ಚಿಂತೆಯ ಸಂತೆಯಲ್ಲಿ ಚಿಂತನೆಯ ಆಲೋಚನೆ ಬೇಕು

0
33

ಕಲಬುರಗಿ: ಇರುವಂತೆ, ತೊರೆದು ಸಾವಿರ ಚಿಂತೆ, ಚಿಂತೆಯ ಸಂತೆಯಲ್ಲಿ ಚಿಂತನೆಯ ಆಲೋಚನೆ ಇದ್ದಾಗ ಮಾತ್ರ ಸಾಧನೆಯ ಶಿಖರವೇರಬಹುದು ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಬಿರಾದಾರ ಹೇಳಿದರು.

ನಗರದ ಮಾತೋಶ್ರೀ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಸ್ನೇಹ ಸಂಗಮ ವಿವಿಧೊದ್ದೇಶ ಸೇವಾ ಸಂಘ ಹಾಗೂ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ದಣಿವರಿಯದ ನಾಯಕ, ಸಮಾಜ ಸೇವಕ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹುಟ್ಟು ಹಬ್ಬ ಹಾಗೂ 26 ವರ್ಷ ದಿಂದಲೂ ಸಮಾಜ ಸಮಾಜ ಸೇವೆ ಗೈಯುತ್ತಿರುವ ನಿಮಿತ್ಯವಾಗಿ 2ನೇ ಮಾಲಿಕೆಯಾದ “ವಿಚಾರ ಸಂಕಿರಣ” ಉದ್ಘಾಟಿಸಿ ಮಾತನಾಡುತ್ತಾ ಶ್ರೀಯುತ ಅಟ್ಟೂರರು ನ್ಯಾಯವಾದಿಗಳ ಸಂಘದ ಹಲವಾರು ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು.

Contact Your\'s Advertisement; 9902492681

ಕಲಬುರಗಿಯಲ್ಲಿ ಉಚ್ಚ ನ್ಯಾಯಾಲಯ, ಕೆ ಏ ಟಿ ನ್ಯಾಯಾಲಯ ಸ್ಥಾಪಿಸಬೇಕು ಹಾಗೂ ಕಲಬುರಗಿ ಉಚ್ಚನ್ಯಾಯಾಲಯ ಪೀಠಕ್ಕೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆ ಸೇರಿಸಿಬೇಕೆಂಬ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಜನಪರ ಹೋರಾಟಗಳನ್ನು ರೂಪಿಸಿ ಹಲವಾರು ಜನರಿಗೆ ನ್ಯಾಯ ಒದಗಿಸಿ ಕೊಡಿಸುವುದರಲ್ಲಿ ಅಟ್ಟೂರರು ಮುಂದಾಳತ್ವ ವಹಿಸಿ ಹಲವಾರು ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಮಹಿಳಾ ಕಾನೂನ ಬಗ್ಗೆ ಉಪನ್ಯಾಸ ನೀಡಿದ ನ್ಯಾಯವಾದಿ ಗಣಪತರಾವ ಅಂಕಲಗಿ ಮಾತನಾಡುತ್ತಾ ಮಹಿಳೆಯರು ಕಾನೂನಿನ ಸಾಮಾನ್ಯ ಜ್ಞಾನ ಅರಿತುಕೊಳ್ಳಬೇಕು ಅಂದಾಗ ಮಾತ್ರ ಕೌಟುಂಬಿಕ ಜೀವನದಲ್ಲಿ ಕಲಹಗಳು ಕಡಿಮೆಯಾಗುತ್ತವೆ. ಹಿಂದೆಯೇ 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಸಂವಿಧಾನದ ಪರಿಕಲ್ಪನೆ ನೀಡಿದರು.

ವಚನಗಳಲ್ಲಿಯೇ ಕಾನೂನು ಅಡಗಿದೆ ವಚನಗಳು ಪಚನ ಮಾಡಿಕೊಂಡರೆ ಸಮೃದ್ಧ ಜೀವನ ನಮ್ಮದಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡುತ್ತಾ ಜೀವನದಲ್ಲಿ ಹಸಿವು, ಅವಮಾನ, ನೋವು, ಸೋಲು ಮತ್ತು ತಿರಸ್ಕಾರ ಕಲಿಸುವಷ್ಟು ಪಾಠ ಯಾವ ವಿದ್ಯಾಲಯವು ಕಲಿಸುವದಿಲ್ಲ. ಯಾವುದೇ ಸಮಸ್ಯೆ ಬಂದರೂ ಆತ್ಮವಿಶ್ವಾಸದೊಂದಿಗೆ ನಗುಮುಖದಿಂದ ಎದುರಿಸಿದರೆ ತಾನಾಗಿಯೇ ಸಮಸ್ಯೆ ಪರಿಹಾರವಾಗುತ್ತದೆ. ಹಲವಾರು ಹಾಸ್ಯ ಚಟಾಕಿಗಳೊಂದಿಗೆ ನೆರೆದವರನ್ನು ನಗಿಸುವುದರೊಂದಿಗೆ ಒತ್ತಡದ ಬದುಕಿನಿಂದ ದೂರ ಮಾಡಿದರು.

ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರರಾದ ಪ್ರಭುದೇವ ಯಳಸಂಗಿ, ಭೀಮಶಂಕರ ಮಾಡ್ಯಾಳ, ಶ್ರವಣಕುಮಾರ ಮಠ ಆಗಮಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶಿವಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಮದರಿ, ಹಣಮಂತರಾಯ ಅಟ್ಟೂರ, ಮಲ್ಲಿಕಾರ್ಜುನ ಬಿರಾದಾರ, ಸಂಗೀತಾ ಮೆನ್ಸಿ ಬೆಳಮಗಿ, ಅಂಬಾರಾಯ ಹಾಗರಗಿ, ರೇವಣಸಿದ್ದಯ್ಯ ಸ್ವಾಮಿ, ನ್ಯಾಯವಾದಿ ಮಹಾಬಳೇಶ್ವರ ಮಲ್ಕಪಗೊಳ, ಉಪನ್ಯಾಸಕರು, ವಿದ್ಯಾರ್ಥಿನಿಯರು, ಸಂಘದ ಸದಸ್ಯರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here