‘ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತು ಎರಡು ದಿನಗಳ ಕಾರ್ಯಾಗಾರ

0
39

ಕಲಬುರಗಿ: “ಜ್ಞಾನ, ಪ್ರಜ್ಞಾ, ಮತ್ತು ಸತ್ಯದ ಅನ್ವೇಷಣೆಯ ಚಿಂತನೆಯನ್ನು ಭಾರತೀಯ ತತ್ವಶಾಸ್ತ್ರದಲ್ಲಿ ಮಾನವನ ಜೀವನದ ಅತ್ಯುನ್ನತ ಗುರಿ ಎಂದು ಪರಿಗಣಿಸಲಾಗಿದೆ” ಎಂದು ಸಿಯುಕೆನ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.

ಸಿಯುಕೆ ಆಯೋಜಿಸಲಿರುವ ʼಭಾರತೀಯ ಜ್ಞಾನ ವ್ಯವಸ್ಥೆ: ಸಂಶೋಧನೆಯ ಪ್ರಮುಖ ಕ್ಷೇತ್ರಗಳುʼ ಕಾರ್ಯಾಗಾರದ ಕರಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಅವರು ಮುಂದುವರೆದು ಮಾತನಾಡಿ “ಭಾರತೀಯ ಜ್ಞಾನ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಉನ್ನತ ಮಟ್ಟದ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಿದ ಜ್ಞಾನದ ಎಲ್ಲಾ ವ್ಯವಸ್ಥಿತವಾದ ವಿಭಾಗಗಳನ್ನು ಒಳಗೊಂಡಿದೆ. ಇದು ಬುಡಕಟ್ಟು ಸಮುದಾಯಗಳು ಸೇರಿದಂತೆ ಭಾರತದ ವಿವಿಧ ಸಮುದಾಯಗಳ ಸಂಪ್ರದಾಯಗಳು, ಆಚರಣೆಗಳು, ಸಂಸ್ಕರಿಸಿದ ಮತ್ತು ತಲೆಮಾರುಗಳವರೆಗೆ ಸಂರಕ್ಷಿಸಲಾದ ಜ್ಞಾನವನ್ನು ಹೊಂದಿದೆ.

ಭಾರತೀಯ ಜ್ಞಾನ ವ್ಯವಸ್ಥೆ (IಏS) ಇಂದಿನ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಸ್ತುತವಾಗಿದೆ. ಇದು ಗಣಿತ, ಖಗೋಳಶಾಸ್ತ್ರ, ತತ್ವಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಯೋಗ, ವಾಸ್ತುಶಿಲ್ಪ, ಔಷಧ, ಕೃಷಿ, ಎಂಜಿನಿಯರಿಂಗ್, ಭಾμÁಶಾಸ್ತ್ರ, ಸಾಹಿತ್ಯ, ಕ್ರೀಡೆ, ಆಟಗಳು, ಆಡಳಿತ, ಸಂಸ್ಕøತಿ, ರಾಜಕೀಯ ಮತ್ತು ಸಂರಕ್ಷಣೆಯಂತಹ ವಿಭಾಗಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಶೈಕ್ಷಣಿಕ ನೀತಿ 2020 ಶಿಕ್ಷಣದ ಎಲ್ಲಾ ಹಂತಗಳಲ್ಲಿ ನಿಖರವಾದ ಮತ್ತು ವೈಜ್ಞಾನಿಕ ರೀತಿಯಲ್ಲಿ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು (IಏS) ಅಳವಡಿಸಲು ಶಿಫಾರಸು ಮಾಡುತ್ತದೆ. ಅದರಂತೆ, ಯುಜಿಸಿ ಇತ್ತೀಚೆಗೆ ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನವನ್ನು ಅಳವಡಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದಕ್ಕೆ ಅನುಗುಣವಾಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಭಾರತೀಯ ಜ್ಞಾನದ ವಿವಿಧ ವಿಭಾಗಗಳ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ” ಎಂದು ಅವರು ಹೆಳಿದರು.

ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪೆÇ್ರ.ಬಸವರಾಜ್. ಪಿ. ಡೋಣೂರ್ ಮಾತನಾಡಿ, “ಈ ಕಾರ್ಯಾಗಾರವು ವಿವಿಧ ವಿಭಾಗಗಳ ಅಧ್ಯಾಪಕರನ್ನು ಪಠ್ಯಕ್ರಮದಲ್ಲಿ ಐಕೆಎಸ್ ಅನ್ನು ಅಳವಡಿಸಲು ಅಗತ್ಯವಾದ ಮಾರ್ಗದರ್ಶನದೊಂದಿಗೆ ಸಜ್ಜುಗೊಳಿಸುತ್ತದೆ ಮತ್ತು ಐಕೆಎಸ್‍ನ ನಿರ್ದಿಷ್ಟ ವಿಭಾಗಗಳು ಮತ್ತು ಕ್ಷೇತ್ರಗಳಲ್ಲಿನ ತಜ್ಞರೊಂದಿಗೆ ಹೊಸ ಸಂಶೋಧನಾ ಆಲೋಚನೆಗಳನ್ನು ಚರ್ಚಿಸಲು ಯುವ ಸಂಶೋಧಕರಿಗೆ ಮತ್ತು ಶಿಕ್ಷಣತಜ್ಞರಿಗೆ ವೇದಿಕೆಯನ್ನು ಒದಗಿಸುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ, ಸಿಯುಕೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಇಂದಿನ ಶೈಕ್ಷಣಿಕ ಚೌಕಟ್ಟಿನೊಳಗೆ ತರಲು ದೃಷ್ಟಿಕೋನವನ್ನು ಬೆಳೆಸಲು ಶಿಕ್ಷಣ ತಜ್ಞರು ಮತ್ತು ಸಂಶೋಧಕರನ್ನು ಸಾಮಾನ್ಯ ವೇದಿಕೆಯಲ್ಲಿ ತರಲು ಈ ಜವಾಬ್ದಾರಿಯುತ ಪ್ರಯತ್ನವನ್ನು ಮಾಡುತ್ತಿದೆ. ಈ ಕಾರ್ಯಾಗಾರದಲ್ಲಿ ಸುಮಾರು 250 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ” ಎಂದು ಅವರು ಹೇಳಿದರು.

ಕಾರ್ಯಾಗಾರವು 21 ಮತ್ತು 22 ನೇ ಜುಲೈ, 2023 ರಂದು ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಆಸಕ್ತ ಶಿಕ್ಷಣತಜ್ಞರು www.cuk.ac.in ಅನ್ನು ಭೇಟಿ ಮಾಡಬಹುದು. ಈ ಸಂದರ್ಭದಲ್ಲಿ ಕಾರ್ಯಾಗಾರದ ಸಂಯೋಜಕರಾದ ಡಾ.ಬಸವರಾಜ ಕುಬಕಡ್ಡಿ, ಡಾ.ಆರ್.ಕೆ. ಚೈತನ್ಯ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here