ಆಳಂದ; ತಾಲೂಕಿನ ಹೊದಲೂರ ಗ್ರಾ.ಪಂ.ನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮತ್ತೆ ಆಯ್ಕೆಯಾಗುವುದರ ಮೂಲಕ ಗೆಲುವಿನ ನಗೆ ಬೀರಿದರು.
ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಗಿರಿಮಲ್ಲ ರಾಠೋಡ, ಉಪಾಧ್ಯಕ್ಷರಾಗಿ ಶ್ರೀದೇವಿ ರಾಮಾನಂದ ಕಾಮಶೆಟ್ಟಿ, ಆಯ್ಕೆಯಾಗಿದ್ದಾರೆ. 21 ಸದಸ್ಯ ಬಲದ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಿರಿಮಲ್ಲ ರಾಠೋಡ, ರೂಪಾವತಿ ಪಾತ್ರೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ರಾಮಾನಂದ ಕಾಮಶೆಟ್ಟಿ, ಆಶಾ ಬೇಗಂ ನಾಮಪತ್ರ ಸಲ್ಲಿಸಿದ್ದರು.
ಗಿರಿಮಲ್ಲ ರಾಠೋಡ ಮತ್ತು ಶ್ರೀದೇವಿ ರಾಮಾನಂದ ಕಾಮಶೆಟ್ಟಿ ತಲಾ 16 ಮತ ಪಡೆದು ಗೆಲುವಿನ ನಗೆ ಬೀರಿದರು. ಚುನಾವಣಾಧಿಕಾರಿ ವಿಲಾಸರಾಜ್ ಪ್ರಸನ್ನ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶಮೂರ್ತಿ ಸಾಥ್ ನೀಡಿದರು.
ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಿಸಿದರು.
ಮುಖಂಡರಾದ ಭೀಮಾಶಂಕರ ಕಲಶೆಟ್ಟಿ, ರಮೇಶ ಮಂಠಾಳೆ, ಪ್ರಭುಲಿಂಗ ಪಾಟೀಲ ಸಿದ್ರಾಮಪ್ಪ ನೀಲೇಗಾರ, ಕಲ್ಯಾಣಿ ಮೂಲಗೆ, ವಿಜಯಾನಂದ ಕಾಮಶೆಟ್ಟಿ, ಗೌತಮ ಭುರಲೆ, ರವಿ ವಾಲಿಕಾರ, ಮಹಾದೇವ ಅಲಗೂಡೆ, ನಾಗರಾಜ ಪಾಟೀಲ, ಉಮೇಶ ಸ್ವಾಮಿ, ಮಹೇಶ ಖಜೂರೆ, ಧನರಾಜ ಮಂಠಾಳೆ, ಬಸವರಾಜ ಗಂಗನೆ, ಸಿದ್ದಾರಾಮ ಕರ್ಪೆ, ಸಿದ್ದಾರಾಮ ಅಲಗೂಡೆ, ಬಸವರಾಜ ಚಪ್ಟೆ, ಬಂಡಪ್ಪ ಬಾಲಖೇಡೆ, ಮಹೇಶ ಕವಲಗಾ, ರಾಮಾನಂದ ಕಾಮಶೆಟ್ಟಿ, ಮಹೇಶ ಪಾಟೀಲ, ಸಿದ್ದಾರಾಮ ಬನಶೆಟ್ಟಿ, ವೀರಭದ್ರ ಖೂನೆ, ಕುಮಾರೇಶ ಸ್ವಾಮಿ, ನಾಗರಾಜ ನೀಲೇಗಾರ, ದಯಾನಂದ ಮಾಳಗೆ, ಈಶ್ವರ ಮಂಠಾಳೆ, ಹಣಮಂತ ಕಲಶೆಟ್ಟಿ, ರಾಜೇಂದ್ರ ಕಾಮಶೆಟ್ಟಿ, ಸುನೀಲ ರಾಠೋಡ, ಸಂತೋಷ ಚವ್ಹಾಣ, ಶಿವರಾಮ ರಾಠೋಡ, ಶಿವಾಜಿ ಚವ್ಹಾಣ, ಸುರೇಶ ಚವ್ಹಾಣ ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.