ಸುರಪುರ: ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಿ

0
7

ಸುರಪುರ: ತಾಲೂಕಿನಾದ್ಯಂತ ಪ್ಲಾಸ್ಟಿಕ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.

ಸಂಘಟನೆ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ನಗರದ ಬುದ್ಧ ವಿಹಾರ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿವೆ,ಇದರಿಂದ ಪರಿಸರ ಹಾಳಾಗುತ್ತಿದೆ.ಆದ್ದರಿಂದ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಮತ್ತು ತಾಲುಕಿನಾದ್ಯಂತ ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ಕಪ್‍ಗಳಲ್ಲಿ ಚಹಾ ಕೊಡುವುದನ್ನು ತಡೆಯಬೇಕು ಮತ್ತು ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಪ್ರತಿಭಟನೆ ನೆಡಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿಜಯಕುಮಾರ ಕೆ ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟೆನೆಯ ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ,ರವಿಚಂದ್ರ ಬೊಮ್ಮನಹಳ್ಳಿ,ಬುದ್ಧಿವಂತ ನಾಗರಾಳ,ಯಲ್ಲಪ್ಪ ಚಿನ್ನಾಕಾರ,ಮಾನಪ್ಪ ಬಿಜಾಸಪುರ,ಪ್ರೋ. ಮಾನು ಗುರಿಕಾರ,ರಾಮಣ್ಣ ಶೆಳ್ಳಗಿ,ಮೂರ್ತಿ ಬೊಮ್ಮನಹಳ್ಳಿ,ರೇವಣಸಿದ್ದಪ್ಪ ಎಸ್.ಮಾಲಗತ್ತಿ,ಖಾಜಾ ಹುಸೇನ್ ಗುಡಗುಂಟಿ,ಮುತ್ತುರಾಜ ಹುಲಿಕೇರ,ಮಹೇಶ ಸುಂಗಲಕರ್,ಹುಲಗಪ್ಪ ಜಾಂಗೀರ,ಪರಮಣ್ಣ ಕಕ್ಕೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here