ಕಲಬುರಗಿ: ಬಡವನ ಪರ ಕಾಂಗ್ರೇಸ್, ಶ್ರೀಮಂತರ ಪರ ಬಿಜೆಪಿ, ಅದು ಹೇಗೆ ಅಂತಿರಾ ?ಇಲ್ಲಿದೇ ಓದಿ, ಆವತ್ತು ಕೇಂದ್ರದ ಬಿಜೆಪಿ ಸರ್ಕಾರ ಶ್ರೀಮಂತ ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿತ್ತು.ಆಗ ಯಾರು ಕೂಡ ಪ್ರಶ್ನಿಸದೇ ಸುಮ್ಮನೆ ಇದ್ದರೂ. ಆದರೇ ಲಕ್ಷಾಂತರ ಬಡವರ ಪರ ಕೇವಲ ವರ್ಷಕ್ಕೆ ಐವತ್ತು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾದ ಕಾಂಗ್ರೇಸ್ ಸರ್ಕಾರವನ್ನು ಅನೇಕ ಬಡವರ ವಿರೋಧಿ ಬಿಜೆಪಿ ರಾಜಕಾರಣಿಗಳು ಪ್ರಶ್ನಿಸುತ್ತಿರುವು ಖಂಡನೀಯವಾಗಿದೆ ಎಂದು ಎಂದು ಕಾಂಗ್ರೆಸ್ ಮುಖಂಡ ದಿನೆಶ ಎನ್.ದೊಡ್ಡಮನಿ ಟಿಕಿಸಿದ್ದಾರೆ.
ಬಿಜೆಪಿ ಅವರು ಯಾವಾಗಲೂ ಉಳ್ಳವರ ಪರ ರಾಜಕೀಯ ಮಾಡ್ತಾನೇ ಬಂದಿದ್ದಾರೆ ಅವರು ಯಾವತ್ತು ಕೂಡ ಸಾಮಾಜಿಕ ,ಆರ್ಥಿಕ ಬದಲಾವಣೆ ತರುವಲ್ಲಿ ಆಸಕ್ತಿ ತೋರಿದವರಲ್ಲ,ಅದಕ್ಕಾಗಿ ಬಡವ ನೀನು ರಾಜಕಾರಣ ಮಾಡು,ಆದರೇ ಸ್ವಾಭಿಮಾನಿಯಾಗಿ ,ಉಳ್ಳವರ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ಜಾಗೃತಿಯಿಂದ ಮತದಾನ ಮಾಡಿದರೆ ಮತ್ತೆ ಬಡವರ ಪರವಾದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೇಸ್ ಹತ್ತು ಕೆ.ಜಿ ಅಕ್ಕಿ ಕೊಡ್ತೀವಿ ಅಂದಿದ್ದು ಎಷ್ಟು ಸತ್ಯವೋ,ಅಷ್ಟೇ ಸತ್ಯ ಕೇಂದ್ರ ಸರ್ಕಾರ ಅಕ್ಕಿ ಕೊಡಲ್ಲ ಅಂತಿರುವುದು.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದ್ದಕ್ಕೂ ಇವರುಗಳೂ ಸಹಿಸದೇ ಅಪಹಾಸ್ಯ ಮಾಡುತ್ತಿರುವುದು ನೋಡಿದರೇ ತಿಳಿಯುತ್ತದೆ ಇವರಲ್ಲಿ ಬಡವ ಯಾವ ರೀತಿ ಸಿಲುಕಿ ಒದ್ದಾಡಿದ್ದನೆಂದು, ಇಂತಹ ಸಂದರ್ಭವನ್ನು ಬಡವ್ರು ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲು ಸರಿಯಾದ ಪಾಠ ಕಲಿಸುವ ಪೂರ್ವ ಸಿದ್ದತೆಯೊಂದಿಗೆ ತಯಾರಗಬೇಕು ಎಂದು ಕರೆ ನೀಡಿದ್ದಾರೆ.