ಕಲಬುರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಂತೆ ಉಚಿತ ಯೋಜನೆಗಳು ಜಾರಿಗೆ ಮಾಡುತ್ತಿದೆ. ಆದರೆ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಉಚಿತ ಬಿಲ್‍ಗಳ ಮೇಲೆ ಯೋಜನೆ ಜಾಹೀರಾತು ನೀಡಲಿ ಆದರೆ ತೆರಿಗೆ ಕಟ್ಟುವ ವಾಣಿಜ್ಯ ಬಿಲ್ಲುಗಳ ಮೇಲೆ ಸರ್ಕಾರ ಉಚಿತ ಜಾಹೀರಾತು ಎಷ್ಟು ಸರಿ? ಕೂಡಲೆ ಅದನ್ನು ಹಿಂಪಡೆಯಬೇಕು ಎಂದು ಜೈ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಐದು ಉಚಿತ ಯೋಜನೆಗಳು ಘೋಷಣೆ ಮಾಡಿದೆ. ಅದರಂತೆ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕರ ಹಣ ಮೇಲೆ ಉಚಿತ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ಮಾಡುತ್ತಿದೆ. ಆದರೆ ವಾಣಿಜ್ಯ ವಿದ್ಯುತ್ ಸಂಪರ್ಕ ಹೊಂದಿದವರಿಗೆ ಯಾವುದೇ ಉಚಿತ ಯೋಜನೆಗಳು ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಧೀಡಿರನೆ ವಾಣಿಜ್ಯ ಸಂಪರ್ಕ ವಿದ್ಯುತ್ ಬಳಕೆದಾರರಿಗೆ ಬಿಲ್‍ನಲ್ಲಿ ಹೆಚ್ಚಳ ಮಾಡಿರುವುದು ಕೂಡ ಒಂದು ಕಡೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತದೆ ಎಂದು ಹೇಳುವ ರಾಜ್ಯದ ಇಂದಿನ ಕಾಂಗ್ರೆಸ್ ಸರ್ಕಾg,À ತಾವು ಇತರೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಲ್ಲವೇ? ಇದರಿಂದಾಗಿ ಪ್ರತಿಯೊಂದು ವಸ್ತುಗಳ ಮೇಲೆ ಬೆಲೆ ಏರಿಕೆ ತಾನಾಗಿಯೇ ಬರುವುದಿಲ್ಲವೇ? ಎಂದು ದೇವೇಂದ್ರ ದೇಸಾಯಿ ಕಲ್ಲೂರ ತಮ್ಮ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಚಿತ ಯೋಜನೆಗಳು ಜಾರಿಗೆ ಮಾಡುವುದು ಸರ್ಕಾರದ ವಿವೇಚನೆ ಬಿಟ್ಟಿದ್ದು, ಉಚಿತ ಯೋಜನೆಗಳು ಯಾರಿಗೆ ಲಾಭವಾಗುತ್ತವೆಯೋ ಅವರಿಗೆ ಅದರ ಅರಿವು ಮೂಡಿಸುವುದ ಸಹಜ. ಆದರೆ ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆದ ಸಾರ್ವಜನಿಕರಿಗೆ ಬಿಲ್‍ನ ಹಿಂಬದಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾಹೀರಾತು ಏಕೆ? ಸಾರ್ವಜನಿಕರು ಅದರಲ್ಲೂ ವಾಣಿಜ್ಯ ವಿದ್ಯುತ್ ಬಳಕೆದಾರರು ನೀಡುವ ಹೆಚ್ಚುವರಿ ಹಣದಿಂದ ಉಚಿತ ಯೋಜನೆ ಜಾರಿಗೆ ತಂದು ಅವರ ಬಿಲ್ ಮೇಲೆ ಜಾಹೀರಾತು ಹಾಕುವುದು ಖಂಡನೀಯವಾಗಿದೆ.
ಕೂಡಲೇ ರಾಜ್ಯ ಸರ್ಕಾರ ಹಾಗು ಎಸ್ಕಾಂಗಳು ಗಮನ ಹರಿಸಿ ವಾಣಿಜ್ಯ ವಿದ್ಯತ್ ಸಂಪರ್ಕ ಹೊಂದಿದ ಮೀಟರ್‍ಗಳ ಬಿಲ್‍ಗಳ ಪಟ್ಟಿಯ ಹಿಂಬದಿಯ ಜಾಹೀರಾತು ನಿಲ್ಲಿಸಬೇಕು. ಇಲ್ಲವಾದಲ್ಲಿ ವಾಣಿಜ್ಯ ಬಳಕೆದಾರರು ಹಾಗೂ ವೇದಿಕೆ ಕಾರ್ಯಕರ್ತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.