ಶಹಾಬಾದ: ಮಳೆರಾಯನ ಕೃಪೆ ಇಲ್ಲದಿರುವ ಸಂದರ್ಭದಲ್ಲೂ ಉದ್ಯೋಗ ಖಾತ್ರಿ ಯೋಜನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವುದು ರೈತರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಅನುಕೂಲವಾಗಿದೆ ಎಂದು ಕಾಯಕ ಬಂಧು ಮಲ್ಲಿಕಾರ್ಜುನ ದೊಡ್ಡಿ ಹೇಳಿದರು.
ಅವರು ಮರತೂರ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಡಾ.ಬಸವರಾಜ ಪಾಟೀಲ ಅವರ ಮನೆಯ ಮುಂದಿನ ಹಳ್ಳ ಹೂಳೆತ್ತುವ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಳೆರಾಯ ಕೃಪೆ ತೋರಿದ್ದರೇ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು.ಆದರೆ ಮಳೆ ಬರದ ಕಾರಣ ಬರಗಾಲದ ಛಾಯೆ ಮೂಡಿದೆ.
ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಕೆಲಸ ರೈತರಿಗೆ, ಕೂಲಿ ಕಾರ್ಮಿಕರಿಗೆ ಕೈಹಿಡಿಯಲಿದೆ. ನರೇಗಾ ಕಾಮಗಾರಿ ಕೈಗೊಳ್ಳಲು ರೈತರು, ಕೂಲಿ ಕಾರ್ಮಿಕರು ಮುಂದೆ ಬರುತ್ತಿದ್ದು ಬಹುತೇಕ ಪಂಚಾಯತ್‍ಗಳಲ್ಲಿ ಕೆಲಸ ಪುನರಾರಂಭವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದೆ. ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಒಳಗಟ್ಟಿ, ಎರೆಹುಳು ತೊಟ್ಟಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ.ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಯಶಸ್ವಿ ಅನುμÁ್ಠನಕ್ಕೆ ರೈತರು, ಕೂಲಿ ಕಾರ್ಮಿಕರ ಸಹಕಾರ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಯಕ ಮಿತ್ರ ನಾಗವೇಣಿ.ಎಮ್.ದೊಡ್ಡಿ, ಕೂಲಿ ಕಾರ್ಮಿಕರು ಇತರರು ಇದ್ದರು.