ಕಲಬುರಗಿ ಕಸಾಪದಿಂದ ಡಿಜೆಟೆಲ್ ಓದುವ ದಿನಾಚರಣೆ

0
48

ಕಲಬುರಗಿ: ಮಾನವನ ಬದುಕನ್ನು ಬದಲಾವನೆ ಮಾಡುವ ಶಕ್ತಿ ಪುಸ್ತಕಗಳಿಗೆ ಇದೆ. ಇದಲ್ಲದೆ ಪುಸ್ತಕಗಳನ್ನು ಓದುವುದರಿಂದ ಮೃಗದಂಥ ಮನುಷ್ಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತವೆ ಎಂದು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಬಾಬುರಾವ ಪಾಟೀಲ ಚಿತ್ತಕೋಟಾ ಹೇಳಿದರು.

ಕೇರಳ ರಾಜ್ಯದ ಗ್ರಂಥಾಲಯ ಮತ್ತು ಸಾಕ್ಷರತಾ ಚಳುವಳಿಯ ಪಿತಾಮಹ ಪಿ.ಎನ್.ಪನಿಕರ ಅವರ ಸವಿನೆನಪಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ತಿಂಗಳಪರ್ಯಂತ ನಡೆಯುವ ಡಿಜೆಟೆಲ್ ಓದುವ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಕನ್ನಡ ಭವನದ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಘಟಕದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಉತ್ತಮ ಪುಸ್ತಕಗಳು ನಮ್ಮ ವ್ಯಕ್ತಿತ್ವ ಮತ್ತು ಚಿಂತನೆಯನ್ನು ಶ್ರೀಮಂತಗೊಳಿಸುವ ಸಾಧನವಾಗಿವೆ. ಹೀಗಾಗಿ ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಬದಲಾವಣೆ ಮತ್ತು ಸೃಜನಾತ್ಮಕ ಹವ್ಯಾಸಗಳನ್ನು ಪುನರಾರಂಭಿಸಲು, ಅವರನ್ನು ಪುಸ್ತಕಗಳಿರುವ ಗ್ರಂಥಲಯಗಳ ಕಡೆಗೆ ಆಕರ್ಷಿತರಾಗಿಸಬೇಕಾಗಿದೆ ಎಂದರು.

ಗ್ರಂಥಾಲಯದ ಪ್ರಮುಖರಾದ ಪದ್ಮಾವತಿ ನಾಯಕ್, ಸುರೇಶ ಕರ್ನಾಳಕರ್, ಪ್ರಮುಖರಾದ ವಿಠೋಬಾ ಎಲ್.ಖಣದಾಳ, ಲಕ್ಷ್ಮಣರಾವ ನಿಂಬೂರ, ಜಾರ್ಜ್, ಪ್ರಭವ ಪಟ್ಟಣಕರ್, ಶಾಂತಯ್ಯಾ ಮಠಪತಿ, ಸಿದ್ದಣ್ಣಗೌಡ ಪಾಟೀಲ ರಾಜನಾಳ, ರಾಜೇಂದ್ರ ಮಾಡಬೂಳ, ರಾಜೇಶ್ವರಿ ಸಾಹು, ಸಂಗೀತಾ, ಶೇಖರ್, ಕಾಳಗಿ ಕಸಾಪ ಅಧ್ಯಕ್ಷ ಸಂತೋಷ ಕುಡಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here