ಕಲಬುರಗಿ: ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಈಗಾಗಲೆ ಎರಡು ಹಂತದಲ್ಲಿ ಕೋವಿಡ್ ಲಸಿಕೆ ನೀಡಿಕೆಗೆ ಚಾಲನೆ ನೀಡಿದ್ದು, ಇವರೊಂದಿಗೆ ಮಾರ್ಚ್ 1 ರಿಂದ ಮೂರನೇ ಹಂತದ ಅಂಗವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ರಿಂದ 59 ವರ್ಷದೊಳಗಿನ ಧೀರ್ಘ ಕಾಯಿಲೆಯಿಂದ ಬಳಲುತ್ತಿರುವವರೆಗೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಕಲಬುರಗಿ ನಗರದ ಬಸವೇಶ್ವರ ಮತ್ತು ಕೆ.ಬಿ.ಎನ್.ಆಸ್ಪತ್ರೆಗಳಲ್ಲಿ 250 ರೂ. ಪಾವತಿ ಮಾಡಿ ಕೋವಿಡ್ ಲಸಿಕೆ ಪಡೆಯಬಹುದಾಗಿದೆ ಎಂದಿದ್ದಾರೆ.
ಡಾ.ಹಾಲಸ್ವಾಮಿ ಕೆ.ಜಿಗೆ ವಿದ್ಯಾರ್ಥಿಗಳು, ಹಿರಿಯ ಪತ್ರಕರ್ತರಿಂದ ಸನ್ಮಾನ
ಕೋವಿಡ್ ಲಸಿಕೆ ಪಡೆಯಬೇಕಾದರೆ ಧೀರ್ಘಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ವೈದ್ಯಾಧಿಕಾರಿಗಳಿಂದ ಕಾಯಿಲೆಯ ಬಗ್ಗೆ ದೃಢೀಕರಣ ಪತ್ರದ ಜೊತೆಗೆ cowin.gov.in ಅಥವಾ ಅರೋಗ್ಯ ಸೇತು ಆಪ್ ಮೂಲಕ ಅನ್ ಲೈನ್ ಅಥವಾ ಆಫ್ ಲೈನ್ ಮೂಲಕ ನೊಂದಾಯಿಸಬೇಕು. ನೋಂದಣಿಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಉದ್ಯೋಗ ಪ್ರಮಾಣ ಪತ್ರ, ಕಚೇರಿಯಿಂದ ನೀಡಲಾದ ಗುರುಚಿನ ಚೀಟಿ ಅವಶ್ಯಕವಾಗಿರುತ್ತದೆ.
ಮುಂದಿನ ದಿನದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ನೊಂದಾಯಿತ ಖಾಸಗಿ ಅಸ್ಪತ್ರೆಗಳಲ್ಲಿಯೂ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ಲಸಿಕೆ ಪಡೆಯಬಹುದಾಗಿದೆ ಎಂದು ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.