ಕಲಬುರಗಿ: ಖಜೂರಿ ಭಾಗದ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿರುವ ಚಿರತೆಯನ್ನು ಸೆರೆ ಹಿಡಿದು ಜನರ ನೆಮ್ಮದಿಯನ್ನು ಕಾಪಾಡಬೇಕೇಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ವಾರದಿಂದ ಖಜೂರಿ ವ್ಯಾಪ್ತಿಯ ಜನರು ಭಯದಿಂದ ಬದುಕುತಿದ್ದಾರೆ ಇದು ಸುಗ್ಗಿಯ ದಿನವಾಗಿರುವುದರಿಂದ ರೈತಾಪಿ ವರ್ಗದವರು ಹೊಲ ಗದ್ದೆಗಳಿಗೆ ಹೋಗಿ ಬರಲು ಭಯ ಪಡುತ್ತಿದ್ದಾರೆ ಆದ್ದರಿಂದ ಅರಣ್ಯ ಇಲಾಖೆಯವರು ವಿಶೇಷ ತಂಡ ರಚನೆ ಮಾಡಿ ಶೀಘ್ರದಲ್ಲಿ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ಚಿರತೆ ಪತ್ತೆಯಾದಾಗಿನಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೂ ಕಳುಹಿಸಲು ಹೆದರುತ್ತಿದ್ದಾರೆ. ಚಿರತೆ ಪ್ರತಿ ದಿನ ಒಂದೊಂದು ಊರಲ್ಲಿ ಕಂಡು ಬರುತ್ತಿರುವುದರಿಂದ ಆಯಾ ಗ್ರಾಮದ ಜನ ಭಯದಲ್ಲೇ ಬದುಕುತ್ತಿದ್ದಾರೆ ಅಲ್ಲದೇ ಜನಗಳು ಕೂಡ ಎಚ್ಚರಿಕೆಯಿಂದ ಇರುವಂತೆ ಗ್ರಾಮಗಳ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.