ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು: “ಹರ್ ಘರ್ ತಿರಂಗಾ” ಕಾರ್ಯಕ್ರಮ

0
76

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಡಿಯಲ್ಲಿ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಯಂಸೇವಕರಿಂದ ದೇಶಭಕ್ತಿ ಗೀತೆ ಕಾರ್ಯಕ್ರಮ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ರಾಷ್ಟ್ರಧ್ವಜದ ಮಹತ್ವ ಹಾಗೂ ಮನೆ ಮನೆಗೆ ರಾಷ್ಟ್ರ ದ್ವಜ ಎಂಬ ಅಭಿಯಾನ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ರಾ.ಸೇ.ಯೋ. ಕಾರ್ಯಕ್ರಮಾಧಿಅರಿಗಳಾದ ಡಾ.ಮಹೇಶ ಗಂವ್ಹಾರ ಅವರಿಗೆ ಧ್ವಜವನ್ನು ನೀಡುವದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ.ವೀಣಾ ಹೆಚ್, ಉಮಾ ರೇವುರ,ಡಾ.ಪ್ರೇಮಚಂದ ಚವ್ಹಾಣ, ಡಾ. ಮೋಹನರಾಜ ಪತ್ತಾರ,ಡಾ ಸುಭಾಸ ದೊಡ್ಮನಿ, ಶಿವಲೀಲಾ ಡಾ.ವಿಶ್ವನಾಥ ದೇವರಮನಿ, ಧೋತ್ರೆ, ಡಾ.ಶರಣಮ್ಮ ಕುಪ್ಪಿ ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರೇಣುಕಾ ಹಾಗರಗುಂಡಗಿ, ಸುಷ್ಮಾ ಕುಲಕರ್ಣಿ ಸಂಗಮೇಶ ತುಪ್ಪದ , ಸಿದ್ದಲಿಂಗ ಭಾಶಟ್ಟಿ ಮೊದಲಾದವರು ಭಾಗವಹಿಸಿದ್ದರು. ರಾ.ಸೇ.ಯೊ ಸ್ವಯಂ ಸೇವಕರಾದ ಗುನಾಜ್ ಬೇಗಂ,ಶೃತಿ,ವಿಂದ್ಯಾಶ್ರಿ ಹಾಗೂ ಸಂಗಡಿಗರು ದೇಶ ಭಕ್ತಿ ಗೀತೆಯನ್ನು ಹಾಡಿದರು.

Contact Your\'s Advertisement; 9902492681

ಸಂಗೀತ ವಿಭಾಗದ ಡಾ.ರೇಣುಕಾ ಹೆಚ್ ಹಾಗೂ ಡಾ.ಮುಖಿಮ್ ಮಿಯಾ ಹಾರ್ಮೋನಿಯಮ್ ಮತ್ತು ತಬಲಾ‌ ಸಾಥ ನೀಡಿದರು .ನಂತರ ಮಹಾವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರಲ್ಲಿ ರಾಷ್ಟ್ರ ಧ್ವಜದ ಮಹತ್ವ ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಕೊಳ್ಳಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here