ಸಿಯುಕೆ; ಭಾರತೀಯ ಜ್ಞಾನ ವ್ಯವಸ್ಥೆ, ಸಂಶೋಧನೆಯ ಕ್ಷೇತ್ರದ ಎರಡು ದಿನಗಳ ಕಾರ್ಯಾಗಾರ

0
19

ಕಲಬುರಗಿ: “ಭಾರತವು ನಾಗರಿಕತೆಗಳ ಮತ್ತು ಶ್ರೀಮಂತ ಜ್ಞಾನ ವ್ಯವಸ್ಥೆಗಳ ನಾಡಾಗಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ್ ಹೇಳಿದರು.

ಇಂದು ಅವರು ಸಿಯುಕೆ ಆಯೋಜಿಸಿದ್ದ ‘ಭಾರತೀಯ ಜ್ಞಾನ ವ್ಯವಸ್ಥೆಗಳು ಗಮನಿಸಬೇಕಾದ ಸಂಶೋಧನೆಯ ಕ್ಷೇತ್ರಗಳು’ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಅವರು ಮುಂದುªರೆದು ಮಾತನಾಡಿ “ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಮತ್ತು ಅದರ ಮೌಲ್ಯವನ್ನು ತಿಳಿಯದೆ ಟೀಕಿಸುವುದು ಒಂದು ಶೋಕಿಯಾಗಿದೆ. ಟೀಕಿಸುವವರು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು ಎಂಬ ಕನಿಷ್ಠ ಪರಿಜ್ಞಾನ ಅವರಿಗಿಲ್ಲ. ವಿಶ್ವವಿದ್ಯಾನಿಲಯಗಳು ಎಲ್ಲಾ ಜ್ಞಾನ ವ್ಯವಸ್ಥೆಗಳ ಅಧ್ಯಯನ ಮತ್ತು ಸಂಶೋಧನೆಗೆ ಸೂಕ್ತ ಸ್ಥಳಗಳು. ಇಂದು ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ನಗರಗಳನ್ನು ಕಸದ ತೊಟ್ಟಿಗಳಾಗಿ ಮಾಡಿದ್ದೇವೆ. ಸಿಂಧೂ ಕಣಿವೆಯ ನಾಗರೀಕತೆಯನ್ನು ನೋಡಿದರೆ ಅವರ ನಗರ ಜೀವನವು ವ್ಯವಸ್ಥಿತವಾಗಿತ್ತು.

ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ, ಲೋಥಾಲ್ ಅಂತರರಾಷ್ಟ್ರೀಯ ವ್ಯಾಪಾರ ಬಂದರು, ಸುಸ್ಥಿರ ನೀರಾವರಿ ವ್ಯವಸ್ಥೆ, ನದಿಗಳು ಮತ್ತು ಸಣ್ಣ ನೀರಾವರಿ, ನದಿ ದಂಡೆಯ ಮೇಲೆ ನಗರಗಳ ನಿರ್ಮಾಣ ಎಲ್ಲವೂ ವ್ಯವಸ್ಥಿತ ಮತ್ತು ಸುಸ್ಥಿರವಾಗಿತ್ತು. ಇಂದು ನಾವು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ಅತೇಚ್ಚ ಭೂಮಿ ಮತ್ತು ಹಳ್ಳಿಗಳು ನೀರಿನಲ್ಲಿ ಮುಳುಗುವಂತೆ ಮಾಡಿದ್ದೇವೆÉ. ಗಾಂಧೀಜಿ ಹಳ್ಳಿಗಳಿಗೆ ಹೋಗಿ ಸ್ವಾವಲಂಬಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಎಂದರು.

ನಾವು ಏನು ಮಾಡಿದ್ದೇವೆ, ಹಳ್ಳಿಗಳನ್ನು ನಗರಗಳಿಗೆ ತಂದಿದ್ದೇವೆ. ಇದರಿಂದ Uನಗರಗಳು ಮಾಲಿನ್ಯ, ಕಸ, ಟ್ರಾಫಿಕ್, ನೀರಿನ ಕೊರತೆ ಮತ್ತು ಪರಿಸರ ಅವನತಿಯಿಂದ ಬಳಲುತ್ತಿವೆ. ಈ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರವನ್ನು ಒದಗಿಸುವ ನಮ್ಮ ಶ್ರೀಮಂತ ಜ್ಞಾನ ಪರಂಪರೆ ಮತ್ತು ಸಂಸ್ಕøತಿಯನ್ನು ನಾವು ಸಂಶೋಧಿಸಬೇಕು. ನಮ್ಮ ಪೂರ್ವಜರು ಅನೇಕ ತಲೆಮಾರುಗಳವರೆಗೆ ನಮ್ಮ ಸಮಾಜವನ್ನು ಸಂರಕ್ಷಿಸಿದ್ದಾರೆÀ ನಾವು ಅವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ” ಎಂದು ಅವರು ಹೇಳಿದರು.

ಕುಲಸಚಿವ ಪೆÇ್ರ.ರುದ್ರಗೌಡ ಆರ್ ಬಿರಾದಾರ್ ಮಾತನಾಡಿ, “ಭಾರತೀಯ ಜ್ಞಾನ ವ್ಯವಸ್ಥೆಯನ್ನು ಪಠ್ಯಕ್ರಮದೊಂದಿಗೆ ಸಂಯೋಜಿಸುವುದು ಎನ್‍ಇಪಿಯ ಪ್ರಮುಖ ಉದ್ದೇಶವಾಗಿದೆ. ನಮ್ಮ ಜ್ಞಾನ ಪರಂಪರೆ ಅತ್ಯಂತ ಶ್ರೀಮಂತವಾಗಿದೆ ಮತ್ತು ವೇದಗಳು ಮತ್ತು ವೈಜ್ಞಾನಿಕ ಚಿಂತನೆಯನ್ನು ಆಧರಿಸಿದೆ. ಬಡತನ, ಆಡಳಿತ, ಸಾಮಾಜಿಕ ಉದ್ವಿಗ್ನತೆ, ಅಭಿವೃದ್ಧಿಯಂತಹ ಇಂದಿನ ಸಮಸ್ಯೆಗಳನ್ನು ಅದರ ಮೂಲಕ ಪರಿಹರಿಸಬಹುದು. ನಾವು ಸಮರ್ಥನೀಯವಲ್ಲದ ಪಾಶ್ಚಿಮಾತ್ಯ ಮಾದರಿಗಳನ್ನು ಬಳಸುತ್ತಿದ್ದೇವೆ. ನಮ್ಮ ಜ್ಞಾನ ಪರಂಪರೆಯನ್ನು ಸಂಶೋಧಿಸಿ ದಾಖಲಿಸುವ ಅಗತ್ಯವಿದೆ. ನಾವು ನಮ್ಮ ಪಠ್ಯಕ್ರಮದಲ್ಲಿ ಇದನ್ನು ಅನ್ನು ಅಳವಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಕಾರ್ಯಾಗಾರದ ಸಂಚಾಲಕರಾದ ಪೆÇ್ರ.ಬಸವರಾಜ ಪಿ ಡೋಣೂರ್ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿ, ”ಐಕೆಎಸ್ ಬಗ್ಗೆ ಸ್ಪಷ್ಟತೆ ಅಗತ್ಯ. ನಾವು ಭಾರತೀಯರಾಗಿ ನಮ್ಮ ಸ್ವಂತ ಜ್ಞಾನ ಪರಂಪರೆ ಮತ್ತು ಮೌಲ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಗೌರವಿಸದಿದ್ದರೆ ಬೇರೆ ಯಾರು ಮಾಡುತ್ತಾರೆ? ನಮ್ಮ ಸ್ವಂತ ಜ್ಞಾನ ಪರಂಪರೆಯನ್ನು ನಿರ್ಲಕ್ಷಿಸುವುದು ಅಪರಾಧ ಮತ್ತು ಪ್ರಮಾದವಾಗುತ್ತದೆ. ನಮ್ಮಲ್ಲಿ ವ್ಯಾಸ, ಕಾಳಿದಾಸ, ನೃಪತುಂಗ ನಂತಹ ಅನೇಕರು ಜಾಗತಿಕ ಬರಹಗಾರರಿಗಿಂತ ಉತ್ತಮವಾಗಿದ್ದಾರೆ.

ಕಾರ್ಯಾಗಾರದ ಮುಖ್ಯ ಉದ್ದೇಶಗಳು ಭಾರತೀಯ ಜ್ಞಾನ ಪರಂಪರೆಯ ಮೇಲೆ ಬೆಳಕು ಚೆಲ್ಲುವುದು, ಇತರ ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಭಾರತೀಯ ಜ್ಞಾನ ಪರಂಪರೆಯ ಕುರಿತು ಸಂಶೋಧನೆಯ ಸಾಧ್ಯತೆ, ಪಠ್ಯಕ್ರಮದೊಂದಿಗೆ ಇದನ್ನು ಹೇಗೆ ಸಂಯೋಜಿಸುವುದು ಮತ್ತು ‘ಐಕೆಎಸ್ ಸಂಶೋಧನೆಗೆ ಹಣವನ್ನು ಒದಗಿಸುವ ವಿವಿಧ ಮೂಲಗಳನ್ನು ತಿಳಿದುಕೊಳ್ಳುವುದಾಗಿದೆ” ಎಂದರು.
ಮೊದಲ ತಾಂತ್ರಿಕ ಘೋಷ್ಠಿಯಲ್ಲ್ಲಿ ವಾರಣಾಶಿಯ ಐಐಟಿಯ ಪೆÇ್ರ.ವಿ ರಾಮನಾಥನ್ ಅವರು ‘ರಸಾಯನಶಾಸ್ತ್ರ, ವಸ್ತು ವಿಜ್ಞಾನ ಮತ್ತು ಲೋಹಶಾಸ್ತ್ರಕ್ಕೆ ಭಾರತ್ ಕೊಡುಗೆ’ ಕುರಿತು ಮಾತನಾಡಿದರು. ಜೆಎನ್‍ಯುನ ಪೆÇ್ರ. ಸಿ. ಉಪೇಂದ್ರರಾವ್, ಡಾ. ವೇಣುಗೋಪಾಲ್ ಹೇರೂರು ಮಾತನಾಡಿದರು.

ಡಾ.ಬಸವರಾಜ ಕುಬಕಡ್ಡಿ ಸ್ವಾಗತಿಸಿದರು, ಡಾ.ನಿತಿನ್ ಬಿ ಮತ್ತು ಡಾ.ಅಂಕಿತ್ ಸತ್ಪತಿ ಕಾರ್ಯಕ್ರಮ ನಿರೂಪಿಸಿದರು, ಡಾ.ಚೈತನ್ಯ ಆರ್.ಕೆ ವಂದಿಸಿದರು, ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ ನಾಕೋಡ್, ಡಾ.ಸ್ವಪ್ನಿಲ್ ಚಾಪೇಕರ್, ಕು.ವಿಜಯಲಕ್ಷ್ಮಿ ಜಂಗಮಶೆಟ್ಟಿ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು, ಎಲ್ಲಾ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here