ಕಲಬುರಗಿ: ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸೋಮವಾರ ವಿವಿಯ ಆವರಣದಲ್ಲಿ ಫ್ಲಾಶ್ ಮಾಬ್ ನಡೆಯಿತು. ಸುಮಾರು 40 ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಯ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ತದ ನಂತರ ಆವರಣದಲ್ಲಿ ಮೇರಾಥಾನ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಡೀನ್ ಡಾ ಸಿದ್ದೇಶ್, ಇಂಜಿನಿಯರಿಂಗ ಡೀನ ಡಾ ಮೊಹಮ್ಮದ ಅಜಾಮ, ಫ್ಲಾಶ್ ಮಾಬ್ ಕಾರ್ಯಕ್ರಮದ ಸಂಘಟಕರಾದ ಡಾ. ಮೊಹಮ್ಮದ ಅಬ್ದುಲ್ ಬಸೀರ್, ಅಫ್ರೋಜ ಫಾತಿಮಾ, ಡಾ ಖಾಜಾ ಅಜಿಜುದ್ದಿನ್ ಜುನೈದಿ, ಡಾ ಘಜಲ ಶಿರೀನ್ ಹಾಗೂ ವಿವಿಯ ಎಲ್ಲ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.