ಕಸಾಪ; ಡಾ. ಫ.ಗು.ಹಳಕಟ್ಟಿ ಅವರ ಬದುಕು-ಸಾದನೆಯ ಕುರಿತಾದ ವಿಚಾರಗೋಷ್ಠಿ

0
53

ಕಲಬುರಗಿ: ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ಅಮೂಲ್ಯವಾದ ತಾಳೆಗರಿಗಳನ್ನು ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ಗ್ರಂಥ ರೂಪದಲ್ಲಿ ಎಲ್ಲರೂ ಓದಲು ಅನುಕೂಲವಾಗುವಂತೆ ಮುದ್ರಿಸಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಯವರ ಅತ್ಯಾದ್ಭುತ ಕಾರ್ಯದಿಂದಾಗಿ ಇಂದು ಅಮೂಲ್ಯವಾದ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಸೇಡಂ ರಸ್ತೆಯಲ್ಲಿರುವ ಆರ್ಯನ್ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ ಹಳಕಟ್ಟಿ ಹೊಸಸೃಷ್ಟಿ ಎಂಬ ಮಹಾಘೋಫಷವಾಕ್ಯದೊಂದಿಗೆ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಬದುಕು-ಸಾದನೆಯ ಕುರಿತಾದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಸಂದೇಶಗಳು ವಿಶ್ವ ಶಾಂತಿ, ವಿಶ್ವ ಪ್ರೇಮ ಮೂಡಿಸುತ್ತವೆ. ವಚನ ಸಾಹಿತ್ಯತ ಮೂಲ ಪ್ರತಿಗಳ ಸಂಗ್ರಹಕ್ಕೆ ಮನೆ ಮನೆಗಳಿಗೆ ತೆರಳಿ ಬೇಡಿದ ಅವರ ತ್ಯಾಗ, ಅರ್ಪಣಾ ಮನೋಭಾವ ಮತ್ತು ಅವುಗಳ ಸಂರಕ್ಷಣೆ ಹಾಗೂ ಮುದ್ರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅತ್ಯಮೂಲ್ಯ ಕೊಡುಗೆ ಅಮೋಘವಾಗಿದೆ. ಇಂದಿನ ಯುವ ಜನತೆ ಶರಣರ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಿ ಸಮಸಮಾಜ ನಿರ್ಮಾಣ ಮಾಡುವ ಸಲುವಾಗಿ ವಿಶ್ವಗುರು ಬಸವಣ್ಣನವರು ಬಹು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಜಾತಿ, ಲಿಂಗ, ಮೇಲು-ಕೀಳು ಎಂಬ ಭಾವನೆಗಳನ್ನು ದೂರ ಮಾಡಿ ಎಲ್ಲರೂ ಒಮದೇ ಎಂಬ ಭಾವದಿಮದ ಬದುಕುವುದನ್ನು ಕಲಿಸಿಕೊಟ್ಟವರು ಬಸವಣ್ಣನವರು. ಬಸವಣ್ಣ ನವರನ್ನು ಮತ್ತು ಶರಣರ ವಚನಗಳನ್ನು ಬೆಳಕಿಗೆ ತಂದವರು ಹಳಕಟ್ಟಿ ಅವರು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಫ ಗು ಹಳಕಟ್ಟಿ ಯವರು ತಾವು ಸಂಗ್ರಹಿಸಿದ ವಚನಗಳ ಮುದ್ರಣಕ್ಕಾಗಿ ಮುದ್ರಣಾಲಯ ಆರಂಭಿಸಲು, ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ, ಜೀವನ ಕೊನೆಯವರೆಗೂ ಬಡತನದಲ್ಲಿಯೇ ಅತ್ಯಂತ ಸರಳ ಜೀವನ ನಡೆಸಿದ ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಮುದ್ರಿಸದೇ ಹೋದರೆ, ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ. ಹಾಗಾಗಿ, ಫ ಗು ಹಳಕಟ್ಟಿ ಅವರ ಪರಿಶ್ರಮ ಮತ್ತು ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ಮತ್ತಷ್ಟು ಆಗಬೇಕಿದೆ. ಇದರಿಂದಾಗಿ ಇಂದಿನ ಯುವ ಪೀಳಿಗೆ ಪ್ರೇರಿತರಾಗಿ ಏನಾದರೂ ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಮಾತನಾಡಿ, ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಗ್ರಂಥ ರೂಪದಲ್ಲಿ ಪ್ರಕಟಿಸುವುದರ ಜತೆಗೆ ಆ ಸಾಹಿತ್ಯವನ್ನು ಜನಮನಸಕ್ಕೆ ಪ್ರಚಾರಪಡಿಸಿದ ವಚನ ಪಿತಾಮಹ ಫ ಗು ಹಳಕಟ್ಟಿ ಯವರು ನಮ್ಮ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪನ್ಯಾಸಕ ನದಾಫ್ ಡಿ.ಐ., ಪರಿಷತ್ತಿನ ಪ್ರತಿನಿಧಿ-ನ್ಯಾಯವಾದಿ ವಿನೋದ ಜೇನವೇರಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ಬಸ್ವಂತರಾಯ ಕೋಳಕೂರ, ಮಂಜುಳಾ ಸುತಾರ, ಕವಿತಾ ಮಾಲಿಪಾಟೀಲ, ಉಪನ್ಯಾಸಕರಾದ ಡಾ. ಅನಂತ ನಯನ, ಡಾ. ಸಿದ್ದಣ್ಣಾ ಹೊಸಮನಿ, ಶಿವಾನಂದ, ಸೂರ್ಯಕಾಂತ ಸೊನ್ನದ, ಶಿವಲಿಂಗಪ್ಪ ಅಷ್ಟಗಿ, ಚಂದ್ರಶೇಖರ ಮ್ಯಾಳಗಿ, ಮಲ್ಲಿನಾಥ ದೇಶಮುಖ, ಶ್ರೀನಿವಾಸ ಬಲ್ಪೂರ್, ಶಿವಕುಮಾರ ಸಿ.ಎಚ್., ಪ್ರಭುಲಿಂಗ ಮೂಲಗೆ, ನಾಗಪ್ಪ ಎಂ. ಸಜ್ಜನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಚನ ಸಾಹಿತ್ಯ ಎಂದರೆ ನಮ್ಮ ಪ್ರಜಾಪ್ರಭುತ್ವದ ಧರ್ಮ ಗ್ರಂಥವಾಗಿದೆ. ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದೆ. ವಚನಗಳಲ್ಲಿರುವ ಅಂಶಗಳು ನಮ್ಮ ಭಾರತದ ಸಂವಿಧಾನದಲ್ಲಿ ಕಾಣುತ್ತೇವೆ. – ಶಂಕರ ಬಿದರಿ, ನಿವೃತ್ತ ಡಿಜಿಪಿ, ಬೆಂಗಳೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here