ಕಮಲಾಪೂರ; ಓಕಳಿ ಗ್ರಾ.ಪಂ ಪಿಡಿಓ, ಅಧ್ಯಕ್ಷರ ವಜಾಕ್ಕೆ ಒತ್ತಾಯಿಸಿ ದೂರು

0
21

ಕಲಬುರಗಿ: ಕಮಲಾಪೂರ ತಾಲೂಕಿನ ಓಕಳಿ ಗ್ರಾಮ ಪಂಚಾಯತನಲ್ಲಿ 2022-23 ಮತ್ತು 2023- 24 ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಕಾಮಗಾರಿಯನ್ನು ಕೈಗೊಳ್ಳದ ಹಾಗೂ ಪರಿಕರಗಳನ್ನು ಖರೀದಿಸದ ಓಚರ್ ಸೃಜನ ಮಾಡಿ ಭಾರಿ ಅವ್ಯವಹಾರ ಮಾಡಿ ಹಣ ನಡೆಸಿರುವ ಪಿಡಿಓ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷೆ ವಿರದ್ಧ ಕ್ರಿಮಿಲ್ ಮೊಕದಮ್ಮೆ ದಾಖಲಿಸಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಓಕಳಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ಶೆಟ್ಟಿ ಹಾಗೂ ನ್ಯಾಯವಾದಿ ಮತ್ತು ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಖಾರ್ಜುನ ತಳಕೇರಿ ಜಂಟಿಯಾಗಿ ಕಮಲಾಪೂರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಿಡಿಓ ಕರ್ತವ್ಯಕ್ಕೆ ಹಾಜರಾದಾಗಿನಿಂದ ನಿಯಮ ಬಾಹಿರವಾಗಿ 2022-23 ಮತ್ತು 2023-24 ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಕಾಮಗಾರಿಯನ್ನು ಕೈಗೊಳ್ಳದ ಹಾಗೂ ಪರಿಕರಗಳನ್ನು ಖರೀದಿಸದ ಓಚರ್ ಸೃಜನೆ ಮಾಡಿ ಹಣ ಲಪಟಾಯಿಸಿ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಗಳು ಕೇಳಿ ಬರುತ್ತಿವೆ.

Contact Your\'s Advertisement; 9902492681

ಇವರು ಕರ್ವಕ್ಕೆ ಹಾಜರಾಗಿ ಕೇವಲ ಆರು (6) ತಿಂಗಳಲ್ಲಿಯೇ ಆಗಸ್ಟ್ ತಿಂಗಳ ವರೆಗೆ ರೂ.41,42,297.00 (ನಲವತ್ತೊಂದು ಲಕ್ಷದ ನಲವತ್ತೇರಡು ಸಾವಿರದ ಎರಡು ನೂರ ತೊಂಬತ್ತೇಳು) ರೂಪಾಯಿ ಹಣ ನಿಯಮಬಾಹಿರವಾಗಿ ಬೇಕಾಬಿಟ್ಟಿಯಾಗಿ ಪಾವತಿಸಿದ್ದಾರೆ ಎನ್ನಲಾಗಿದೆ.

ಕ್ರಿಯಾಯೋಜನೆಗೆ ಅನುಗುಣವಾಗಿ ಪಾವತಿಸದೆ ನೇರವಾಗಿ ಓಚರ ಸೃಜನೆ ಮಾಡಿ ಹಣ ಪಾವತಿಸಿರುತ್ತಾರೆ. ಹಾಗೂ ಯಾವ ಉದ್ದೇಶಕ್ಕೆ ಹಣ ಪಾವತಿಸಲಾಗಿ ಅಂತ ನಿಖರವಾಗಿ ಮಾಹಿತಿ ನೀಡದ ಪ್ರಶ್ನಾರ್ಥಕ ಚಿನ್ನ (ಉದಾ.????????) ಬಳಸಿದ್ದಾರೆ. ವಿಧಾನ ಸಭೆ ಚುನಾವಣಾ ನೀತಿ ಸಂಹಿತೆಯಲ್ಲಿಯೂ ಕೂಡ ನೀತಿ ಸಂಹಿತೆಯ ನಿಯಮಗಳನ್ನು ಉಲಂಘಿಸಿ ಹಣ ಪಾವತಿಸಿರುತ್ತಾರೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here