ಗ್ರಂಥಾಲಯವು ಓದುಗರನ್ನು ಸೆಳೆಯುವ ರೀತಿಯಲ್ಲಿರಬೇಕು

0
34

ಕಲಬುರಗಿ; ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕಚೇರಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಮೈಸೂರು, ಹಾಗೂ ಪ್ರಾದೇಶಿಕ ತರಬೇತಿ ಕೇಂದ್ರ ಕಲಬುರಗಿ ಮತ್ತು ಡಿಪಿಆರ್‍ಸಿ ವತಿಯಿಂದ 3 ದಿನಗಳ ಕಾಲ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕಾರ್ಯಕ್ರಮವನ್ನು ಗ್ರಾಮೀಣ ಭಾಗದ ಗ್ರಂಥಪಾಲಕರಿಗೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಪ್ರಾದೇಶಿಕ ತರಬೇತಿ ಕೇಂದ್ರದ ಬೋದಕರಾದ ಶಿವಪುತ್ರಪ್ಪ ಗೊಬ್ಬರು ರವರು ಉದ್ಥಾಟಿಸಿ ಮಾತನಾಡುತ್ತ, ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಸ್ಥಾಪನೆ ಗೊಂಡಿದ್ದು, ಈ ಗ್ರಂಥಾಲಯಗಳು ಓದುಗರನ್ನು ಸೆಳೆಯಲು ಉತ್ತಮ ರೀತಿಯಲ್ಲಿ ಇಟ್ಟುಕೊಂಡು, ಉತ್ತಮ ಸೇವೆ ನೀಡಿದರೆ ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

Contact Your\'s Advertisement; 9902492681

ತರಬೇತಿ ಕಾರ್ಯಕ್ರಮದÀಲ್ಲಿ ಸಂಸ್ಥೆಯ ಬೋಧಕರಾದ ಡಾ.ರಾಜು ಎಂ ರವರು ಮಾತನಾಡಿ ಗ್ರಂಥಾಲಯವು ವಿಶ್ವಕೋಶ ಇದ್ದಂತೆ ಆದ್ದರಿಂದ ಹೊಸ ಹೊಸ ಕೌಶಲ್ಯಗಳನ್ನು ಬಳಸಿಕೊಂಡರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು ತರಬೇತಿ ವೇದಿಕೆ ಮೇಲೆ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾವತಿ ಠಾಕೂರು ಹಾಗೂ ಶಂಕರ ರಾಠೋಡ ರವರು ಆಸೀನರಾಗಿದ್ದರು. ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ ಸರ್ವರವನ್ನು ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರ ಸಹಾಯಕರಾದ ಅಶ್ವೀನಿ ಪೂಜಾರಿ ರವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here