ಸೇಡಂ: ಸೇಡಂ ಮತಕ್ಷೇತ್ರದ ಮಳಖೇಡ ರಾಜ್ಯಹೆದ್ದಾರಿಯ ಮಳಖೇಡ ಸೇತುವೆ ಕಾಮಗಾರಿ ಕಳೆದ 7 ರಿಂದ 8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇನ್ನೂ 15 ರಿಂದ 20 ಪ್ರತಿಶತದಷ್ಟು ಕಾಮಗಾರಿ ಇನ್ನೂ ಉಳಿದಿದ್ದು ಈ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಪ್ರಯಾಣಿಸಲು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಮಳಖೇಡ ಸೆತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿ ಈ ರಸ್ತೆ ಸೇಡಂನಿಂದ ಕಲಬುರಗಿ ಹಾಗೂ ಕಲಬುರಗಿಯಿಂದ ಹೈದ್ರಬಾದ ಕಲ್ಪಿಸುವ ಮುಖ್ಯ ರಸ್ತೆಆಗಿದ್ದು ದಿನನಿತ್ಯ ಸಾವಿರಾರು ಜನ ಈ ಸೇತುವೆ ಮೂಲಕ ಪ್ರಯಾಣಿಸುತ್ತಿದ್ದು ಮಳೆ ಬಂದಾಗ ಹಳೆ ಸೆತುವೆ ಸಂಪೂರ್ಣ ಮುಳುಗಡೆ ಆಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗೀತವಾಗುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಮಾಜಿ ಶಾಸಕರ ಹಾಗೂ ಈಗಿನ ಸಚಿವರ ಇಚ್ಛಾಶಕ್ತಿ ಕೊರತೆಯಿಂದ ಕಳೆದ 8 ವರ್ಷಗಳಿಂದ ಕಾಮಗಾರಿ ನಡೆಯುತ್ತಾನೆ ಇದೆ ಆದರೆ ಕಾಮಗಾರಿ ಪೂರ್ಣಗೋಳ್ಳುತ್ತಿಲ್ಲಾ.
ಕಳೆದ ಹಲವುತಿಂಗಳ ಹಿಂದೆ 80% ಕಾಮಗಾರಿ ಪೂರ್ಣಗೊಂಡಿದ್ದು ಮಳೆಗಾಲ ಬರುತ್ತಿರುವುದು ಗಮನದಲ್ಲಿಟ್ಟುಕೊಂಡರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬಹುದಾಗಿತ್ತು ಆದರೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲಾ. ಆದಕಾರಣ ಸರ್ಕಾರ ಆಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಕೂಡಲೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು 1 ವಾರದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಅದೀಕಾರಿಗಳಿಗೆ ಸೂಚಿಸಿ ಹೊಸ ಸೇತುವೆ ಮೇಲೆ ಸಾರ್ವಜನಿಕರಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ ಮೂಲಕ ಶಾಸ್ವತ ಪರಿಹಾರ ಕಲ್ಪಸಬೇಕು. ಒಂದು ವೇಳೆ ಕಾಮಗಾರಿ ಪೂರ್ಣಗೋಳಿಸದೆ ಹೊದ್ದಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಸ್ತಾನ ಮಳಖೇಡ, ದೇವಪ್ಪಾ, ಜಾವೀದ ,ಮೌಲನಾಸಾಬ್ ಉಪಸ್ಥಿತರಿದ್ದರು.