ಕಲಬುರಗಿ: ಮಹೇಶ ಧರಿ ಭಂಕೂರ ಅವರು ಜಿಲ್ಲಾ ಹಾಲುಮತದ ಮಹಾಸಭಾದ ಅಧ್ಯಕ್ಷರು, ಹಾಗೂ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಯುವ ಮುಖಂಡರು ಇವರು ಲೋಕಸಭಾ, ವಿಧಾನಸಭಾ. ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷದ ಗೆಲುವಿಗಾಗಿ ರುಳೂ ಎನ್ನದೆ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಅನುಕೂಲವಾಗಲೆಂದು ನಮ್ಮ ಸಮಾಜದ ಹಿತದೃಷ್ಟಿಯಿಂದ ಹಾಗೂ ಈಗ ಪಕ್ಷದ ಹಿತದೃಷ್ಟಿಯಿಂದ ನಮ್ಮ ಸಮಾಜದವರಿಗೆ ಇಲ್ಲಿಯವರೆಗೆ ಯಾವುದೇ ರೀತಿ ಪ್ರಾತಿನಿಧ್ಯ ನೀಡಿರುವುದಿಲ್ಲ. ನಿಷ್ಠಾವಂತ ಯುವ ಮುಖಂಡರಾದ ಮಹೇಶ ಎಸ್. ಧರಿ ಅವರಿಗೆ ಸರ್ಕಾರದ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಚಿವರಾದ ಪ್ರಯಾಂಕ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಇವರಿಗೆ ಹೈದ್ರಾಬಾದ ಕರ್ನಾಟಕ, ಗೊಂಡ,ರಾಜಗೊಂಡ, ಕಾಡುಕುರುಬ, ಜೇನುಕುರುಬ (ಪ.ಪ) ಸಂಘದ ಜಂಟಿ ಕಾರ್ಯದರ್ಶಿ ಶಿವಾಜಿ ಎಸ್.ಪಟ್ಟಣ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.