ಜೇವರ್ಗಿ ಬಸ್ ನಿಲ್ದಾಣದ ಡಬಾ ಅಂಗಡಿ, ತಳ್ಳು ಗಾಡಿಗಳ ತೆರವು ವಿರೋಧಿಸಿ ದೂರು

0
27

ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಡಬ್ಬಾ ಅಂಗಡಿಗಳನ್ನು ಮತ್ತು ತಳ್ಳುವ ಗಾಡಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ತೆರವುಗೊಳಿಸಿದ್ದು ಖಂಡನಾರ್ಹ ಎಂದು ಜೇವರ್ಗಿ ತಾಲ್ಲೂಕು ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಗೆ ದೂರು ಸಲ್ಲಿಸಿದರು.

ಸರ್ಕಾರದ ವಿವಿಧ ಯೋಜನೆಗಳ ಪ್ರಕಾರ ಪ್ರಯೋಜನ ಒದಗಿಸಿಕೊಡುವುದಕ್ಕೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಹಾಗೂ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014-2015 ಮತ್ತು 2019. 2020ರ ಅನ್ವಯ ಸೌಲಭ್ಯಗಳನ್ನು ನೆನೆಗುದಿಗೆ ಬಿದ್ದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಒತ್ತಾಯಿಸಿದರು. ಮಂಜೂರು ಮಾಡುವಂತೆ

Contact Your\'s Advertisement; 9902492681

ಜೇವರ್ಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಮು0ದೆ ಸುಮಾರು 25-30 ವರ್ಷಗಳಿಂದಲೂ ಸಣ್ಣ ಪುಟ್ಟ ವ್ಯಾಪಾರಿಗಳು ವ್ಯಾಪಾರದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಆದಾಗ್ಯೂ, ಕಳೆದ ಜುಲೈ 4ರಂದು ಪುರಸಭೆಯವರು ಪೆÇೀಲಿಸರ ಸಹಕಾರದಿಂದ ಯಾವುದೇ ಮುನ್ಸೂಚನೆ ನೀಡದೇ ಡಬ್ಬಾಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಹೀಗಾಗಿ ಆ ಬೀದಿ ವ್ಯಾಪಾರಿಗಳ ಕುಟುಂಬಗಳು ಬೀದಿಗೆ ಬಂದಿವೆ. ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ನಗರಸಭೆ ಮತ್ತು ಪುರಸಭೆಗಳಲ್ಲಿ ಕಾನೂನಾತ್ಮಕವಾಗಿ 2014-2015ರ ನಿಯಮಾವಳಿಗಳ ಪ್ರಕಾರ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳಿಗೆ ಬರುವಂತಹ ಮೂಲಭೂತ ಸೌಲಭ್ಯಗಳಲ್ಲಿ ಮೊದಲನೇಯದಾಗಿ ವ್ಯಾಪಾರ ನಡೆಯುವ ಸ್ಥಳದಲ್ಲಿ ಮಳಿಗೆಗಳನ್ನು ಕಟ್ಟಿಕೊಡುವಂತೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅವರು ಒತ್ತಾಯಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಅವರ ಕುಟುಂಬಗಳು ಉಪವಾಸ ಬೀಳುವಂತೆ ಮಾಡಿರುವ ತಹಸಿಲ್ದಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಉಪಜೀವನದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ ಜೇವರ್ಗಿ ಪುರಸಭೆ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಗನ್ನಾಥ್ ಸೂರ್ಯವಂಶಿ, ಸಚಿನ್ ಫರತಾಬಾದ್, ದತ್ತು ಭಾಸಗಿ, ಸಿದ್ದು ಜಮಾದಾರ್, ಸಲಿಂ ಭಾಗವಾನ್, ಶಂಕರಲಿಂಗ್ ಬಿ. ರೇವನೂರ್, ಇಮಾಮಸಾಬ್ ಮಿರ್ಚಿ, ಇಬ್ರಾಹಿಂ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here