ಮಣಿಪುರ ಘಟನೆ ಖಂಡಿಸಿ AIDSO ಪ್ರತಿಭಟನೆ

0
69

ವಾಡಿ: ಇಂದು ಲಾಡ್ಲಪೂರ ಗ್ರಾಮದಲ್ಲಿ ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು AIDSO ಅತ್ಯಂತ ಉಗ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಈ ವೇಳೆ AIDSO ವಾಡಿ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ದೇವದುರ್ಗ ಮಾತನಾಡುತ್ತಾ, ನಡೆಯುತ್ತಿರುವ ಮಣಿಪುರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಗುಂಪು ಅತ್ಯಾಚಾರ ಎಸಗಿರುವ ಘಟನೆಯನ್ನು AIDSO ಅತ್ಯುಗ್ರವಾಗಿ ಖಂಡಿಸುತ್ತದೆ. ಈ ಘಟನೆಯು ನಮ್ಮಲ್ಲಿ ಅತೀವ ಸಂಕಟವನ್ನು ಉಂಟು ಮಾಡಿದೆ ಎಂದರು.

Contact Your\'s Advertisement; 9902492681

ಸಮುದಾಯದ ಹೆಸರಿನಲ್ಲಿ ಜನಗಳ  ಸಾಮೂಹಿಕ ಹತ್ಯೆ, ದಾಳಿಗಳು, ಅತ್ಯಾಚಾರ, ಗುಂಪು ಅತ್ಯಾಚಾರ ಇವುಗಳು ಮಣಿಪುರದಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡೆಬಿಡದೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳು, ಸಮುದಾಯಗಳ ನಡುವೆ ವಿಭಜನೆಯನ್ನು ಉಂಟು ಮಾಡಿ ಮಣಿಪುರ ಹೊತ್ತುರಿಯಲು ಕಾರಣವಾಗಿದೆ.

ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೇಶದ ಜನ ಆಘಾತಕ್ಕೆ ಒಳಗಾಗಿದ್ದಾರೆ. ಇಂತಹ ನೂರಾರು ಘಟನೆಗಳು ಈ ಹಿಂದೆ ಜರುಗಿವೆ ಎಂದು ಮಣಿಪುರದ ಮುಖ್ಯಮಂತ್ರಿ ನಾಚಿಕೆಯಿಲ್ಲದೆ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಅಮಾನವೀಯ ನಡವಳಿಕೆಗೆ ತುತ್ತಾದ ಹೆಣ್ಣುಮಗಳು, ಈ ಘಟನೆ ನಡೆಯುವಾಗ ನಮಗೆ ಪೊಲೀಸರಿಂದ ಸಹಾಯ ಸಿಗಲಿಲ್ಲ ಬದಲಿಗೆ, ಆರೋಪಿಗಳ ಕೈಗೆ ಅವರೇ ನಮ್ಮನ್ನು ಒಪ್ಪಿಸಿದರು ಎಂದು ಅತ್ಯಂತ ನೋವಿನಿಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಪ್ರಕ್ಷೋಭೆಯನ್ನು ಬಿಜೆಪಿ ಸರ್ಕಾರ ಹೇಗೆ ನಿಭಾಯಿಸಿದೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಸ್ಥಿತಿಯೇ ಸಾಕ್ಷಿಯಾಗಿದೆ. ಸರ್ಕಾರವು ತನ್ನ ಅಜೆಂಡಾವನ್ನು ಮುಂದುವರಿಸಲು, ವೈಷಮ್ಯವನ್ನು ಸೃಷ್ಟಿಸಿ, ಆ ಮೂಲಕ ಸಮುದಾಯಗಳ ನಡುವಿನ ವಿಭಜನೆಯನ್ನು ಪ್ರೋತ್ಸಾಹಿಸಿದ್ದಾರೆ. ಸರ್ಕಾರದಿಂದ ಸಾಂತ್ವನದ ಮಾತುಗಳು ಅತ್ಯಂತ ಸಾಮಾನ್ಯ ರೀತಿಯದ್ದಾಗಿದ್ದು, ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮುದಾಯದ ಹೆಸರಿನಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಿಂಸಾಚಾರಗಳು ಮಾನವೀಯತೆ ನಾಚಿಕೆ ಪಡುವಂತಹ ಸಂಗತಿಯಾಗಿದೆ. ಇವು ಸ್ವಯಂಪ್ರೇರಿತವಾಗಿ ನಡೆಯುವ ಘರ್ಷಣೆಗಳಲ್ಲ ಬದಲಿಗೆ ಆಳುವ ವರ್ಗದ ಕೈವಾಡ. ನೇತಾಜಿಯವರ ಐಎನ್‌ಎಯನ್ನು ಅಪಾರ ಗೌರವ ಮತ್ತು ದೇಶಭಕ್ತಿಯಿಂದ ಸ್ವಾಗತಿಸಿದ ರಾಜ್ಯ ಇಂತಹ ಸ್ಥಿತಿಗೆ ಬಂದಿರುವುದು ನೋವಿನ ಸಂಗತಿ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಐಎನ್‌ಎ ಸೈನಿಕರನ್ನು ಬೆಂಬಲಿಸಲು ಆ ನೆಲವು ಮಾನವೀಯತೆಯಿಂದ ಒಗ್ಗೂಡಿತ್ತು. ಇಂದಿಗೂ ದೇಶದ ಜನರು ನೇತಾಜಿಯನ್ನು ತಮ್ಮ ಹೃದಯದಲ್ಲಿ ಗೌರವಯುತವಾಗಿ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾನವತೆಯನ್ನು ಉಳಿಸಲು ಜನರೆಲ್ಲ ಮುಂದೆ ಬರಬೇಕೆಂದು  ಮನವಿ ಮಾಡಿದರು. ಜನರಲ್ಲಿ ಒಡಕುಗಳನ್ನು ಸೃಷ್ಟಿಸುವ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು AIDSO ಇಡೀ ಸಮಾಜಕ್ಕೆ ಕರೆ ನೀಡುತ್ತದೆ ಮತ್ತು ನಾಗರಿಕತೆಯನ್ನು ಉಳಿಸಲು ಮಣಿಪುರದ ಮಾನವೀಯತೆಯನ್ನು ಪ್ರೀತಿಸುವ ಜನರನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.

AIDSO ಜಿಲ್ಲಾ ಸಮಿತಿ ಸದಸ್ಯರಾದ ಗೋದಾವರಿ ಕಾಂಬಳೆ, ಸದಸ್ಯರಾದ ಸಿದ್ದಾರ್ಥ್ ತಿಪ್ಪನೂರ್, ವಿದ್ಯಾರ್ಥಿಗಳಾದ ಚೇತನ, ಭಾಗ್ಯಶ್ರೀ, ಭಾಗಮ್ಮ, ಮಲ್ಲಿಕಾರ್ಜುನ, ಆಕಾಶ, ಸಿಂದು, ಸಾಬಣ್ಣ, ಶಿವಲಿಲಾ ಹಾಗೂ ಮಹಿಳಾ ನಾಯಕರಾದ ಜಯಶ್ರೀ, ರೈತ ನಾಯಕರಾದ ಗುಂಡಣ್ಣ ಕುಂಬಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here