ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಮೈಗೂಡಲಿ : ಡಾ. ಸೇಡಂ

0
17

ಕಲಬುರಗಿ: ಸ್ವಾರ್ಥ ಜೀವನ ಸಾಗಿಸಿದರೆ ಬದುಕಿಗೆ ಅರ್ಥವಿಲ್ಲ. ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕೆಂಬ ಮನೋಭಾವನೆ ಮೈಗೂಡಿಸಿಕೊಂಡರೆ ಸುಂದರ ಸಮಾಜ, ದೇಶ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.

ನಗರದ ಸಮೀಪದ ಝಾಪೂರ ಗ್ರಾಮದಲ್ಲಿ ಕಲಬುರಗಿಯ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸೆ’್ಥಯ ‘ಶ್ರೀ ಸಾಯಿ ಪ್ರಸಾದ ಎಂ.ಎಸ್.ಡಬ್ಲ್ಯೂ ಕಾಲೇಜ್’ನ ಸಮಾಜ ಕಾರ್ಯದ ಒಂದು ವಾರ ಜರುಗಲಿರುವ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಶಿಬಿರವು ಜೀವನದ ಪಾಠವನ್ನು ಕಲಿಸುತ್ತದೆ. ಶಿಸ್ತು, ಸಮಯಪಾಲನೆ, ಶ್ರಮದ ಮಹತ್ವ, ಸಮಾನತೆ, ಕಾಯಕ ಪ್ರಜ್ಞೆ, ಪರಿಸರ ಸಂರಕ್ಷಣೆ, ಆರೋಗ್ಯ, ನೈತಿಕ ಮೌಲ್ಯಗಳು ಬೆಳೆಸುತ್ತದೆ. ಶಿಬಿರದ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಸಮಾಜ ಕಾರ್ಯ ಅಧ್ಯಯನವು ಪ್ರಾಯೋಗಿಕವಾದ ಕಾರ್ಯವಾಗಿದೆ. ಶಿಬಿರಾರ್ಥಿಗಳು ಇಂತಹ ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಅಲ್ಲಿನ ಜನರಿಗೆ ಸ್ವಚ್ಚತೆ, ಶಿಕ್ಷಣ, ಹೊಸ ಆಲೋಚನೆ, ಸಮಯ ಪ್ರಜ್ಞೆಯಂತಹ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡಬೇಕು. ಗ್ರಾಮದ ಸಮಗ್ರ ಅಧ್ಯಯನವನ್ನು ಮಾಡಿ, ಅಲ್ಲಿನ ಸಮಸ್ಯೆಗಳಿಗೆ ಸಾಧ್ಯವಾದರೆ ಪರಿಹಾರ ಮಾಡುವುದು ಮತ್ತು ಸಾಧ್ಯವಾಗದಿದ್ದರೆ ಸಂಬಂಧಿಸಿದವರಿಗೆ ಮಾಹಿತಿಯನ್ನು ಮುಟ್ಟಿಸಿ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಜಗನಾಥ ಈಟಿ, ಅಂಬಾರಾಯ ತಂಗಾ, ಸುಜಯ್ ಎಸ್.ವಂಟಿ, ಸುಮಿತ್ರಾ ಗಾಯಕವಾಡ, ಬಸವರಾಜ ಎಸ್.ಪುರಾಣೆ, ಅಭಯಪ್ರಕಾಶ, ದೇವರಾಜ ಕನ್ನಡಗಿ, ಸುರೇಶ ಮಾಂಗ, ಪೀರಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ಮೇಲಮನಿ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಶ್ರಮದಾನ, ಸ್ವಚ್ಛತಾ ಕಾರ್ಯ, ಸಾಮಾಜಿಕ ಜಾಗೃತಿ, ವಿಶೇಷ ಉಪನ್ಯಾಸಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here