ವಿವಿಧ ಮೂರ್ತಿಗಳ ಪ್ರತಿಷ್ಠಾಪನೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಮನವಿ

0
21

ಸುರಪುರ: ನಗರದ ವಿವಿಧ ಕಡೆಗಳಲ್ಲಿ ಮಹನಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಮಿತಿಯಿಂದ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಮುಖಂಡರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ತಮಗೆ ಮನವಿ ಸಲ್ಲಿಸಿದಂತೆ ಈಗ ಮತ್ತೊಮ್ಮೆ ವಿನಂತಿಸುತ್ತಿದ್ದು,ನಗರದ ನಗರಸಭೆ ಮುಂಭಾಗದಲ್ಲಿ ಬಿ.ಬಸವಲಿಂಗಪ್ಪನವರ ಪುತ್ಥಳಿ ಪ್ರತಿಷ್ಠಾಪಿಸಬೇಕು,ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ರಾಜಾ ಕುಮಾರ ನಾಯಕ ಅವರ ಮೂರ್ತಿ ಪ್ರತಿಷ್ಠಾಪಿಸಬೇಕು,ತಹಸೀಲ್ದಾರ್ ಕಚೇರಿ ಮತ್ತು ಬಿ.ಇ.ಓ ಕಚೇರಿಗೆ ಹೋಗುವ ರಸ್ತೆಗಳ ಮಧ್ಯದಲ್ಲಿ ರಾಜಾ ಪಿಡ್ಡನಾಯಕರ ಮೂರ್ತಿ,ನ್ಯಾಯಾಲಯದ ಮುಂಭಾಗದಲ್ಲಿ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕರ ಮೂರ್ತಿ,ಕುಂಬಾರಪೇಠ ಕ್ರಾಸ್‍ನಲ್ಲಿ ಡಾ:ಬಿ.ಆರ್ ಅಂಬೇಡ್ಕರ್ ಮೂರ್ತಿ,ಕಕ್ಕೇರ ಪಟ್ಟಣದಲ್ಲಿ ನಮ್ಮ ಕ್ಷೇತ್ರದ ಪ್ರಥಮ ಶಾಸಕ ಕೂಲೂರ ಮಲ್ಲಪ್ಪನವರ ಮೂರ್ತಿ,ಲಕ್ಷ್ಮೀಪುರ ಗ್ರಾಮದ ಕ್ರಾಸ್‍ನಲ್ಲಿ ಡಾ:ಬಾಬು ಜಗಜೀವನರಾಮ್ ಮೂರ್ತಿ,ನಗರದ ಬೋವಿಗಲ್ಲಿಯಲ್ಲಿ ಅಂಬೆಗರ ಚೌಡಯ್ಯನವರ ಮೂರ್ತಿ,ನಗರದ ದೋಬಿ ಮೊಹಲ್ಲಾದಲ್ಲಿ ಮಡಿವಾಳ ಮಾಚಿದೇವರ ಮೂರ್ತಿ ಪ್ರತಿಷ್ಠಾಪಿಸುವಂತೆ ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಬಾದ್ಯಾಪುರ ಗ್ರಾಮದಲ್ಲಿ ದಲಿತ ಸಮುದಾಯ ಕುಟಂಬದ ಆಸ್ತಿಯನ್ನು ಮಾಜಿ ಸೈನಿಕರೊಬ್ಬರು ಕಬಳಿಸಿದ್ದು ಅದನ್ನು ಮರಳಿ ದಲಿತ ಕುಟುಂಬಕ್ಕೆ ಭೂಮಿ ಕೊಡಿಸುವಂತೆ ಹಾಗೂ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರೋ:ಮಾನು ಗುರಿಕಾರ,ರವಿಚಂದ್ರ ಬೊಮ್ಮನಹಳ್ಳಿ,ಮಾನಪ್ಪ ಬಿಜಾಸಪುರ,ಮಲ್ಲಿಕಾರ್ಜುನ ತಳ್ಳಳ್ಳಿ,ರಾಮಣ್ಣ ಶೆಳ್ಳಗಿ,ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ,ಖಾಜಾಹುಸೇನ್ ಗುಡಗುಂಟಿ,ಜೆಟ್ಟೆಪ್ಪ ನಾಗರಾಳ,ಬುದ್ಧಿವಂತ ನಾಗರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here