ಭ್ರಷ್ಟಾಚಾರ ಮಾಡಿರುವ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳಿ; ಮಲ್ಲಿಕಾರ್ಜುನ ಕ್ರಾಂತಿ

0
27

ಸುರಪುರ: ಎರಡನೇ ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ನೇಮಕಗೊಳಿಸುವ ಮುನ್ನ ಇದ್ದ ಅಧ್ಯಕ್ಷರು ಹಾಗೂ ಪಿ.ಡಿ.ಓಗಳು ಸೇರಿ ಗ್ರಾಮ ಪಂಚಾಯತಿಗಳಲ್ಲಿನ ಹಣ ಲಪುಟಾಯಿಸಿದ್ದು ಅಂತಹ ಪಿ.ಡಿ.ಓಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ,ಮೊದಲನೇ ಅವಧಿ ಮುಗಿದ ಅಧ್ಯಕ್ಷರು ಎರಡನೇ ಅವಧಿಯವರು ಬರುವ ಮುನ್ನ ಕೆಲವೇ ದಿನಗಳಲ್ಲಿ ಇಂತಹ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ,ಇದಕ್ಕೆ ಒಂದು ಉದಾಹರಣೆ ಎಂದರೆ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿಯಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಡ್ರಾ ಮಾಡಲಾಗಿದೆ,ಇಂತಹ ಭ್ರಷ್ಟಾಚಾರ ದಿಂದ ಸರಕಾರಕ್ಕೂ ದೊಡ್ಡ ನಷ್ಟವುಂಟಾಗಿದೆ,ಅಲ್ಲದೆ ಗ್ರಾಮಗಳ ಅಭಿವೃಧ್ಧಿಯೂ ಕುಂಠಿತವಾಗಿವೆ.ಆದ್ದರಿಂದ ಕೂಡಲೇ ಎಲ್ಲಾ ಪಂಚಾಯತಿಗಳಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಇದೇ 25ನೇ ತಾರಿಖು,ಸುರಪುರ ತಾಲೂಕು ಪಂಚಾಯತಿಗೆ,ಸಪ್ಟೆಂಬರ್ 1ರಂದು ಹುಣಸಗಿ ತಾಲೂಕು ಪಂಚಾಯತಿಗೆ,ಸಪ್ಟೆಂಬರ್ 11 ರಂದು ಶಹಾಪುರ ತಾಲೂಕು ಪಂಚಾಯತಿಗೆ,ಸಪ್ಟೆಂಬರ್ 18 ರಂದು ವಡಗೇರ ತಾಲೂಕು ಪಂಚಾಯತಿಗೆ,ಸಪ್ಟೆಂಬರ್ 24 ರಂದು ಯಾದಗಿರಿ ತಾಲೂಕು ಪಂಚಾಯತಿಗೆ ಹಾಗೂ ಆಕ್ಟೋಬರ್ 3ರಂದು ಗುರುಮಠಕಲ್ ತಾಲೂಕು ಪಂಚಾಯತಿಗೆ ಮುುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ,ಮುಖಂಡರಾದ ಪ್ರೋ:ಮಾನು ಗುರಿಕಾರ,ರವಿಚಂದ್ರ ಬೊಮ್ಮನಹಳ್ಳಿ,ಮಾನಪ್ಪ ಬಿಜಾಸಪುರ,ಯಲ್ಲಪ್ಪ ಚಿನ್ನಾಕಾರ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ಮೂರ್ತಿ ಬೊಮ್ಮನಹಳ್ಳಿ,ರೇವಣಸಿದ್ದ ಮಾಲಗತ್ತಿ,ಖಾಜಾಹುಸೇನ್ ಗುಡಗುಂಟಿ,ಮರಿಯಪ್ಪ ಕಾಂಗ್ರೆಸ್,ಮರಿಲಿಂಗಪ್ಪ ನಾಟೇಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here