ತೆಲುಗು ನಾಡಿನಲ್ಲಿ ಕನ್ನಡದ ಝೇಂಕಾರ ಮೊಳಗಿಸುತ್ತಿರುವ ದೇವಿಂದ್ರರವರ ಕಾರ್ಯ ಹೆಮ್ಮೆ

0
317

ಕಲಬುರಗಿ: ತೆಲುಗು ನಾಡಿನಲ್ಲಿ ರಾಜ್ಯದ ರಾಜಧಾನಿ ಹೈದರಾಬಾದ-ಸಿಕಂದರಾಬಾದ ಅವಳಿನಗರದಲ್ಲಿ ಕನ್ನಡದ ಏಳಿಗೆಗಾಗಿ ದುಡಿಯುತತಿರುವ ಏಕೈಕ ಕನ್ನಡ ಸಂಸ್ಥೆಯಾದ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷರಾದ ಧರ್ಮೇಂದ್ರ ಪೂಜಾರಿ ಬಗ್ದೂರಿಯವರ ಕಾರ್ಯ ಅಮೋಘ, ಅನನ್ಯ, ಅವಿಸ್ಮರಣೀಯವಾಗಿದೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಬೀದರ ಜಿಲ್ಲೆಯ ಬಸವಕಲ್ಯಾಣದ ಒಬ್ಬ ವ್ಯಕ್ತಿ ತೆಲುಗು ನಾಡಿನಲ್ಲಿ ಕನ್ನಡ ಶಕ್ತಿಯಾಗಿ, ಕನ್ನಡ ಸೇವೆ ಮಾಡುತ್ತ ಕನ್ನಡದ ಝೇಂಕಾರವನ್ನು ಮೊಳಗಿಸುತ್ತಿರುವುದು ಅಭಿನಂದನೀಯ ಕಾರ್ಯ. ನಮ್ಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಗುರುವಾರ ನಗರದ ಶ್ರೀನಗರ ಕಾಲೋನಿಯಲ್ಲಿ ಆಯೋಜಿಸಿದ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಈ ನಗರದಲ್ಲಿ 20 ವರ್ಷದಿಂದ ಕನ್ನಡ ಸೇವೆ ಮಾಡುತ್ತಿರುವ ಈ ಸಂಸ್ಥೆಯು ಸಾರ್ವಜನಿಕವಾಗಿ ಎಲ್ಲಾ ಕನ್ನಡಿಗರನ್ನು ಒಂದೆಡೆ ಸೇರಿಸುವ ಮಹಾನ ಕಾರ್ಯ ಮಾಡುತ್ತಿರುವುದು ನಮ್ಮಗೆ ತುಂಬಾ ಸಂತಸ ತಂದಿದೆ. ಹಾಗೂ ಸಂಸ್ಥೆಯ ಅಧ್ಯಕ್ಷರಾದ ಕ್ರೀಯಾಶೀಲ ವ್ಯಕ್ತಿಯು ಹಾಗೂ ವಿಶೇಷ ಕನ್ನಡದ ಅಭಿಮಾನವನ್ನು ಮೆರೆಯುತ್ತ. ನಗರಕ್ಕೆ ಬಂದಂತ ಎಲ್ಲಾ ಕನ್ನಡಿಗರಿಗೆ ಗೌರವ ಪೂರ್ವಕವಾಗಿ ಕಾಣುವ ಏಕೈಕ ವ್ಯಕ್ತಿ ಎಂದರೆ ಧರ್ಮೇಂದ್ರ ಪೂಜಾರಿ ಬಗ್ದುರಿಯವರ ಕಾರ್ಯ ಎಲ್ಲರೂ ಗೌರಸುವಂತಿದೆ.

Contact Your\'s Advertisement; 9902492681

ತೆಲುಗು ನಾಡಿನಲ್ಲಿ 2005ರಿಂದ ಆರಂಭಿಸಿರುವ ಈ ಸಂಸ್ಥೆಯು ಒಂದು ನಗರದಲ್ಲಿ ಸುಸಜ್ಜಿತವಾದ ಬೃಹತ ಭವ್ಯ ಕನ್ನಡ ಭವನ ನಿರ್ಮಾಣದ ಕನಸ್ಸು ಹೊತ್ತು ಕರ್ನಾಟಕ ಸರ್ಕಾರದೊಂದಿಗೆ ಒಡನಾಡ ಹೊಂದಿರುವ ಈ ಸಂಸ್ಥೆಯು ಪ್ರತಿ ವರ್ಷ ನವೆಂಬರಲ್ಲಿ ಕನ್ನಡೋತ್ಸವ ಸಂಭೃಮವನ್ನು ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ನಮ್ಮ ಕಸಾಪ ವತಿಯಿಂದ ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಅಧಿಕಾರಿಗಳಿಗೆ ಕನ್ನಡ ಭವನ ನಿರ್ಮಾಣಕ್ಕೆ ನಾವು ಸಂಪೂರ್ಣ ಬೆಂಬಲ ನೀಡುವುದ್ದಾಗಿ ಶಿವರಾಜ ಅಂಡಗಿ ಅವರು ಅಭಿನಂದಿಸುವುದರೊಂದಿಗೆ ನಿಮ್ಮೊಂದಿಗೆ ನಾವು ಸದಾ ಸಿದ್ದರಿದ್ಧೇವೆಂದು ಬೆಂಬಲ ವ್ಯಕ್ತಪಡಿಸಿದರು.

ಈ ಸಂಸ್ಥೆಯು ಪ್ರತಿವರ್ಷವು ಹೊರನಾಡಿನಲ್ಲಿ ಕನ್ನಡ ಸೇವೆ ಮಾಡುವವರನ್ನು ಗುರುತಿಸಿ ಹೆಮ್ಮೆಯ ಕನ್ನಡಿಗ ಮತ್ತು ಕನ್ನಡ ಕಂಠೀರವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ. ಹಾಗೂ ತೆಲುಗು ನಾಡಿನಲ್ಲಿ ಕನ್ನಡದ ಕವಿಗೋಷ್ಠಿ. ಕನ್ನಡ ಸಂವಾದ, ವಿಶೇಷ ಸಮಾರಂಭಗಳು ಆಯೋಜಿಸುತ್ತ ಹೈದರಾಬಾದ ಕನ್ನಡಿಗರಿಗೆ ಕನ್ನಡದ ಸಮಾರಂಭ ಆಯೋಜನೆ ಮಾಡುವುದು ತುಂಬಾ ಕಷ್ಟದ ಕೆಲಸ ಆದರು ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘ ಹೈದರಾಬಾದ ಮಾಡುತ್ತಿರುವ ಕಾರ್ಯ ಕನ್ನಡಿಗರಿಗೆ ಮಾದರಿಯಾಗಿದೆ ಎಂದು ನುಡಿದರು.

ಹೈದರಾಬಾದನಲ್ಲಿ ವಾಸಿಸಿರುವ ಒಟ್ಟು 12ಲಕ್ಷ ಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು. ಹಾಗು ನಗರದಲ್ಲಿ ಇರುವ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡಕ್ಕೆ ಅಭಿನಂದನೆ ತಿಳಿಸಿದರು. ಅವರ ಸಹಕಾರದಿಂದ ಇಲ್ಲಿ ಕನ್ನಡದ ಸಂಸ್ಕøತಿ ಸಂಪ್ರದಾಯವನ್ನು ಚಾಚು ತಪ್ಪದೆ ಮಾಡುತ್ತಿರುವುದು ಹಾಗೂ ಕನ್ನಡಿಗರಿಗೆ ಕನ್ನಡ ಅಭಿಮಾನವನ್ನು ಬೆಳೆಸುತ್ತಿರುವುದು ನೋಡಿದರೆ ತುಂಬಾ ಆನಂದವನ್ನು ನೀಡಿದೆ ಎಂದು ಅಂಡಗಿ ನುಡಿದರು.

ಸಮಾವೇಶದಲ್ಲಿ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷರಾದ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಮಾತನಾಡಿ ಹೈದರಾಬಾದ-ಸಿಕಿಂದರಾಬಾದನಲ್ಲಿ ವಾಸವಾಗಿರುವ ಎಲ್ಲಾ ಕನ್ನಡಿಗರ ಏಳಿಗೆಗಾಗಿ ನಮ್ಮ ಸಂಘ ಶ್ರಮಿಸುತ್ತಿದೆ. ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಬಂದರೆ ನಮ್ಮ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಮಾಡುವಲ್ಲಿ ಸುಮಾರು 20 ವರ್ಷದಿಂದ ಕಾರ್ಯ ಮಾಡುತ್ತಿದೆ ಎಂದು ನುಡಿದರು. ನಗರದಲ್ಲಿ ನಮ್ಮ ನಾಡಿನ ಕನ್ನಡದ ಸಮಾರಂಭ ಆಯೋಜನೆ ಮಾಡಲು ವ್ಯವಸ್ಥಿತವಾದ ಭವ್ಯ ಕನ್ನಡ ಭವನ ನಿರ್ಮಾಣ ಮಾಡಲು ನಮ್ಮ ಸಂಸ್ಥೆ ನಿರ್ಧಾರ ಮಾಡಿದೆ ಈ ನಿಟ್ಟಿನಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಚರ್ಚೆ ಮಾಡುತ್ತಿದೆ ಎರಡು ರಾಜ್ಯ ಸರ್ಕಾರದಿಂದ ಸಕರಾತ್ಮಕ ನಿಲುವು ಪ್ರಕಟಿಸಿವೆ ಮುಂದಿನ ದಿನಗಳಲ್ಲಿ ಕನ್ನಡ ಭವನ ನಿರ್ಮಾಣವಾಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ ಎಂದು ಧರ್ಮೇಂದ್ರ ಪೂಜಾರಿ ತಿಳಿಸಿದರು.

ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷರಾದ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಶಿವರಾಜ ಅಂಡಗಿ, ನಿವೃತ್ತ ಕೃಷಿ ಅಧಿಕಾರಿಗಳಾದ ಬಸವರಾಜ ಎನ್. ಪುಣ್ಣೆಶೆಟ್ಟಿ ಅವರಿಗು ಕನ್ನಡದ ಶ್ಯಾಲು ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯ ಕನ್ನಡದ ಉಪನ್ಯಾಸಕರಾದ ಡಾ ಧನರಾಜ ಧರಂಪೂರ, ಪ್ರಭು ಪೂಜಾರಿ, ಧೂಳಪ್ಪ ಶಿವದೆ ಓಕಳಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here