ಕಾರ್ಯಕರ್ತನ ಮೇಲೆ ದಾಖಲಾಗಿರುವ ಕೇಸ್ ರದ್ದುಗೊಳಿಸಲು ಮನವಿ

0
15

ಸುರಪುರ: ತಾಲೂಕಿನ ಕಕ್ಕೇರ ಪಟ್ಟಣದ ತಮ್ಮ ಸಂಘಟನೆಯ ಕಾರ್ಯಕರ್ತನ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.

ನಗರದಲ್ಲಿನ ಪೊಲೀಸ್ ಠಾಣೆಯಲ್ಲಿನ ಸುರಪುರ ಪೊಲೀಸ್ ಉಪ ವಿಭಾಗದ ಉಪಾಧಿಕ್ಷಕ ಜಾವಿದ್ ಇನಾಂದಾರ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು,ಕಕ್ಕೇರ ಪಟ್ಟಣದಲ್ಲಿನ ಬೃಂದಾ ಗ್ಯಾಸ್ ಏಜೆನ್ಸಿಯವರು ಸರಿಯಾಗಿ ಗ್ಯಾಸ್ ವಿತರಣೆ ಮಾಡದೆ ಇರುವುದರಿಂದ ನಮ್ಮ ಸಂಘದ ಕಾರ್ಯಕರ್ತ ಪರಮಣ್ಣ ಎನ್ನುವವರು ಬೃಂದಾ ಗ್ಯಾಸ್ ಏಜೆನ್ಸಿಯವರಿಗೆ ಸರಿಯಾಗಿ ಗ್ಯಾಸ್ ವಿತರಿಸುವಂತೆ ತಿಳಿಸಲು ಹೋದಾಗ ಅವಾಚ್ಯವಾಗಿ ನಿಂದಿಸಿದ್ದಾರೆ.ಅಲ್ಲದೆ ಪರಮಣ್ಣ ಮತ್ತು ಆತನ ಪತ್ನಿಯ ಮೇಲೆ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ.ಇದರ ಕುರಿತು ಕೊಡೇಕಲ್ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ನಮ್ಮ ಕಾರ್ಯಕರ್ತ ಪರಮಣ್ಣನಿಗೆ ಪಿ.ಎಸ್.ಐ ಶ್ರೀಶೈಲ ನಿಂದಿಸಿ ಕಳುಹಿಸಿದ್ದರು, ಅಲ್ಲದೆ ನಮ್ಮ ಕಾರ್ಯಕರ್ತನ ಮೇಲೆಯೇ ಕಲಂ 110ರ ಅಡಿ ಪ್ರಕರಣ ದಾಖಲಿಸಿದ್ದರು.ನಂತರ ನಾವು ಎಸ್ಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ದೂರು ಪಡೆದಿದ್ದರು.ಆದರೆ ಈಗ ಶ್ರೀಶೈಲ ಎನ್ನುವ ಪಿ.ಎಸ್.ಐ ಈಗ ವರ್ಗಾವಣೆಯಾಗಿ ಹೋಗಿದ್ದಾರೆ.ಕೂಡಲೇ ಪರಮಣ್ಣನ ಮೇಲೆ ದಾಖಲಿಸಿರುವ ಸುಳ್ಳು ಕೇಸ್ ರದ್ದುಗೊಳಿಸಬೇಕು ಮತ್ತು ಬೃಂದಾ ಗ್ಯಾಸ್ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಡಿವೈಎಸ್ಪಿ ಜಾವಿದ್ ಇನಾಂದಾರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ,ಮುಖಂಡರಾದ ಪ್ರೋ:ಮಾನು ಗುರಿಕಾರ,ರವಿಚಂದ್ರ ಬೊಮ್ಮನಹಳ್ಳಿ,ಮಾನಪ್ಪ ಬಿಜಾಸಪುರ,ಯಲ್ಲಪ್ಪ ಚಿನ್ನಾಕಾರ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ಮೂರ್ತಿ ಬೊಮ್ಮನಹಳ್ಳಿ,ರೇವಣಸಿದ್ದ ಮಾಲಗತ್ತಿ,ಖಾಜಾಹುಸೇನ್ ಗುಡಗುಂಟಿ,ಮರಿಯಪ್ಪ ಕಾಂಗ್ರೆಸ್,ಮರಿಲಿಂಗಪ್ಪ ನಾಟೇಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here