ಕಲಬುರಗಿ-ಬೆಂಗಳೂರು ಹೊಸ ರೈಲು ಶೀಘ್ರ ಪ್ರಾರಂಭ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಭರವಸೆ

0
25

ಕಲಬುರಗಿ: ಕಲಬುರಗಿ- ಬೆಂಗಳೂರು ಮದ್ದೆ ಶೀಘ್ರ ಹೊಸ ರೈಲು ಪ್ರಾರಂಭಿಸುವುದಾಗಿ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಭರವಸೆ ನೀಡಿದ್ದಾರೆಂದು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಯೊಂದಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವರನ್ನು ಸಂಸದರಾದ ಡಾ. ಉಮೇಶ್ ಜಾದವ್ ಭೇಟಿ ನೀಡಿ, ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಯೊಂದಿಗೆ ರೈಲ್ವೆ ಸಚಿವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದರು.

Contact Your\'s Advertisement; 9902492681

ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಹೊಸ ರೈಲು ನಡೆಸುವುದು, ಮುಂಬೈ ಸೋಲಾಪುರ್ ಒಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಕಲಬುರಗಿವರೆಗೆ ವಿಸ್ತರಿಸುವುದು, ಇಲ್ಲವಾದರೆ ಬೆಂಗಳೂರು ಕಲಬುರಗಿ ಮಧ್ಯೆ ಹೊಸ ಒಂದೇ ಭಾರತ್ ರೈಲನ್ನು ಪ್ರಾರಂಭಗೊಳಿಸುವುದರ ಬಗ್ಗೆ ಚರ್ಚಿಸಿದರು. ಜಿಲ್ಲೆಯಲ್ಲಿ ಹಾಗೆಯೇ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿವಿಧ ರೈಲ್ವೆ ಸಂಬಂಧಿತ ಪ್ರತಿಭಟನೆಗಳನ್ನು ಉಲ್ಲೇಖಿಸಿದರು. ಕಲಬುರಗಿ ಬೆಂಗಳೂರು ಹೋಗುವ ರೈಲಿನ್ ಬೋಗಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣುಸುತ್ತಿರುವ ದಿನಪತ್ರಿಕೆಗಳಲ್ಲಿ ಆಗಿರುವ ಸುದ್ದಿಗಳ ಬಗ್ಗೆ ಪ್ರಸ್ತಾಪಿಸಿದರು.

ಕಲಬುರಗಿ ಬೆಂಗಳೂರು ರೈಲು ಪ್ರಯಾಣಿಕರ ಸಂಖ್ಯೆಯ ಕುರಿತು ಇತ್ತೀಚಿನ RTI ನಲ್ಲಿ ತಿಂಗಳು ಒಂದು ವರೆ ಲಕ್ಷಕ್ಕೂ ಹೆಚ್ಚು ಜನ ಕಲಬುರಗಿ ಬೆಂಗಳೂರು ಕಲಬುರಗಿ ಮಧ್ಯೆ ಪ್ರಯಾಣುಸುತ್ತಿರುವ ಮಾಹಿತಿ ಬಗ್ಗೆ ಸಚಿವರ ಗಮನಕ್ಕೆ ತಂದರು. ಜಿಲ್ಲೆಯ ಶಹಾಬಾದ್ ಸ್ಟೇಷನ್ನಲ್ಲಿ ಚೆನ್ನೈ ಎಗ್ಮೊರ್ ಎಕ್ಸ್ಪ್ರೆಸ್, ಮುಂಬೈ ನಾಗರ್ಕೋಯಿಲ್ ಎಕ್ಸ್ಪ್ರೆಸ್, ಕೊನಾರ್ಕ್ ಎಕ್ಸ್ಪ್ರೆಸ್, ಮುಂಬೈ ಹೈದರಾಬಾದ್ ಎಕ್ಸ್ಪ್ರೆಸ್, ಹೈದರಾಬಾದ್ ವಿಜಯಪುರ ಎಕ್ಸ್ಪ್ರೆಸ್ ಐದು ರೈಲುಗಳ ನಿಲ್ಲಿಸುವುದರ ಬಗ್ಗೆ ಚರ್ಚಿಸಿದರು.

ಜಾಲನಾ ತಿರುಪತಿ ಸ್ಪೆಷಲ್ ಎಕ್ಸ್ಪ್ರೆಸ್,  ಸೋಲಾಪುರ್ ಮುಂಬೈ ಎಕ್ಸ್ಪ್ರೆಸ್, ಸೋಲಾಪುರ್ ತಿರು ಪತಿ ಸ್ಪೆಷಲ್ ಎಕ್ಸ್ ಪ್ರೆಸ್ ರೈಲುಗಳನ್ನು ಕಡ್ಡಾಯವಾಗಿ ಕಮಲಪುರ್ ರೈಲ್ವೆ ಸ್ಟೇಷನ್ ನಲ್ಲಿ ನಿಲ್ಲಿಸಲು ಮನವಿ ಮಾಡಿದರು.  ಅದೇ ರೀತಿ ಚಿತ್ತಾಪುರ ರೈಲ್ವೆ ಸ್ಟೇಷನ್ ನಲ್ಲಿ ಗಾಡಿ ಸಂಖ್ಯೆ 07003/04 ನ್ನು ನಿಲ್ಲಿಸಲು ಕೊರಿದರು ಎನ್ನಲಾಗಿದೆ.

ಕೋವಿಡ್ ಮುಂಚೆ ನಡೆಯುವ ಎಲ್ಲಾ ರೈಲುಗಳನ್ನು ಪುನಃ ಸ್ಥಾಪನೆಗೊಳಿಸಲು ಮನವಿ ಮಾಡಿದರು ಅದರಲ್ಲಿ ವಿಶೇಷವಾಗಿ ಸೋಲಾಪುರ್ ಕಲ್ಬುರ್ಗಿ ಗುಂತಕಲ್ ಡೆಮೋ (DEMU), ಸಿಕಂದರಾಬಾದ್  ಚಿತ್ತಾಪುರ ಮೇಮು (MEMU) ಮತ್ತು ಫಲಕನುಮಾ ವಾಡಿ ಕಾಚಿಗುಡ ಎಕ್ಸ್ಪ್ರೆಸನ್ನು ಕಲ್ಬುರ್ಗಿ ವರೆಗೆ ವಿಸ್ತರಿಸುವುದು.

ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಶೀಘ್ರವೇ ಕಲ್ಬುರ್ಗಿ ಬೆಂಗಳೂರು ಮಧ್ಯೆ ರೈಲು ಶುರು ಮಾಡುವ ಬಗ್ಗೆ ಭರವಸೆ ನೀಡಿದರು ಹಾಗೆಯೇ ಸಂಸದರು ಕೋರಿದ ವಿವಿಧ ಬೇಡಿಕೆಗಳಿಗೆ ಶೀಘ್ರವೇ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here