ಜ್ಞಾನ ಸಂಪತ್ತು ಬಹು ದೊಡ್ಡ ಆಸ್ತಿ: ಪೆÇ್ರ.ಸಿದ್ದು

0
15

ಶಹಾಬಾದ : ಭೌತಿಕ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹು ದೊಡ್ಡ ಆಸ್ತಿ. ವಿದ್ಯಾ ಸಂಪಾದನೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದು ನಾಡಿನ ಹೆಸರಾಂತ ಚಿಂತಕ ಮತ್ತು ಬರಹಗಾರ ಪೆÇ್ರ.ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ನಗರದ ಎಸ್.ಎಸ್.ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ,ವಿಕಾಸ ಅಕಾಡಮಿ ಶಹಾಬಾದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಶಹಾಬಾದ ಇವರ
ಸಹಯೋಗದಲ್ಲಿ ಹಮ್ಮಿಕೊಂಡಿದ್ದ ” ಜಾಗೃತಿ ಯಾತ್ರೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಕಲ್ಯಾಣ ಕರ್ನಾಟಕÀ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಶೇಷವಾದ ಪ್ರತಿಭೆ, ಜ್ಞಾನವಿದೆ. ಅದನ್ನು ಉತ್ತಮವಾದ ಬರಹ, ಆಕರ್ಷಕವಾದ ಮಾತಿನ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು. ಇಂದಿನ ಯುವ ಸಮುದಾಯ ಆಧುನಿಕ ತಂತ್ರಜ್ಞಾನಕ್ಕೆ ದಾಸರಾಗುವ ಮೂಲಕ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕಡಿಮೆ ಬಳಸಿ, ಹೆಚ್ಚಿನ ಸಮಯವನ್ನು ಪುಸ್ತಕಗಳ ಓದಿಗೆ ನೀಡಿ. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗಿ ನಿರ್ಮಾಣವಾಗುತ್ತೆ. ಬುದ್ಧ, ಬಸವ, ಅಂಬೇಡ್ಕರ ರವರ ಇತಿಹಾಸ ಪುರಷರನ್ನು ಆದರ್ಶವಾಗಿಟ್ಟುಕೊಂಡು ನಿಮ್ಮ ಇತಿಹಾಸವನ್ನು ನೀವು ನಿರ್ಮಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮರಗೋಳಾ ಕಾಲೇಜಿನ ಪ್ರಾಂಶುಪಾಲರಾದ ಕೆ.ಬಿ.ಬಿಲ್ಲವ ಅಧ್ಯಕ್ಷತೆ ವಹಸಿ ಮಾತನಾಡಿ, ಪ್ರತಿಯೊಬ್ಬರ ಅಭಿವೃದ್ಧಿಯಲ್ಲಿ ಆತ್ಮವಿಶ್ವಾಸ ತುಂಬ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಂಡು ಸಮಾಜಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕು, ಗಣ್ಯರಾದ ಅನೀಲಕುಮಾರ ಮರಗೋಳ, ಜಿಲ್ಲಾ ಸಂಚಾಲಕ ಶಂಕರ ಸುಲೇಗಾಂವ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಕೋಬಾಳ, ವಿಕಾಸ ಅಕಾಡೆಮಿ ತಾಲೂಕ ಅಧ್ಯಕ್ಷ ಕನಕಪ್ಪ ದಂಡಗುಲಕರ್ ವೇದಿಕೆ ಮೇಲೆ ಇದ್ದರು.

ಪೆÇ್ರೀ. ಜಗನ್ನಾಥ ಕಡೆಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಣ ಬಡಿಗೇರ ಪ್ರಾರ್ಥನಾಗೀತೆ ಹಾಡಿದರು, ಶಿವಶಂಕರ ಹಿರೇಮಠ ಸ್ವಾಗತಿಸಿದರು, ಶರಣು ವಸ್ತ್ರದ ನಿರೂಪಿಸಿದರು, ಮಲ್ಲಿಕಾರ್ಜುನ ಇಟಗಿ ವಂದಿಸಿದರು.

ಎಮ್.ಜೆ ಗೋಖಲೆ, ಜಿಆರ ಸ್ಥಾವರಮಠ, ಚಂದ್ರಶೇಖರ, ಡಾ.ಸೋಮಶೇಖರ, ಡಾ. ಶ್ರೀಮಂತ, ರಮೇಶ, ರಾಮಣ್ಣ ಇಬ್ರಾಹಿಂಪುರ, ಮಹ್ಮದ ಇರ್ಫಾನ, ಶಿವಕುಮಾರ ಕುಸಾಳೆ ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕದ ಯುವಕರು ಅದ್ಭುತ ಪ್ರತಿಭಾವಂತರು ನಿಜ. ಆದರೆ ಅವರಿಗೆ ಉತ್ತಮವಾದ ತರಬೇತಿ ಅಗತ್ಯವಿದೆ.ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣವನ್ನು ಕಲಿಯಬೇಕು ಧೈರ್ಯವಾಗಿ ಬದುಕುವ ಛಲವನ್ನು ಹೊಂದಬೇಕು. – ಪೆÇ್ರ.ಸಿದ್ದು ಯಾಪಲಪರವಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here