ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು 100 ರಿಂದ 150ರ ವರೆಗೆ ಗ್ರಾಮ ಒನ್ ಕೇಂದ್ರಗಳು ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ವೀರಯ್ಯ ಎಸ್ ಹಿರೇಮಠ ಅವರು ಆರೋಪಿಸಿದರು.
ಈ ಕುರಿತು ರವಿವಾರ ಬೆಳಿಗ್ಗೆ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿಗೆ ಕಂಡರೂ ಕಾಣದ ರೀತಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ಹಣ ಪಡೆಯು ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಂಡು ಬಡಜನರಿಗೆ ಅನುಕೂಲವಾಗು ನಿಟ್ಟಿನಲ್ಲಿ ಕ್ರಮಕೈಗೊಂಡು ಹೆಚ್ಚಿನ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರಕಾರದ ಐದು ಮಹತ್ವಕಾಂಕ್ಷಿಯೋಜನೆಗಳ ಅಧಿಕಾರ ಬಂದತಕ್ಷಣವೇ ಮೂರು ಯೋಜನೆಗಳು ಜಾರಿಗೊಳ್ಳಿಸಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆದರೇ ಸೈಬರ್ ಕೇಂದ್ರ ಮತ್ತು ಸೇವಾ ಸಿಂದು ಹಾಗೂ ಸಿಎಸ್ಸಿ ಕೇಂದ್ರಗಳಲ್ಲಿ ಜನರಲ್ಲಿ ಬೇಕಾಬಿಟ್ಟಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿಕೊಂಡಿದೆ.
ಯೋಜನೆಗೆ ಅರ್ಜಿ ಹಾಕಲು ಜನರ ಜೇಬಿಗೆ ಕತ್ತರಿ ಬಿಳುವುದನ್ನು ತಪ್ಪಿಸಲು ರಾಜ್ಯ ಸರಕಾರ ನಿಯೋಚಿತ ಕೇಂದ್ರಗಳಲ್ಲಿ ಪ್ರಾರಂಭಿಸಿದೆ ಆದರೆ ಅಂತಹ ಕೇಲ ಕೇಂದ್ರಗಳಲ್ಲಿಯೂ ಹಣ ಪಡೆಯುತ್ತಿರುವ ಆರೋಪಗಳು ಆರೋಪಗಳು ಕೇಳಿಬರುತ್ತಿವೆ.
ಪ್ರಥಮವಾಗಿ ಶಕ್ತಿಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ಎರಡನೇದಾಗಿ 200ಯುನಿಟ್ ಗೃಹ ಜ್ಯೋತಿ ಯೋಜನೆ ಜಾರಿಗೊಳ್ಳಿಸಿತು. ರಾಜ್ಯದ ಬಹುತೇಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನೊಂದು ಮಹತ್ವಕಾಂಕ್ಷಿ ಯೋಜನೆಯ ಗೃಹ ಲಕ್ಷ್ಮಿ ಪಡಿತರ ಇರುವ ಮಹಿಳೆಯ ಖಾತೆಗೆ ನೇರವಾಗಿ 2000ರೂ ನೀಡಲು ಅರ್ಜಿ ಆಹ್ವಾನಿಸಿದೆ.