ಅಕ್ಕಿ ಬದಲು ನಗದು ತಾತ್ಕಾಲಿಕವಾಗಬೇಕು: ಸಿಪಿಐಎಂ ಕೆ ನೀಲಾ

0
62

ಕಲಬುರಗಿ: ಅಕ್ಕಿ ದೊರೆಯದ ಕಾರಣಕ್ಕೆ ಅಕ್ಕಿದೊರೆಯುವವರೆಗೆ ನಗದು ನೀಡಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆಯೆಂಬ ಹೇಳಿಕೆಯನ್ನು ಸಿಪಿಐಎಂ ಸ್ವಾಗತಿಸುತ್ತದೆ. ಆದರೆ ಇದನ್ನೇ ನೆಪ ಮಾಡಿ ನಗದು ವರ್ಗಾವಣೆಯನ್ನೇ ನೀತಿಯಾಗಬಾರದು ನಗದು ವರ್ಗಾವಣೆಯು ಬಿಪಿಎಲ್ ಕಾರ್ಡದಾರರ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಅಗತ್ಯವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಬಡವರಿಗೆ ಹೆಚ್ಚುವರಿಯಾಗಿ ತಲಾ ಐದು ಕೇಜಿ ಅಕ್ಕಿ ನೀಡುವ ಯೋಜನೆಯಲ್ಲಿ ಅಕ್ಕಿ ದೊರೆಯದಂತೆ ಈಗಲೂ ರಾಜಕೀಯ ಮಾಡುತ್ತಿರುವ, ಒಕ್ಕೂಟ ಸರಕಾರ ಬಿಜೆಪಿ ಹಾಗೂ ಆರ್ ಎಸ್ಎಸ್ ನ ಬಡವರ ವಿರೋಧಿ ನಿಲುಮೆಯನ್ನು ಸಿಪಿಐಎಂ ರಾಜ್ಯ ಘಟಕ ಬಲವಾಗಿ ಖಂಡಿಸುತ್ತದೆ. ಇದೊಂದು ನಾಚಿಕೆಗೇಡಿನ ರಾಜಕಾರಣವಾಗಿದೆ. ಇಂತಹ ಅಮಾನವೀಯ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ಜನತೆಯು ಧಿಕ್ಕರಿಸಬೇಕು ಮತ್ತು ತಿರಸ್ಕರಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Contact Your\'s Advertisement; 9902492681

ಕರ್ನಾಟಕ ಸರಕಾರ ರಾಜ್ಯದ ಓಪನ್ ಮಾರುಕಟ್ಟೆಯಲ್ಲಿ ಭತ್ತವನ್ನು ಖರೀದಿಸಿ, ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದ ಆಧುನಿಕ ರೈಸ್ ಮಿಲ್ ನಿರ್ಮಿಸಿ ಅಕ್ಕಿ ಉತ್ಪಾದನೆಯಲ್ಲಿ ತೊಡಗುವ ಕಡೆ ಚಿಂತಿಸಿ ಕಾರ್ಯ ಪ್ರವೃತ್ತವಾಗುವುದು ಅಗತ್ಯವಿದೆಯೆಂದು ರಾಜ್ಯ ಸಿಪಿಐಎಂ ಪಕ್ಷ ಸರಕಾರದ ಗಮನ ಸೆಳೆದಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here