ಪರಿಸರ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ

0
24

ಶಹಾಬಾದ: ಪರಿಸರದ ಸಂರಕ್ಷಣೆ ಮಾಡುವ ಆಶಯ ಪ್ರತಿಯೊಬ್ಬರಲ್ಲಿ ಇದ್ದಾಗ ಮಾತ್ರ ಪರಿಸರ ಉಳಿವು ಸಾಧ್ಯ ಎಂದು ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ ಹಂದರಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸೋಮವಾರ ಭ೦ಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯಿಂದ ಆಯೋಜಿಸಿಲಾದ ಸಸಿ ನೆಡುವ ಸಪ್ತಾಹ ಯೋಜನೆಯಡಿ ನನ್ನ ಗಿಡ ನನ್ನ ಹೆಮ್ಮೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ. ಪರಿಸರ ಸಂರಕ್ಷಿಸಿ ವಾತಾವರಣ ಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಸ್ತುತ ಆಧುನೀಕತೆಯ ಬರದಲ್ಲಿ ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದು, ಪರಿಸರ ಕಾಪಾಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ನಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಕಾಡು ನಾಶ ಮಾಡುತ್ತಿದ್ದು, ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಬಹಳ ತೊಂದರೆ ಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಾಮಾಜಿಕ ಅರಣ್ಯ ಅಧಿಕಾರಿ ಗುರುರಾಜ ಕಮತರ ಮಾತನಾಡಿ,ಮರಗಳಿಲ್ಲವಾದರೆ ವಾತಾವರಣದಲ್ಲಿ ವ್ಯತ್ಯಯವಾಗಿ, ಮಳೆ ಕಡಿಮೆ ಯಾಗುತ್ತದೆ. ಎಂದಿನಂತೆ ಮಳೆಯಾಗದೆ ಕೃಷಿಗೆ ತೊಂದರೆಯಾಗುತ್ತದೆ. ಈಗಲೇ ಪ್ರತಿಯೊಬ್ಬರು ಪರಿಸರ ಸಂರಕ್ಷಿಸಲು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲೂ ಪರಿಸರ ಸಂರಕ್ಷಣೆ ಕಾಳಜಿ ಮೂಡಬೇಕು. ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಶಹಾಬಾದ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ,ವಿದ್ಯಾರ್ಥಿಯಲ್ಲೂ ಪರಿಸರ ಸಂರಕ್ಷಣೆಯ ಭಾವನೆ ಮೂಡುವುದೋ ಆಗ ಮಾತ್ರ ಪರಿಸರ ಸಂರಕ್ಷಣೆಯ ಕಾರ‌್ಯಕ್ರಮ ಯಶಸ್ವಿಯಾಗಲು ಸಾಧ್ಯ ವಾಗುತ್ತದೆ. ಇಂದು ದೇಶಾದ್ಯಂತ ನೀರಿನ ಅಭಾವ ತಲೆದೂರಿದೆ. ಹೀಗಾಗಿ ನೀರಿನ ಮಿತ ಬಳಕೆಗೆ ಎಲ್ಲರೂ ಆದ್ಯತೆ ನೀಡಬೇಕು. ಅನಗತ್ಯವಾಗಿ ನೀರು ವ್ಯಯ ಮಾಡಬಾರದು. ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು, ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here