ಸುರಪುರ: ಎನ್.ಮುತ್ತಪ್ಪ ರೈಯವರ ಸಂಸ್ಥಾಪನೆಯ ಜಯಕರ್ನಾಟಕ ಸಂಘಟನೆಯು ರಾಜ್ಯದಲ್ಲಿ ಅನೇಕ ಸಮಸ್ಯೆಗಳ ವಿರುಧ್ಧ ದೊಡ್ಡ ಮಟ್ಟದ ಹೋರಾಟವನ್ನು ಮಾಡುವ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.
ಜಯಕರ್ನಾಟಕ ನಗರ ಘಟಕದ ಉದ್ಘಾಟನೆ ಹಾಗು ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಸದಸ್ಯ ವೇಣುಮಾಧವ ನಾಯಕ ಮಾತನಾಡಿ,ಕನ್ನಡ ನಾಡು ನುಡಿ ವಿಷಯದಲ್ಲಿ ಜಯಕರ್ನಾಟಕ ಸಂಘಟನೆಯ ಹೋರಾಟ ಅನನ್ಯವಾದುದು.ಇನ್ನೂ ದೊಡ್ಡ ಮಟ್ಟದಲ್ಲಿ ಸಂಘಟನೆಯ ಬೆಳೆಯಲೆಂದು ಹಾರೈಸಿದರು.
ಮುಖಂಡ ಬಲಭೀಮ ನಾಯಕ ಬೈರಿಮಡ್ಡಿ ಜ್ಯೋತಿ ಬೆಳಗಿಸುವ ಮೂಲಕ ನಗರ ಘಟಕ ಉದ್ಘಾಟಿಸಿದರು.ನಂತರ ಸಾಧಕರಾದ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸುರಪುರ,ಶ್ರೀಶೈಲ ಒಡೆಯರ್ ಅಬಕಾರಿ ನಿರೀಕ್ಷರು ಸುರಪುರ,ಸಾಹಿತಿ ಶ್ರೀನಿವಾಸ ಜಾಲವಾದಿ,ಹೋರಾಟಗಾರ ವೆಂಕಟೇಶ ನಾಯಕ ಬೈರಿಮರಡಿ ಹಾಗು ಮರೆಮ್ಮ ದೇವಿ ಅರ್ಚಕ ಶ್ರೀನಿವಾಸ ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮರಡಿ ನೇತೃತ್ವ ವಹಿಸಿದ್ದರು.ಕಾರ್ಯಕ್ರಮದಲ್ಲಿ ವೆಂಕಟೇಶ ನಾಯಕ ಅರಕೇರಿ,ಭೀಮಣ್ಣ ಬೋಸಗಿ,ಯಲ್ಲಪ್ಪ ಕಾಡ್ಲೂರ,ಶರಣುನಾಯಕ ಬೈರಿಮರಡಿ,ವೆಂಕಟೇಶ ತುಳೇರ,ವಿಜಯಕುಮಾರ ಮಗ್ದಂಪುರ,ಬಸವರಾಜ ಕೊಡೆಕಲ್,ಮಲ್ಲೇಶಿ ಪಾಟೀಲ,ಇಸ್ಮಾಯಿಲಸಾಬ,ಶರ್ಮುದ್ದಿನ್ ಮುಲ್ಲಾ,ಶರಣು ಕಳ್ಳಿಮನಿ,ಸೋಪಣ್ಣ ಹಳಿಸಗರ,ಮಲ್ಲಿಕಾರ್ಜುನ ಶ್ರೀನಿವಾಸಪುರ,ಯಲ್ಲನಗೌಡ ಇರಬಗೇರಾ,ಹಣಮಗೌಡ ಶಖಾಪುರ,ಶರಣಪ್ಪ ಬೈರಿಮರಡಿ,ಹಣಮಂತ್ರಾಯ ಮೇಟಿಗೌಡ,ಮೌನೇಶ ದಳಪತಿ,ದೇವುನಾಯಕ ಜಾಲಿಬೆಂಚಿ,ರಾಮದೇವ ದೇವತ್ಕಲ್,ಮಲ್ಲು ಪೂಜಾರಿ,ಸೋಮು ಗುಡಿಹಾಳ ಇತರರಿದ್ದರು.ಪುರುಷೋತ್ತಮ ನಾಯಕ ನಿರೂಪಿಸಿದರು,ನಿಂಗಪ್ಪ ನಾಯಕ ಬಿಜಾಸಪುರ ಸ್ವಾಗತಿಸಿದರು,ಯಲ್ಲಪ್ಪ ನಾಯಕ ಕಲ್ಲೋಡಿ ವಂದಿಸಿದರು.