ಆಳಂದ: ಪಟ್ಟಣದ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಶ್ರೀಗುರುರಾಯರ ೩೮೪ನೇ ಮಧ್ಯರಾಧನೆ ಮಹೋತ್ಸವ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಬಣೆಯಿಂದ ನೆಡೆಯಿತು.
ನಗರೇಶ್ವರ ರಾಮಮಂದಿರದಲ್ಲಿ ಬೆಳಗಿನ ಜಾವ ಅಷ್ಟೋತ್ತರ ಅಭಿಷೇಕ ಬಳಿಕ ಪ್ರಮುಖ ರಸ್ತೆಗಳ ಮೂಲಕ ರಾಘವೇಂದ್ರ ಶ್ರೀಗಳ ಭಾವಿಚಿತ್ರ ಮತ್ತು ಪಲ್ಲಕ್ಕಿ ಉತ್ಸವ ನಂತರ ಆಗಮಿಸಿದ್ದ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಿ ಸಂಜೆ ಪಲ್ಲಕ್ಕಿ ಸೇವೆ ಜರುಗಿತು.
ಶಾಂಭವಿ ಮಹಿಳಾ ಭಜನಾ ಸಂಘ ಹಾಗೂ ತೆಲಾಕುಣಿ ಗ್ರಾಮದ ಹರಿಭಜನಾ ಸಂಘದಿಂದ ಭಕ್ತಿ ಗೀತೆಗಳ ಜರುಗಿದವು.
ಸಮಾಜದ ಮುಖಂಡ ವಿಜಯಕುಮಾರ ಕೋಥಳಿಕರ್, ಕಲ್ಯಾಣರಾವ್ ಜೋಶಿ, ಗುಂಡೇರಾವ್ ಮಾಡ್ಯಾಳ್ಕರ್, ಭಾಲಚಂದ್ರ ಕುಲಕರ್ಣಿ, ವಿಲಾಸ್ ಪೋಟ್ನೆಕ್, ಗುಂಡೇರಾವ್ ಜೋಶಿ, ಮುರಲೀಧರ್‌ರಾವ್ ಕುಲಕರ್ಣಿ, ಕಿಶೋರ ಸಂಗೋಳಗಿ, ಭೀಮಾಶಂಕರ ರಾಘವಂಕರ್, ದತ್ತಾತ್ರೆಯ ದೇಶಪಾಂಡೆ, ವಸುಧಾ ಕುಲಕರ್ಣಿ, ಗೀತಾ ಹೋದಲೂರಕರ್, ಶೋಭಾ ರಾಜೋಳಕರ್, ಗೀತಾ ಮುಜುಂದಾರ ಅನೇಕರು ಆರಾಧಾನಾ ಯಶಸ್ವಿಗೆ ಶ್ರಮಿಸಿದರು.