ಸಾರ್ವಜನಿಕರ ಕುಂದುಕೊರತೆಗಳಿಗಾಗಿ “ಕಲಬುರಗಿ ಕನೆಕ್ಟ್” ವೆಬ್ ಸೈಟ್: ಸಚಿವ ಪ್ರಿಯಾಂಕ್ ಖರ್ಗೆ

0
31

ಕಲಬುರಗಿ: ಸಾರ್ವಜನಿಕರು ತಮ್ಮ‌ ಕುಂದುಕೊರತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆನ್ ಲೈನ್ ಮೂಲಕ ಸಲ್ಲಿಸುವ ಉದ್ದೇಶದಿಂದ ಕಲಬುರಗಿ ಕನೆಕ್ಟ್ ಎನ್ನಜವ ವೆಬ್ ಸೈಟ್ ನ್ನು ಇಂದು ಲಾಂಚ್ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಬುರಗಿ ಕನೆಕ್ಟ್ ವೆಬ್ ಸೈಟ್ ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಈ ವೆಬ್ ಸೈಟ್ ಮೂಲಕ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತಮ್ಮ ಅರ್ಜಿಗಳನ್ನು QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಸಲ್ಲಿಸುವ ಬದಲು ಆನ್ ಲೈನ್ ಮೂಲಕ QR code ನಲ್ಲಿ ಸ್ಕ್ಯಾನ್ ಮಾಡಿ ಈ ವೆಬ್ ಸೈಟ್ ನಲ್ಲಿ ಸಲ್ಲಿಸಿದಾಗ ಆ ಕುಂದುಕೊರತೆ ಅರ್ಜಿ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬರುತ್ತದೆ. ಆ ನಂತರ ಸಂಬಂಧಪಟ್ಟ ಇಲಾಖೆ ಅರ್ಜಿ ರವಾನಿಸಲಾಗುತ್ತದೆ. ಸಾರ್ವಜನಿಕರು ಹಾಗೆ ಸಲ್ಲಿಸಿದ‌ ಅರ್ಜಿಯ ವಸ್ತುಸ್ಥಿತಿಯನ್ನು ಅರಿಯಲು ಅರ್ಜಿಯ ಸಂಖ್ಯೆಯನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದರೆ ವಿವರ ಲಭ್ಯವಾಗಲಿದೆ ಎಂದರು.

ಕಲಬುರಗಿ ಕನೆಕ್ಟ್ ವೆಬ್ ಸೈಟ್ ನ ಮೂಲಕ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಹರಿಸಲು ಅಥವಾ ವಿಲೇವಾರಿ ಮಾಡಲು 70 ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಪ್ರಯತ್ನ ಪ್ರಾಮಾಣಿಕವಾಗಿದ್ದು ಸರ್ಕಾರದ‌ ಸೌಲಭ್ಯವನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಈ ವೆಬ್ ಸೈಟ್ ಮೂಲಕ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರಲ್ಲಿ ಕೆಲವರು ಅನಾವಶ್ಯಕ ಅರ್ಜಿ ಸಲ್ಲಿಸಿದರೂ ಕೂಡಾ ಈ ಬಗ್ಗೆ ಎಸ್ ಎಮ್ ಎಸ್ ಮೂಲಕ‌ ಅರ್ಜಿಯ ವಸ್ತುಸ್ಥಿತಿಯ ಬಗ್ಗೆ ತಿಳಿಸಲಾಗುವುದು.

ಜಿಲ್ಲಾಪಂಚಾಯತ್ ಸಿಇಓ ಹಾಗೂ ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ವೆಬ್ ಸೈಟ್ ನಲ್ಲಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ನೋಡಬಹುದಾಗಿದೆ ಎಂದ ಸಚಿವರು ಈ ವೆಬ್ ಸೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಾಲಾವಕಾಶ ಬೇಕಾಗುತ್ತದೆ. ಈ ರೀತಿಯ ವೆಬ್ ಸೈಟ್ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ. ಸಚಿವನಾಗಿ ನಾನು ಮೇಲುಸ್ತುವಾರಿ ನೋಡಿಕೊಳ್ಳುತ್ತೇನೆ. ಹಾಗಾಗಿ, ಪ್ರತಿಯೊಂದು ಅರ್ಜಿಗಳನ್ನು ನಾನು ಕುಲೂಂಕುಷವಾಗಿ ಪರಿಶೀಲನೆ ನಡೆಸುತ್ತೇನೆ ಎಂದು ಸಚಿವರು ವಿವರಿಸಿದರು.

‘ಜನಸ್ಪಂದನ’ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಆಲೋಚಿಸಲಾಗುತ್ತಿದೆ ಎಂದ ಸಚಿವರು ಪ್ರತಿ ತಾಲೂಕಿನ ತಹಸೀಲ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಲಾಗುವುದು ಎಂದರು.

ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ವಿಧಾನಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಎಸ್ ಪಿ ಇಶಾ ಪಂತ್, ಸಿಇಓ ಭಂವರ್ ಕುಮಾರ ಮೀನಾ, ಕಮಿಷನರ್ ಆರ್ ಚೇತನ್, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here