ಸಮಾಜಕ್ಕಾಗಿ ಸಮಯ ಮೀಸಲಿಡಿ : ಪೂಜ್ಯ ಪ್ರಭುಶ್ರೀ ತಾಯಿ

0
36

ಕಲಬುರಗಿ: ವೈಯಕ್ತಿಕ ಜೀವನದ‌ ನಡುವೆಯೂ ಸಮಾಜಕ್ಕಾಗಿ ಸ್ವಲ್ಪ‌ಸಮಯ‌ ಮೀಸಲಿಡಬೇಕು ಎಂದು‌ ಅಕ್ಕಮಹಾದೇವಿ ಆಶ್ರಮದ‌ ಶ್ರೀ ಪ್ರಭುದೇವಿ ತಾಯಿ ಸಲಹೆ ನೀಡಿದರು.

ನಗರದ ಕೋಹಿನೂರ ಪದವಿ ಕಾಲೇಜಿನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಶನಿವಾರ ಆಯೋಜಿಸಿದ್ದ ವೈದ್ಯ, ಪತ್ರಕರ್ತರ ಹಾಗೂ ಸಿಎ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ವೈದ್ಯರ, ಪತ್ರಕರ್ತರ ಹಾಗೂ ಸಿಎ ಅವರ ಕೊಡುಗೆ ಅನನ್ಯವಾಗಿದೆ. ಮನುಷ್ಯರಿಗೆ ಅನಾರೋಗ್ಯದ ಸಮಸ್ಯೆ ಉಂಟಾದಾಗ ವೈದ್ಯರು ಚಿಕಿತ್ಸೆ ಮೂಲಕ ರೋಗ ಗುಣಪಡಿಸುತ್ತಾರೆ. ಸಮಾಜಕ್ಕೆ ರೋಗ ಅಂಟಿಕೊಂಡಾಗ ಲೇಖನಿಯ‌ ಮೂಲಕ ರೋಗ ನಿವಾರಿಸವ ಕಾರ್ಯ ಪತ್ರಕರ್ತರು ಮಾಡುತ್ತಾರೆ. ದೇಶದ ಆರ್ಥಿಕತೆ ಸುಧಾರಣೆಯಲ್ಲಿ ಸಿಎಗಳ‌ಪಾತ್ರ ಪ್ರಮುಖವಾಗಿದೆ‌ ಎಂದು‌‌ ಸ್ಮರಿಸಿದರು.

Contact Your\'s Advertisement; 9902492681

ಕೋಹಿನೂರ ಪದವಿ ಕಾಲೇಜಿನ‌ ಆಡಳಿತಾಧಿಕಾರಿ ವಿ.ಎಂ. ಹಿರೇಮಠ ಮಾತನಾಡಿ, ದೇಶದ ಅಭಿವೃದ್ದಿಗೆ ಜಿಎಸ್ ಟಿ ಪಾತ್ರ ಪ್ರಮುಖವಾಗಿದೆ. ಸಾರ್ವಜನಿಕರು ಕಟ್ಟುವ ತೆರಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರಿ ನೌಕರರು ಮಾತ್ರ ಸರಿಯಾಗಿ ತೆರಿಗೆ ಕಟ್ಟುತ್ತಾರೆ. ಕೃಷಿ ಕ್ಷೆತ್ರಕ್ಕೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗಿದೆ‌ ಎಂದು ವಿವರಿಸಿದರು.

ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಶ್ವರಾಜ ತಡಕಲ್, ಹಿರಿಯ‌ ಪತ್ರಕರ್ತ ಶಾಮಸುಂದರ ಕುಲಕರ್ಣಿ, ತೆರಿಗೆ ಸಲಹೆಗಾರ ಚನ್ನಬಸಪ್ಪ ಊಡಗಿ, ವಿ.ಎಂ.ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಎಚ್.ಬಿ.ಕಂಟೆಗೋಳ್‌ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಸಮಾಜ‌ಸೇವಾ ಬಳಗದ ಅಧ್ಯಕ್ಷ ಉಪನ್ಯಾಸಕ ಎಚ್.ಬಿ.ಪಾಟೀಲ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪ ಬಿರಾದಾರ, ಶಿಕ್ಷಕರಾದ ಉಮಾದೇವಿ,ಸವಿತಾ ಕಲಾಲ್,ನಾಗರಾಜ ಜಮಾದಾರ, ಜ್ಯೋತಿ ಪಾಟೀಲ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಶಾಲ ಕಾರ್ಯಕ್ರಮ‌ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here