಜಕಂಬವನ್ನು ತೆಗೆಯಲು ಹೋಗಿ ವಿದ್ಯುತ್ ಅವಘಡ ಸಂಭವಿಸಿ ದಾರುಣ ಸಾವನ್ನಪ್ಪಿದ ಐವರು ವಿದ್ಯಾರ್ಥಿಗಳ ಕುಟುಂಬಗಳನ್ನು ಭೇಟಿಮಾಡಿದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರು ಅಮರೇಗೌಡ ಪಾಟೀಲ್ ಭಯ್ಯಾಪೂರ, ಜಿ ಪಂ ಮಾಜಿ ಅಧ್ಯಕ್ಷರು ಕೆ.ರಾಜಶೇಖರ ಹಿಟ್ನಾಳ, ಮತ್ತೋರ್ವ ಜಿ ಪಂ ಮಾಜಿ ಅಧ್ಯಕ್ಷರು ಎಸ್ ಬಿ ನಾಗರಳ್ಳಿ, ಜಿ ಪಂ ಹಾಲಿ ಅಧ್ಯಕ್ಷರು ವಿಶ್ವನಾಥ ರೆಡ್ಡಿಯವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರು ಕೆ.ರಾಘವೇಂದ್ರ ಹಿಟ್ನಾಳರವರ ವೈಯಕ್ತಿಕ ಪರಿಹಾರ ಧನವಾಗಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 20,000 ರೂ.ಗಳನ್ನು ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರು ಕೆ.ರಾಜಶೇಖರ ಹಿಟ್ನಾಳರವರು ಮತ್ತು ಕುಷ್ಟಗಿ ಶಾಸಕರು ಅಮರೇಗೌಡ ಪಾಟೀಲ್ ಭಯ್ಯಾಪೂರ ರವರು ವೈಯಕ್ತಿಕ ಪರಿಹಾರ ಧನವನ್ನು ಮೃತ ವಿದ್ಯಾರ್ಥಿಗಳ  ಕುಟುಂಬಕ್ಕೆ ತಲಾ 20,000 ರೂ.ಗಳನ್ನು ಸ್ಥಳದಲ್ಲೇ ನೀಡಿದರು, ಜಿ ಪಂ ಅಧ್ಯಕ್ಷರು ವಿಶ್ವನಾಥ ರೆಡ್ಡಿಯವರು ಜಿ ಪಂ ಕೊಪ್ಪಳ ವತಿಯಿಂದ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1,00,00 ರೂ.ಗಳಂತೆ 5,00,000 ರೂ‌.ಗಳ ಪರಿಹಾರ ಧನ ನೀಡುವದಾಗಿ ಘೋಷಿಸಿದರು.

ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕುಷ್ಟಗಿ ಶಾಸಕರು ಅಮರೇಗೌಡ ಭಯ್ಯಾಪೂರ ರವರು ಮತ್ತು ಜಿ ಪಂ ಮಾಜಿ ಅಧ್ಯಕ್ಷರುಗಳಾದ ಕೆ.ರಾಜಶೇಖರ ಹಿಟ್ನಾಳರವರು ಮತ್ತು ಎಸ್ ಬಿ ನಾಗರಳ್ಳಿಯವರು ಘಟನಾ ಸ್ಥಳ ವೀಕ್ಷಿಸಿದರು, ಹಾಸ್ಟೆಲ್ ನ ಇತರ ವಿದ್ಯಾರ್ಥಿಗಳು ಘಟನೆಯಿಂದ ಮಾನಸಿಕವಾಗಿ ಧೃತಿಗೆಡದೆ ಇರುವಂತೆ ಮಕ್ಕಳಲ್ಲಿ ಧೈರ್ಯ ತುಂಬಿದರು.

 ಖಾಸಗಿ ಕಟ್ಟಡದಲ್ಲಿ ನಿಲಯಗಳು, ವಾಸ್ತವವೇನು?

RTI ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಕೆಯಿಂದ ಪಡೆದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು 2438 ಸರ್ಕಾರಿ ವಿದ್ಯಾರ್ಥಿ ನಿಲಯಗಳಿವೆ. ಇವುಗಳಲ್ಲಿ ಕೇವಲ 1325 ವಿದ್ಯಾರ್ಥಿ ನಿಲಯಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದಂತೆ 1031 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸುಮಾರು ಅಷ್ಟೇ ಸಂಖ್ಯೆಯ ಸರ್ಕಾರಿ  ನಿವೇಶನಗಳು ಇದ್ದರೂ ಸಹ ಕೇವಲ 340 ಕಟ್ಟಡಗಳು ಮಾತ್ರ ಕಾಮಗಾರಿ ಹಂತದಲ್ಲಿವೆ. ಇನ್ನು 602 ಸರ್ಕಾರಿ ನಿವೇಶನಗಳು ಖಾಲಿ ಬಿದ್ದಿದ್ದರೂ ಸಹ ಹಾಸ್ಟೆಲ್ ಕಟ್ಟಡ ಕಟ್ಟಲು ಸರ್ಕಾರ ಮುಂದಾಗಿಲ್ಲ.

ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳು ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿವೆ.ಒಂದೇ ರೂಮಿನಲ್ಲಿ 4 ವಿದ್ಯಾರ್ಥಿಗಳು ಮಾತ್ರ ಇರಬೇಕೆಂಬ ನಿಯಮವಿದ್ದರೂ ಸಹ ಹತ್ತಾರು ವಿದ್ಯಾರ್ಥಿಗಳು ವಾಸಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ. ನಿಲಯ ಪಾಲಕರು ಸಹ ದಿನನಿತ್ಯ ಬರುವುದಿಲ್ಲ.

ಇದರ ಹಿಂದಿದೆ ಖಾಸಗಿ ಲಾಬಿ

ನಿವೇಶನಗಳಿದ್ದರೂ ಸಹ ಸರ್ಕಾರಿ ಕಟ್ಟಡ ಕಟ್ಟದಿರುವುದರ ಹಿಂದೆ ದೊಡ್ಡ ಖಾಸಗಿ ಮಾಫಿಯಾ ಕೆಲಸ ಮಾಡುತ್ತಿದೆ. ಖಾಸಗಿ ಕಟ್ಟಡದ ಮಾಲೀಕರು, ರಿಯಲ್ ಎಸ್ಟೇಟ್, ಕೆಲವು ಕುಳಗಳು ಸ್ಥಳೀಯ ವಾರ್ಡನ್ ಗಳೊಂದಿಗೆ ಶಾಮೀಲಾಗಿ ಸರ್ಕಾರದ ದುಡ್ಡನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಮಾಸಿಕ ಲಕ್ಷಾಂತರ ರೂಪಾಯಿ ಬಾಡಿಗೆ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಸ್ವಂತ ಕಟ್ಟಡ ಕಟ್ಟಿಬಿಟ್ಟರೆ ಇವರ ಬಾಡಿಗೆಯ ವ್ಯವಹಾರ ಬ್ರೇಕ್ ಬೀಳುತ್ತದೆ ಅದಕ್ಕೆ ಅವರು ಯಥಾಸ್ಥಿತಿ ಕಾಪಾಡಿಕೊಳ್ಳಲು ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರುಗಳೆಲ್ಲಾ ಸಚಿವರ ಲೆವೆಲ್ ನಲ್ಲಿ ಆಪರೇಟ್ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಲಾಬಿ ನಡೆಸಿ ಕಟ್ಟಡ ನಿರ್ಮಾಣದ ಟೆಂಡರ್ ಗಾಗಿ ಇಲ್ಲವೇ ಕಟ್ಟಡ ಕಟ್ಟಬಾರದಾಗಿ ಒತ್ತಡ ತರುತ್ತಿದ್ದಾರೆ.ಇದೆಲ್ಲದರ ದುಷ್ಪರಿಣಾಮಗಳನ್ನು ಅಮಾಯಕ ವಿದ್ಯಾರ್ಥಿಗಳು ಅನುಭವಿಸಬೇಕಿದೆ.

ಸರ್ಕಾರಿ ಹಾಸ್ಟೆಲ್ ಗಳ ದುಸ್ಥಿತಿ: ಇನ್ನು ಸರಕಾರದ ಕೆಲ ಹಾಸ್ಟೆಲ್ ಗಳು ಇಂದು ದನದ ಕೊಟ್ಟಿಗೆಗಳಿಗಿಂತ ಕಡೆಯಾಗಿವೆ. ಬಡ, ಮಧ್ಯಮ ವರ್ಗವನ್ನು ಶೈಕ್ಷಣಿಕ ಸೌಲಭ್ಯದಿಂದ ವಂಚಿಸುವ ವ್ಯವಸ್ಥಿತ ಹುನ್ನಾರದ ಭಾಗವಾಗಿಯೇ ಹಾಸ್ಟೆಲ್ ಗಳನ್ನು ದಿವಾಳಿ ಎಬ್ಬಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಬಹುತೇಕ ಹಾಸ್ಟೆಲ್ ಗಳಿಗೆ  ಬಾಡಿಗೆ ಕಟ್ಟಡಗಳಿಂದ ಸ್ವತಂತ್ರ ದೊರೆತಿಲ್ಲ ಎಂದರೆ ತಪ್ಪಾಗಲಕ್ಕಿಲ್ಲ  ಬಹುತೇಕ ವಿಧ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡಗಳೆ ಗತಿಯಾಗಿವೆ..! ರೈಲು ಬೋಗಿಯಂತೆ ವರ್ಷದಿಂದ ವರ್ಷಕ್ಕೆ ಇವು ವಾರ್ಡ್ ನಿಂದ ವಾರ್ಡ್ ಗೆ ಚಲಿಸುತ್ತಲೇ ಇರುತ್ತವೆ!

ಹಿಂದುಳಿದ, ಎಸ್ಸಿ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮ ಊಟಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಇಲ್ಲವೇ ಸಂಬಂಧಿಸಿದ ಅಧಿಕಾರಿಗಳ ಕಾರ್ಯಾಲಯದ ಮುಂದೆ ದಿನಗಟ್ಟಲೇ ಹೋರಾಟ ಮಾಡಲೇಬೇಕಾದ ದುಃಸ್ಥಿತಿ ಇದೆ. ಬಹುತೇಕ ಎಲ್ಲಾ ವಾರ್ಡನ್ ಗಳು ಮಕ್ಕಳ ಅನುದಾನವನ್ನು ಕದಿಯುತ್ತಾರೆ ಅವರ ಸಂಬಳದ ಆಧಾರದ ಮೇಲೆ ಅವರ ವರಮಾನ ನೋಡಿದ್ರೆ ಸಂಬಳ ಕಡಿಮೆ ಇದ್ದರು ಅವರ ವರಮಾನಕ್ಕೆನು ಕಡಿಮೆ ಇಲ್ಲ ಈ ಸಂಗತಿ ಎಲ್ಲರಿಗೂ ಗೊತ್ತಿದ್ದರೂ ಅದನ್ನು ನಿಯಂತ್ರಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಈ ದುರಂತದ ಪರಿಸ್ಥಿತಿಯಲ್ಲಿ ಉತ್ತಮ ಗುಣಮಟ್ಟದ ಆಹಾರ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯ, ಆಟದ ಮೈದಾನವನ್ನು ನಿರೀಕ್ಷಿಸುವುದು ದುರಾಸೆಯಲ್ಲವೇ?

ಇದೇ ಸಂದರ್ಭದಲ್ಲಿ ಕೆಲವೊಂದು ಹೇಳೊದಾದರೆ ಅತ್ಯುತ್ತಮ ಹಾಸ್ಟೆಲ್ ಗಳು ಇವೆ. ಸರ್ಕಾರಿ ಹಾಸ್ಟೆಲ್ ಗಳೆ ಫೈವ್ ಸ್ಟಾರ್ ಹೋಟೆಲ್ ನಂತೆ ಕಂಗೊಳಿಸುತ್ತವೆ, ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಲಾಗುತ್ತಿದೆ. ಸ್ಥಳಿಯ ಸಂಘಟನೆಗಳ ಹೋರಾಟದಿಂದ ಕಟ್ಟಡ ನಿರ್ಮಾಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದೇ ಅತ್ಯುತ್ತಮ ಕಟ್ಟಡ ಕಟ್ಟಲು ,ಅಥವಾ ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳ ಗಮಕ್ಕೆ ತಂದು ಅಲ್ಲಿ ಸಮಸ್ಯೆಯನ್ನು ನಿಯಂತ್ರಣ ಮಾಡುವುದರಿಂದ ಜವಾಬ್ದಾರಿ ಹೊತ್ತು, ಹೊಣೆಗಾರಿಕೆಯನ್ನು ನಿಭಾಯಿಸಿದ್ದರಿಂದಾಗಿ ಕೆಲವು ಹಾಸ್ಟಲ್ ಗಳು ಉತ್ತಮವಾಗಿರಲು ಸಾಧ್ಯವಾಗಿದೆ. ಅಲ್ಲಿನ ವಾರ್ಡನ್ ಹೋರಾಟದ ಹಿನ್ನೆಲೆಯಿಂದ ಬಂದ್ದಂತವರಾಗಿದ್ದರೆ ಮತ್ತು  ಅವರು ಮಕ್ಕಳ ಭವಿಷ್ಯದ ಮೇಲಿನ ಪ್ರೀತಿಯಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹಾಗಾಗಿ ಅಂತಹ ಹಾಸ್ಟೆಲ್ ಗಳು ನಿಜಕ್ಕೂ ಮಾದರಿ ನಿಲಯಗಳಾಗಿ ಹೊರಹೊಮ್ಮಿತ್ತವೆ.

ಅಂದರೆ ಇಚ್ಛಾಶಕ್ತಿ ಇದ್ದರೆ ಸಾಕು ಇರುವ ಅನುದಾನದಲ್ಲಿಯೇ ಹಾಸ್ಟೆಲ್ ಗಳನ್ನು ಅತ್ಯುತ್ತಮವಾಗಿ ನಡೆಸಲು ಸಾಧ್ಯ. ಅಂತಹ ಇಚ್ಛಾಶಕ್ತಿಯನ್ನು ಸರ್ಕಾರದಲ್ಲಿ, ಸಮಾಜ ಕಲ್ಯಾಣ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ, ವಾರ್ಡನ್ ಗಳಲ್ಲಿ ತರುವವರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿ ವಿಧ್ಯಾರ್ಥಿಗಳನ್ನ ಹಾಗೂ ಪಾಲರಕನ್ನ ಮತ್ತು ಸಾರ್ವಜನಿಕರನ್ನ ಕಾಡುವ ಈ ಯಕ್ಷ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ ಶಿಕ್ಷಣದ ನಿಜವಾದ ಉದ್ದೇಶವನ್ನು ಈಡೇರಿಸಲು ಸಾಧ್ಯತೆ ಇದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here